ETV Bharat / sitara

'ಪದ್ಮಿನಿ' ವಿರುದ್ಧ ಕೃತಿಚೌರ್ಯ ಆರೋಪ...ಮೌನ ಮುರಿದ ನಟ ಜಗ್ಗೇಶ್​ - ನಟ ಜಗ್ಗೇಶ್

ನವರಸ ನಾಯಕ ಜಗ್ಗೇಶ್​ ನಟನೆಯ ಪ್ರೀಮಿಯರ್​ ಪದ್ಮಿನಿ ಸಿನಿಮಾ ವಿರುದ್ಧ ಈಗ ಕೃತಿಚೌರ್ಯ ಆರೋಪ ಕೇಳಿ ಬಂದಿದೆ. ಚಿತ್ರದಲ್ಲಿ ಬರುವ ನಂಜುಂಡಿ ಪಾತ್ರ ವಸುದೇಂದ್ರ ಚಂದ್ರ ಅವರ ವರ್ಣಮಯ ಕಾದಂಬರಿಯಿಂದ ಕದಿಯಲಾಗಿದೆ ಎನ್ನಲಾಗುತ್ತಿದೆ.

ಚಿತ್ರಕೃಪೆ : ಟ್ವಿಟ್ಟರ್​
author img

By

Published : May 11, 2019, 5:54 PM IST

'ಪದ್ಮಿನಿ' ಕಳುವು ಮಾಡಿದ ಕಥೆ ಎಂದು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಚಿತ್ರದ ನಿರ್ದೇಶಕ ರಮೇಶ್​​ ಇಂದಿರಾ ವಿರುದ್ಧ ಹಿರಿಯ ಸಾಹಿತಿ, ಲೇಖಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಲೇಖಕರಿಗೆ ಕೃಜ್ಞತೆ ಸಲ್ಲಿಸುವ ಸೌಜನ್ಯತೆಯೂ ನಿರ್ದೇಶಕರಿಗೆ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಫೇಸ್​​ಬುಕ್​ನಲ್ಲಿ ನಿರ್ದೇಶಕರ ವಿರುದ್ಧ ವಸುದೇಂದ್ರ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

“ಪ್ರೀಮಿಯರ್‌ ಪದ್ಮಿನಿ” ಸಿನಿಮಾದಲ್ಲಿರುವ ನಂಜುಂಡಿ ಪಾತ್ರವು ನನ್ನ “ವರ್ಣಮಯ” ಪುಸ್ತಕದಲ್ಲಿರುವ ಸುದೀರ್ಘ ಪ್ರಬಂಧ “ನಂಜುಂಡಿ” ಯಿಂದ ತೆಗೆದುಕೊಂಡಿದ್ದು. ಅದರ ಬಹುತೇಕ ವಿವರಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ನಿರ್ದೇಶಕರು ಮೊದಲಿಗೆ ನನ್ನನ್ನು ಭೇಟಿಯಾಗಿ, ನನ್ನ ಎರಡು ಪ್ರಬಂಧಗಳನ್ನು ಬಳಸಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಸಂಭಾವನೆಯನ್ನೂ ನಿಗದಿ ಪಡಿಸಲಾಗಿತ್ತು. ಅನಂತರ ಕರಾರು ಪತ್ರವನ್ನು ಶುಭದಿನದಂದು ಮಾಡಿಕೊಳ್ಳೋಣ ಎಂದು ಹೇಳಿ ಹೋದವರು ಮತ್ತೆ ವಾಪಾಸಾಗಲಿಲ್ಲ. ಸಿನಿಮಾ ಬಿಡುಗಡೆಗೆ ಮುಂಚೆ ಕರೆ ಮಾಡಿ, “ಸಿನಿಮಾ ಮಾಡಿಬಿಟ್ಟೆ ಸಾರ್. ಆ ಪ್ರಬಂಧದ ಪ್ರೇರಣೆ ನನಗೆ ಸಾಕಷ್ಟಿದೆ. ಅದನ್ನು ಟೈಟಲ್‌ ಕಾರ್ಡ್‌ನಲ್ಲಿ ಹಾಕಬಹುದೆ?” ಎಂದು ವಿಚಾರಿಸಿದರು. ನನ್ನ ಒಪ್ಪಿಗೆ ಇಲ್ಲದೆ ಸಿನಿಮಾ ಆಗಿರುವುದು ನನಗೆ ಇಷ್ಟವಾಗಲಿಲ್ಲ. “ಪ್ರೇರಣೆಯನ್ನು ಪಡೆದುಕೊಂಡಿದ್ದರೆ ನನಗೆ ಸಮಸ್ಯೆಯಿಲ್ಲ. ಆದರೆ ಪ್ರಬಂಧದ ದೃಶ್ಯಗಳನ್ನು ತೆಗೆದಕೊಳ್ಳುವಂತಿಲ್ಲ. ಯಾವುದೋ ಮತ್ತೊಂದು ಕತೆಯ ಭಾಗವಾಗಿ ನನ್ನ ಪಾತ್ರಗಳು ಬರುವುದು ನನಗೆ ಇಷ್ಟವಿಲ್ಲ” ಎಂದು ಹೇಳಿದ್ದೆ. ಅನಂತರ ಅವರು ಸುಮ್ಮನಾಗಿಬಿಟ್ಟರು. ಈಗ ಸಿನಿಮಾದಲ್ಲಿ ಬಹುತೇಕ “ನಂಜುಂಡಿ” ಪಾತ್ರದ ದೃಶ್ಯಗಳು ನನ್ನ ಪ್ರಬಂಧದಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ ಎಂದು ವಸುದೇಂದ್ರ ಬರೆದುಕೊಂಡಿದ್ದಾರೆ.

ಇನ್ನು ಸಿನಿಮಾದ ಬಹುತೇಕ ಮಂದಿಗೆ ಲೇಖಕರು ಮತ್ತು ಕತೆಗಾರರ ಬಗ್ಗೆ ಇರುವ ಅಲಕ್ಷ್ಯ ಈ ಘಟನೆಯಿಂದ ಗೊತ್ತಾಗುತ್ತದೆ. ಇಲ್ಲಿ ಸಮಸ್ಯೆ ಇರುವುದು ಹಣದ್ದಲ್ಲ. ಅಂತಹ ದೊಡ್ಡ ಹಣದ ವ್ಯವಹಾರವೇನೂ ಸಾಹಿತಿಗಳ ಮಧ್ಯೆ ನಡೆಯುವುದಿಲ್ಲ. ಆದರೆ, ಯಾವುದೋ ನನಗೆ ಒಪ್ಪಿಗೆಯಾಗದ ಅಸೂಕ್ಷ್ಮ ಕತೆಯ ಸಿನಿಮಾವೊಂದರ ಭಾಗವಾಗಿ ನನ್ನ ಪಾತ್ರಗಳನ್ನು ಬಳಸಿಕೊಳ್ಳುವುದನ್ನು ನಾನು ವಿರೋಧಿಸುತ್ತೇನೆ. ಇದು ಮತ್ತೊಬ್ಬ ಕತೆಗಾರನಿಗೆ ಆಗಬಾರದು ಎನ್ನುವ ಕಾಳಜಿಯೇ ಈ ವಿರೋಧದ ಮೂಲ ಉದ್ದೇಶ. ಸಿನಿಮಾದ ಮೂಲಕ ಜನಪ್ರಿಯತೆ ಗಳಿಸುವ ಹಪಹಪಿಯೂ ನನಗಿಲ್ಲ. ಏಕೆಂದರೆ ಈಗಾಗಲೇ ನನ್ನ ಪುಸ್ತಕಗಳು ಹಲವಾರು ಮುದ್ರಣಗಳನ್ನು ಕಂಡು ಓದುಗರ ಮನ್ನಣೆ ಗಳಿಸಿವೆ. ಅದಕ್ಕೆ ಸಿನಿಮಾ ಮಂದಿಯ ಮುದ್ರೆ ಬೇಕಿಲ್ಲ.

ಈಗ ನನ್ನ ಸುದೀರ್ಘ ಪ್ರಬಂಧವನ್ನು ಮತ್ತೊಬ್ಬರು ಸಿನಿಮಾ ಮಾಡುವುದಕ್ಕೂ ಸಾಧ್ಯವಿಲ್ಲ. ಅದನ್ನು ಅರ್ಧಂಬರ್ಧ, ತಮ್ಮ ಮನಸ್ಸಿಗೆ ತೋಚಿದಂತೆ ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಇಂತಹ ಘಟನೆಗಳು ಕನ್ನಡದಲ್ಲಿ ಮತ್ತೆ ನಡೆಯದಿರಲಿ ಎನ್ನುವುದಷ್ಟೇ ನನ್ನ ಕಳಕಳಿ ಎಂದು ಬೇಸರ ವ್ಯಕ್ತಪಡಿಸಿದ್ದರು.

  • ಗೆಲುವಿಗೆ ನೂರಾರು ಪಿತಾಮಹರು..!
    ಸೋಲು ಅನಾಥ ಕೂಸು..!
    ಇದ್ದಾಗ ನೂರಾರು ನೆಂಟರು.!
    ಇಲ್ಲದಾಗ ಶಟ್ಟರ ಅಂಗಡಿ ಬಾಗಿಲು ಬಂದ್.!
    ಬದುಕು ಒಂದು ಯುದ್ಧ ಭೂಮಿ
    ಯುದ್ಧ ಮಾಡಿಗೆಲ್ಲು.!
    ಗೆದ್ದರೆ ಹೂವಿನ ಹಾರ..!
    ಬಿದ್ದರೆ ಬೆನ್ನಮೇಲೆ ಅಪಮಾನದ ಭಾರ..!
    ನಗುತ ನಗಿಸುತ್ತ ಎಲ್ಲಾ ನೋಡಿ ಮುಗುಳು
    ನಗೆ ಬೀರಿ ಬದುಕಬೇಕು..!
    ಅದೆ ಶ್ರೇಷ್ಟ ಬದುಕು..! https://t.co/jDnm7m1sQH

    — ನವರಸನಾಯಕ ಜಗ್ಗೇಶ್ (@Jaggesh2) May 11, 2019 " class="align-text-top noRightClick twitterSection" data=" ">

ಇದೀಗ ಈ ವಿವಾದದ ಬಗ್ಗೆ ನಟ ಜಗ್ಗೇಶ್​ ಕೂಡ ಪ್ರತಿಕ್ರಿಯಿಸಿದ್ದಾರೆ. ಕಾವ್ಯ ರೂಪದಲ್ಲಿ ಉತ್ತರ ಕೊಟ್ಟಿರುವ ಅವರು, ಸೋಲು ಅನಾಥ ಕೂಸು. ಅದೇ ಗೆಲುವಿಗೆ ನೂರಾರು ಪಿತಾಮಹರು. ಇದ್ದಾಗ ನೂರಾರು ನೆಂಟರು. ಇಲ್ಲದಾಗ ಶೆಟ್ಟರ ಅಂಗಡಿ ಬಾಗಿಲು ಬಂದ್. ಬದುಕು ಒಂದು ಯುದ್ಧ ಭೂಮಿ. ಯುದ್ಧ ಮಾಡಿಗೆಲ್ಲು.ಗೆದ್ದರೆ ಹೂವಿನ ಹಾರ. ಬಿದ್ದರೆ ಬೆನ್ನಮೇಲೆ ಅಪಮಾನದ ಭಾರ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.