ಜಗ್ಗೇಶ್, ಬೆಂಗಳೂರಿನ ನಮ್ಮ ಮನೆಯ ಸುತ್ತಮುತ್ತಲಿನ ರಸ್ತೆ ಬದಿ ಎಂಟು ವರ್ಷಗಳ ಹಿಂದೆ ಸಸಿ ನೆಟ್ಟಿದ್ದರು. ಈಗ ಮರಗಳಾಗಿ ಬೆಳೆದು, ನೆರಳಿನ ಆಶ್ರಯ ನೀಡುತ್ತಿವೆ. ಆದರೆ, ನಿನ್ನೆ ಕಾಮಗಾರಿಯ ಹೆಸರಿನಲ್ಲಿ ಬೆಸ್ಕಾಂನವರು ಈ ಮರಗಳ ರೆಂಬೆ, ಕೊಂಬೆಗಳನ್ನು ಕಡಿದು ಹಾಕಿದ್ದಾರೆ. ಇದು ಜಗ್ಗೇಶ್ ಅವರ ಆಕ್ರೋಶಕ್ಕೆ ಕಾರಣವಾಗಿದ್ದು,ರಾಜ್ಯ ಸರ್ಕಾರ, ಎಂಎಲ್ಎ ಹಾಗೂ ಸಚಿವರ ವಿರುದ್ಧ ಟ್ವಿಟ್ಟರ್ಲ್ಲಿ ಹರಿಹಾಯ್ದಿದ್ದಾರೆ.
![jaggesh](https://etvbharatimages.akamaized.net/etvbharat/prod-images/d8gubqpvsaalze8_0806newsroom_1559978211_1015.jpg)
ತನ್ನ ಕೊಂಬೆಗಳನ್ನು ಕತ್ತರಿಸಿಕೊಂಡು ಬೋಳಾಗಿ ನಿಂತಿರುವ ಮರಗಳನ್ನು ನೋಡಿ ಮರುಗಿರುವ ಜಗ್ಗೇಶ್, ಸರ್ಕಾರ, ಎಂಎಲ್ಎ ಹಾಗೂ ಸಚಿವರು ವಿಶ್ವ ಪರಿಸರ ದಿನದಂದು ಮಾತ್ರ ಲಕ್ಷಾಂತರ ಹಣ ಖರ್ಚು ಮಾಡಿ, ಬಿಲ್ಡಪ್, ಪಬ್ಲಿಸಿಟಿ ಪಡೆಯುತ್ತಾರೆ. ನಾನು ಒಬ್ಬ ನಟನಾಗಿ ನನ್ನ ಯೋಗ್ಯತೆ, ಶಕ್ತಿ ಇದ್ದಷ್ಟು ಶ್ರಮಿಸಿ ಮರಗಳನ್ನು ಬೆಳೆಸಿದ್ದೇನೆ. ಆದರೆ, ಅವುಗಳನ್ನು ಕಾಪಾಡಿಕೊಳ್ಳಲು ನಿಮಗೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
![jaggesh](https://etvbharatimages.akamaized.net/etvbharat/prod-images/d8gubqpvsaalze8_0806newsroom_1559978211_1015.jpg)