ರಣಂ ಚಿತ್ರದ ಶೂಟಿಂಗ್ ವೇಳೆ ನಡೆದ ಅವಘಡದಲ್ಲಿ ಸಾವನ್ನಪ್ಪಿರುವ ಕುಟುಂಬದ ನೆರವಿಗೆ ನಟ ಚೇತನ್ ಮುಂದಾಗಿದ್ದಾರೆ. ಇಂದು ತಮ್ಮ ಫೇಸ್ಬುಕ್ನಲ್ಲಿ ಈ ವಿಚಾರ ಅವರು ಖಚಿತಪಡಿಸಿದ್ದಾರೆ.
ನಿನ್ನೆ ಬಾಗಲೂರಿನ ಶೆಲ್ ಕಂಪನಿ ಬಳಿ ಫೈಟಿಂಗ್ ಸನ್ನಿವೇಶದ ಶೂಟಿಂಗ್ ನಡೆಯುತ್ತಿತ್ತು. ಸಂಜೆ 4.15 ರ ವೇಳೆಗೆ ರೋಡ್ ಬ್ಲಾಕ್ ಮಾಡಲು ಇಟ್ಟಿದ್ದ ಸಿಲಿಂಡರ್ ಸ್ಫೋಟಗೊಂಡು ಸುಮೇರಾ (29) ಹಾಗೂ ಆಕೆಯ ಮಗಳು ಅಹೇರಾ (8) ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬ ಮಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆ ಕೊಡಿಸಲಾಗುತ್ತಿದೆ.
ಘಟನೆ ಸಂಭವಿಸುತ್ತಿದ್ದಂತೆ ಚಿತ್ರತಂಡ ಅಲ್ಲಿಂದ ಪರಾರಿಯಾಗಿತ್ತು. ಈ ದುರ್ಘಟನೆ ವೇಳೆ ನಟ ಚೇತನ್ ಅಲ್ಲಿರಲಿಲ್ಲ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದರು.
- " class="align-text-top noRightClick twitterSection" data="">
ಇಂದು ಮತ್ತೆ ಈ ವಿಚಾರವಾಗಿ ಮಾತಾಡಿರುವ ಚೇತನ್, ಆ ಕುಟುಂಬದ ನೋವಿನ ಜೊತೆಗೆ ನಾನು ನಿಲ್ಲುತ್ತೇನೆ. ಬಾಗಲೂರಿನ ಅಧಿಕಾರಿಗಳೊಂದಿಗೆ ಮಾತನಾಡಿ ಆ ಕುಟುಂಬಕ್ಕೆ ನ್ಯಾಯ ಒದಗಿಸಲು ಶ್ರಮಿಸುತ್ತೇನೆ ಎಂದಿದ್ದಾರೆ.
ನಿನ್ನೆ ನಡೆದ ಘಟನೆಯಿಂದ ರಣಂ ಚಿತ್ರತಂಡ ಹಾಗೂ ಕನ್ನಡ ಚಿತ್ರರಂಗಕ್ಕೆ ದುಃಖವಾಗಿದೆ. ಇಂತಹ ಘಟನೆ ಇನ್ಮುಂದೆ ನಡೆಯಬಾರದು ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.
- " class="align-text-top noRightClick twitterSection" data="">
ರಣಂ ಚಿತ್ರದಲ್ಲಿ ಚೇತನ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ವಿ. ಸಮುದ್ರ ನಿರ್ದೇಶಿಸುತ್ತಿದ್ದಾರೆ.