ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ರಾಬರ್ಟ್' ಇದೇ ಮಾರ್ಚ್ 11, ಮಹಾ ಶಿವರಾತ್ರಿ ದಿನದಂದು ಬಿಡುಗಡೆಯಾಗಲು ದಿನಾಂಕ ನಿಗದಿಯಾಗಿದೆ. ಈ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲ ತೆಲುಗಿನಲ್ಲಿ ಕೂಡಾ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ 'ರಾಬರ್ಟ್' ಚಿತ್ರವನ್ನು ಟಾಲಿವುಡ್ನಲ್ಲಿ ಬಿಡುಗಡೆ ಮಾಡಲು ಅಲ್ಲಿನ ಮಂದಿ ನಿರಾಕರಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: ಸಲಾರ್ನಲ್ಲಿ ಪ್ರಭಾಸ್ ಜೊತೆ ಶೃತಿ ಹಾಸನ್!
ಆಂಧ್ರ, ತೆಲಂಗಾಣದಲ್ಲಿ 'ರಾಬರ್ಟ್' ಬಿಡುಗಡೆಗೆ ಯಾರು ಅಡ್ಡಿ ಪಡಿಸುತ್ತಿದ್ದಾರೆ..? ಅದಕ್ಕೆ ಕಾರಣ ಏನು ..? ಎಂಬ ವಿಚಾರ ಮಾತ್ರ ತಿಳಿದುಬಂದಿಲ್ಲ. ಆದರೆ ಚಿತ್ರಮಂದಿರಗಳು ತೆರೆಯುತ್ತಿದ್ದಂತೆ ಕರ್ನಾಟಕದಲ್ಲಿ ಎಂದಿನಂತೆ ಪರಭಾಷೆ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅದರಲ್ಲೂ ಕನ್ನಡ ಸಿನಿಮಾಗಳಿಗಿಂತ ತೆಲುಗು ಸಿನಿಮಾಗಳು ಹೆಚ್ಚು ಹೆಚ್ಚು ಥಿಯೇಟರ್ಗಳನ್ನು ಆವರಿಸಿಕೊಳ್ಳುತ್ತಿ ವೆ. ಆದರೆ 'ರಾಬರ್ಟ್' ಸಿನಿಮಾವನ್ನು ಮಾತ್ರ ತಮ್ಮ ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಬೇಸರ ವ್ಯಕ್ತಪಡಿಸಿದ್ದು ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹಾಗೂ ನಿರ್ದೇಶಕ ತರುಣ್ ಸುಧೀರ್ ಜೊತೆ ಸೇರಿ ತೆಲುಗು ಚಿತ್ರರಂಗದ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ನಮ್ಮ ಸಿನಿಮಾ ಬಿಡುಗಡೆ ಮಾಡಲು ಅಲ್ಲಿ ಅವಕಾಶ ಇಲ್ಲ ಎಂದ ಮೇಲೆ, ಅಲ್ಲಿನ ಸಿನಿಮಾವನ್ನು ಕರ್ನಾಟಕದಲ್ಲಿ ಏಕೆ ಬಿಡುಗಡೆ ಮಾಡಬೇಕೆಂದು ಉಮಾಪತಿ ಪ್ರಶ್ನಿಸಿದ್ದಾರೆ.