ETV Bharat / sitara

ಇಡೀ ಪ್ರಪಂಚ ನೋಡುವಂತೆ ಸಿನಿಮಾ ಮಾಡ್ತಾನೆ ನನ್ನ ಮಗ.. ಪುತ್ರನ ಬಗ್ಗೆ ನಟ ಜಗ್ಗೇಶ್ ಭವಿಷ್ಯ.. - ಕಾಗೆ ಮೊಟ್ಟೆ ಕನ್ನಡ ಸಿನಿಮಾ

ನನ್ನ ಮಗನಿಗೆ ದೊಡ್ಡ ದೊಡ್ಡ ನಿರ್ದೇಶಕರು ಸಿನಿಮಾ ಮಾಡೋದಕ್ಕೆ ಬಂದಿದ್ದರು, ನಾನು ಬೇಡ ಅಂದಿದ್ದೆ. ಯಾಕೆಂದ್ರೆ, ನಮ್ಮ ಅಪ್ಪ, ನನಗೆ ಯಾವುದೇ ಸಪೋರ್ಟ್ ಮಾಡದೆ, ನಿನ್ನ ಬೆಳವಣಿಗೆ ನಿನ್ನ ಕೈಯಲ್ಲಿದೆ ಅಂತಾ ಹೇಳಿದರು, ಅದೇ ರೀತಿ ನಾನು ನನ್ನ ಮಗನಿಗೆ ಮಾಡಿದೆ, ನನ್ನ ಊಹೆ ತಪ್ಪು ಆಯಿತು. ಅಂದು ನಾನು ನನ್ನ ಮಗ ಗುರುರಾಜ್ ಜಗ್ಗೇಶ್ ಬಿಟ್ಟಿದ್ದರೆ ಇವತ್ತಿಗೆ ತೆಲುಗು ಹಾಗು ತಮಿಳು ಭಾಷೆಯಲ್ಲಿ ಒಳ್ಳೆ ನಟನಾಗುತ್ತಿದ್ದ..

ಜಗ್ಗೇಶ್ ಭವಿಷ್ಯ
ಜಗ್ಗೇಶ್ ಭವಿಷ್ಯ
author img

By

Published : Sep 28, 2021, 6:59 PM IST

Updated : Sep 29, 2021, 4:55 PM IST

ನವರಸನಾಯಕ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾ ಮೂಲಕ ಸ್ಟಾರ್ ಪಟ್ಟ ಪಡೆದ ನಟ. ಮೂರು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರೋ ನಟ ಜಗ್ಗೇಶ್, ಹಿರಿಯ ಪುತ್ರ ಗುರುರಾಜ್ ಜಗ್ಗೇಶ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾನೆ.

ವಿಷ್ಣು ಸರ್ಕಲ್ ಸಿನಿಮಾ ಬಳಿಕ ಗುರು ರಾಜ್ ಜಗ್ಗೇಶ್ ಈಗ ಔಟ್ ಅಂಟ್ ಔಟ್ ಮಾಸ್ ಎಲಿಮೆಂಟ್ಸ್ ಹೊಂದಿರುವ, ಕಾಗೆ ಮೊಟ್ಟೆ ಎಂಬ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಪ್ರೇಕ್ಷಕರಿಗೆ ಅನುಮತಿ ನೀಡಿದ ಬೆನ್ನಲ್ಲೇ ಗುರುರಾಜ್ ಜಗ್ಗೇಶ್ ಕಾಗೆಮೊಟ್ಟೆ ಸಿನಿಮಾ, ಇದೇ ಅಕ್ಟೋಬರ್ 1ಕ್ಕೆ, 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

ಈ ಸಿನಿಮಾ ವಿಶೇಷತೆ ಬಗ್ಗೆ ಮಾತನಾಡೋದಕ್ಕೆ ನಿರ್ದೇಶಕ ಚಂದ್ರಹಾಸ, ಗುರುರಾಜ್ ಜಗ್ಗೇಶ್ ಸೇರಿ ಇಡೀ ಕಾಗೆ ಮೊಟ್ಟೆ ಚಿತ್ರತಂಡ ಹಾಜರಿತ್ತು. ಮಗ ಗುರುರಾಜ್ ಜಗ್ಗೇಶ್ ಸಿನಿಮಾಗೆ ಸಪೋರ್ಟ್ ಮಾಡಲು ಜಗ್ಗೇಶ್ ಹಾಗೂ ಪತ್ನಿ ಪರಿಮಳ ಜಗ್ಗೇಶ್ ಈ ಪತ್ರಿಕಾಗೋಷ್ಠಿಗೆ ಬಂದಿದ್ದರು.

ಇಡೀ ಪ್ರಪಂಚ ನೋಡುವಂತೆ ಸಿನಿಮಾ ಮಾಡ್ತಾನೆ ನನ್ನ ಮಗ

ಈ ಸಮಯದಲ್ಲಿ ಮಾತನಾಡಿದ ಜಗ್ಗೇಶ್ ಎರಡು ವರ್ಷದಿಂದ ಕೊರೊನಾ ಎಂಬ ಹೆಮ್ಮಾರಿ, ಚಿತ್ರರಂಗದ ಜೊತೆಗೆ ಹಲವಾರು ಕ್ಷೇತ್ರಗಳನ್ನ ಅವನತಿಗೆ ಕಾರಣವಾಗಿದೆ. ಮಗ ಗುರುರಾಜ್ ಜಗ್ಗೇಶ್ ಪ್ರತಿಭೆ ಬಗ್ಗೆ ನನಗೆ ಗೊತ್ತಿರಲಿಲ್ಲ. ನನ್ನ ಪ್ರಕಾರ ನನ್ನ ಮಗನ ಜೀವನವನ್ನ ಹಾಳು ಮಾಡಿರುವ ನೋವು ನನಗೆ ಕಾಡುತ್ತಿದೆ ಅಂತಾ ಜಗ್ಗೇಶ್ ತಮ್ಮ ನೋವನ್ನ ಹೊರ ಹಾಕಿದರು.

ನನ್ನ ಮಗನಿಗೆ ದೊಡ್ಡ ದೊಡ್ಡ ನಿರ್ದೇಶಕರು ಸಿನಿಮಾ ಮಾಡೋದಕ್ಕೆ ಬಂದಿದ್ದರು, ನಾನು ಬೇಡ ಅಂದಿದ್ದೆ. ಯಾಕೆಂದ್ರೆ, ನಮ್ಮ ಅಪ್ಪ, ನನಗೆ ಯಾವುದೇ ಸಪೋರ್ಟ್ ಮಾಡದೆ, ನಿನ್ನ ಬೆಳವಣಿಗೆ ನಿನ್ನ ಕೈಯಲ್ಲಿದೆ ಅಂತಾ ಹೇಳಿದರು. ಅದೇ ರೀತಿ ನಾನು ನನ್ನ ಮಗನಿಗೆ ಮಾಡಿದೆ, ನನ್ನ ಊಹೆ ತಪ್ಪು ಆಯಿತು. ಅಂದು ನಾನು ನನ್ನ ಮಗ ಗುರುರಾಜ್ ಜಗ್ಗೇಶ್ ಬಿಟ್ಟಿದ್ದರೆ ಇವತ್ತಿಗೆ ತೆಲುಗು ಹಾಗು ತಮಿಳು ಭಾಷೆಯಲ್ಲಿ ಒಳ್ಳೆ ನಟನಾಗುತ್ತಿದ್ದ ಅಂದರು.

ಗುರುರಾಜ್ ನಲ್ಲಿ ಯಾರಿಗೂ ಗೊತ್ತಿಲ್ಲದ ಒಂದು ಕಲೆ ಇದೆ. ಅದುವೇ ಅವನು ನಿರ್ದೇಶನ ಮಾಡೋದು. ನನಗೋಸ್ಕರ ನನ್ನ ಮಗ ಒಂದು ಕಥೆ ಮಾಡಿದ್ದಾನೆ. ಆ ಕಥೆ ವರ್ಲ್ಡ್ ವೈಡ್ ನೋಡುವ ಹಾಗೇ ಸಿನಿಮಾ ಮಾಡ್ತಾನೆ ಅಂತಾ ಮಗನ ಬಗ್ಗೆ ಜಗ್ಗೇಶ್ ಭವಿಷ್ಯ ನುಡಿದರು.

ಈಗಾಗ್ಲೇ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಮುಖ್ಯವಾಗಿ ನನ್ನ ಮ್ಯಾನರಿಸಂಗೆ ತಕ್ಕಂತೆ ಡೈಲಾಗ್ ಗಳು ಇರಬೇಕು ಅಂತಾ ಹೇಳಿದ್ದೇನೆ. ಅದರಂತೆ ಗುರುರಾಜ್ ಕಥೆ ಮಾಡ್ತಿದ್ದಾನೆ. ಸದ್ಯದಲ್ಲೇ ಈ ಸಿನಿಮಾದ ಸಂಪೂರ್ಣ ಮಾಹಿತಿ ಕೊಡ್ತೀವಿ ಅಂತಾ ಜಗ್ಗೇಶ್ ಮಗನ ನಿರ್ದೇಶನದ ಬಗ್ಗೆ ಹೆಮ್ಮೆಯಿಂದ ಹೇಳಿದ್ರು.

ಮುಂದಿನ ದಿನಗಳಲ್ಲಿ ನಾನು ಕೂಡ ಸಿನಿಮಾ ನಿರ್ದೇಶನ ಮಾಡ್ತೀನಿ. ಸದ್ಯ ಈಗ ಒಪ್ಪಿರುವ ಸಿನಿಮಾಗಳನ್ನ ಮುಗಿಸೋದು ನನ್ನ ಕೆಲಸ ಅಂತಾ ಜಗ್ಗೇಶ್ ತಮ್ಮ ಸಿನಿಮಾ ಹಾಗೂ ಮಗ ಗುರುರಾಜ್ ಜಗ್ಗೇಶ್ ಕಲೆ ಬಗ್ಗೆ ಕೊಂಡಾಡಿದ್ದರು.

ಶಿವಣ್ಣ, ಸುದೀಪ್ , ವಿಜಯ್ ಸಿನಿಮಾಗಳಿಗೆ ಒಳ್ಳೆಯದಾಗಲಿ:

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3, ದುನಿಯಾ ವಿಜಯ್ ಅಭಿನಯದ ಜೊತೆಗೆ ನಿರ್ದೇಶನದ ಸಲಗ ಹಾಗು ಶಿವರಾಜ್ ಕುಮಾರ್ ಅಭಿನಯಿಸಿರೋ ಭಜರಂಗಿ 2 ಚಿತ್ರಗಳು ಅಕ್ಟೋಬರ್ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರ್ತಾ ಇದೆ. ಅದರಲ್ಲಿ ಸುದೀಪ್ ಹಾಗು ದುನಿಯಾ ವಿಜಯ್ ನಟನೆಯ ಚಿತ್ರಗಳು ಒಂದೇ ದಿನ ಬಿಡುಗಡೆ ಆಗುವ ಮೂಲಕ ಇಬ್ಬರ ನಟರ ನಡುವೆ ಪೈಪೋಟಿ ಉಂಟಾಗಿದೆ.ಈ ಮೂರು ಜನ ಸ್ಟಾರ್ ಗಳ ಸಿನಿಮಾ‌ಗೆ ನವರಸ ನಾಯಕ ಜಗ್ಗೇಶ್ ಶುಭ ಹಾರೈಸಿದ್ದಾರೆ.

ಕೋಟಿಗೊಬ್ಬ 3 ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ನನ್ನ ಮೊದಲ ಸಿನಿಮಾ ನಿರ್ಮಾಪಕ. ಹೀಗಾಗಿ ಸೂರಪ್ಪ ಬಾಬು ನಿರ್ಮಾಣದ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿದೆ ಎಂದು ಜಗ್ಗೇಶ್ ಭವಿಷ್ಯ ನುಡಿದರು.

Last Updated : Sep 29, 2021, 4:55 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.