ಹಿರಿತೆರೆ ಮೇಲೆ ಅದ್ಧೂರಿಯಾಗಿ ಅಬ್ಬರಿಸುತ್ತಿರುವ ಬಹದ್ದೂರು ಹುಡುಗ ಈಗ ಭಾವಿ ಪತ್ನಿ ಜತೆ ಟಿಕ್ - ಟಾಕ್ಗೆ ಬಂದಿದ್ದಾರೆ. ಆದರೆ, ಈ ವಿಡಿಯೋ ಮಾಡುವುದು ಪ್ರೇರಣಾ ಅವರಿಗೆ ಗೊತ್ತಿರಲಿಲ್ಲವಂತೆ. ಪ್ರೇರಣಾ ತನ್ನ ಪೋಟೊ ಕ್ಲಿಕ್ಕಿಸುತ್ತಿರಬಹುದೆಂದು ಭಾವಿಸಿದ್ದರು. ಆದರೆ, ನಾನು ಟಿಕ್ - ಟಾಕ್ ವಿಡಿಯೋ ಮಾಡಿ ತಮಾಷೆ ಮಾಡಿದೆ ಎಂದು ಹ್ಯಾಟ್ರಿಕ್ ಪ್ರಿನ್ಸ್ ಧ್ರುವ ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ಹಾಗೂ ಕಾಮೆಂಟ್ಗಳ ಸುರಿಮಳೆಯಾಗಿದೆ.
ಇನ್ನು ಇತ್ತೀಚಿಗಷ್ಟೇ ಇನ್ಸ್ಟಾಗ್ರಾಂ ಅಂಗಳಕ್ಕೆ ಕಾಲಿಟ್ಟಿರುವ ಧ್ರುವ ಸರ್ಜಾಗೆ ಅಭಿಮಾನಿಗಳಿಂದ ಗ್ರ್ಯಾಂಡ್ ವೆಲ್ಕಮ್ ಸಿಕ್ಕಿದೆ. ಖಾತೆ ಒಪನ್ ಮಾಡಿದ ನಾಲ್ಕೇ ದಿನದಲ್ಲಿ ಈ 'ಪೋಗರು' ಹುಡುಗನಿಗೆ 1.71 ಲಕ್ಷ ಜನ ಫಾಲೋ ಮಾಡ್ತಿದ್ದಾರೆ. ಆದರೆ, ಧ್ರುವ ಮಾತ್ರ ಇದುವರೆಗೂ ಯಾರನ್ನೂ ಫಾಲೋ ಮಾಡಿಲ್ಲ.