ETV Bharat / sitara

ಫೋರ್ ವಾಲ್ಸ್ ಚಿತ್ರದ ಪ್ರೀತಿ ನಿವೇದನೆ ಹಾಡಿನಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್! - ಫೋರ್ ವಾಲ್ಸ್ ಚಿತ್ರದ ಪ್ರೀತಿ ನಿವೇದನೆ ಹಾಡಿನಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್

ಇದೇ ಮೊದಲ ಬಾರಿಗೆ ಖ್ಯಾತ ನಟ ಅಚ್ಯುತ್ ಕುಮಾರ್ ಹೀರೋ ಆಗಿ ನಟಿಸಿರುವ ಫೋರ್ ವಾಲ್ಸ್ ಸಿನಿಮಾ ಚಿತ್ರ ಪ್ರೇಮಿಗಳಲ್ಲಿ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಫೋರ್ ವಾಲ್ಸ್‌ನಲ್ಲಿ ಅಚ್ಯುತ್ ಕುಮಾರ್ ಸೈಕಲ್ ಹಿಡಿದು ಗೆಳತಿ ಹಿಂದೆ ಸುತ್ತುತ್ತಾ ಪ್ರೀತಿ ನಿವೇದನೆ ಮಾಡುವ ರೋಮ್ಯಾಟಿಂಕ್‌ ಹಾಡು ಕೇಳುಗರಿಗೆ ಮೋಡಿ ಮಾಡಿದ್ದು, ಮುಂದಿನ ತಿಂಗಳು ಸಿನಿಮಾ ತೆರೆಗೆ ಬರುತ್ತಿದೆ..

actor Achyuth kumar in four walls movie romantic song
ಫೋರ್ ವಾಲ್ಸ್ ಚಿತ್ರದ ಪ್ರೀತಿ ನಿವೇದನೆ ಹಾಡಿನಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್!
author img

By

Published : Jan 29, 2022, 3:54 PM IST

ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಟೈಟಲ್, ಪೋಸ್ಟರ್, ಟೀಸರ್ ಹೀಗೆ ಪ್ರತಿ ಹಂತದಲ್ಲೂ ಕ್ಯೂರಿಯಾಸಿಟಿ ಹುಟ್ಟಿಸಿರುವ ಸಿನಿಮಾ ಫೋರ್ ವಾಲ್ಸ್. ಇದೇ ಮೊದಲ ಬಾರಿಗೆ ಖ್ಯಾತ ನಟ ಅಚ್ಯುತ್ ಕುಮಾರ್ ಹೀರೋ ಆಗಿ ನಟಿಸಿರುವ ಫೋರ್ ವಾಲ್ಸ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಸಿನಿಮಾದ ಬಗ್ಗೆ ಮಾತನಾಡಲು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ನಟ ಅಚ್ಯುತ್ ಕುಮಾರ್, ಸುಜಯ್, ಜಾಹ್ನವಿ, ಭಾಸ್ಕರ್ ನೀನಾಸಂ, ಡಾ.ಪವಿತ್ರ, ರಚನಾ ಭಾಗಿಯಾಗಿದ್ದರು.

four walls movie team
ಫೋರ್ ವಾಲ್ಸ್ ಚಿತ್ರ ತಂಡದೊಂದಿಗೆ ನಟ ಅಚ್ಯುತ್‌ ಕುಮಾರ್‌

ಸ್ಟಾರ್ ಸಿಂಗರ್ ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿ ಬಂದಿದ್ದ ‘ಕಣ್ಮಣಿಯೇ ಕಣ್ಮಣಿಯೇ’ ಹಾಡಿನ ಲಿರಿಕಲ್ ವಿಡಿಯೋ ಸಾಂಗ್ ಈ ಹಿಂದೆ ಸಖತ್ ಸದ್ದು ಮಾಡಿತ್ತು. ಅಚ್ಯುತ್ ಕುಮಾರ್ ಸೈಕಲ್ ಹಿಡಿದು ಗೆಳತಿ ಹಿಂದೆ ಸುತ್ತುತ್ತಾ ಪ್ರೀತಿ ನಿವೇದನೆ ಮಾಡುವ ಹಾಡು ಕೇಳುಗರಿಗೆ ಮೋಡಿ ಮಾಡಿತ್ತು. ಶ್ರೀ ತಲಗೇರಿ ಬರೆದ ಸಾಹಿತ್ಯಕ್ಕೆ ಸಂಗೀತ ನಿರ್ದೇಶಕ ಆನಂದ ರಾಜಾ ವಿಕ್ರಮ ಇಂಪಾದ ಸಂಗೀತ ಸಂಯೋಜನೆ ಮಾಡಿದ್ದಾರೆ.

four walls movie team
ಫೋರ್‌ ವಾಲ್ಸ್‌ ಚಿತ್ರದಲ್ಲಿ ನಾಯಕ ನಟನಾಗಿರುವ ಅಚ್ಯುತ್‌ ಕುಮಾರ್‌

3 ಶೇಡ್‌ಗಳಲ್ಲಿ ಅಚ್ಯುತ್‌ ಕುಮಾರ್‌! : ಈ ಹಾಡಿನ ವಿಡಿಯೋ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ‌ ಸೌಂಡ್ ಮಾಡ್ತಿದೆ. ಫೋರ್ ವಾಲ್ಸ್ ಚಿತ್ರಕ್ಕೆ ಮಂತ್ರಂ ಸಿನಿಮಾ ಮೂಲಕ ಚಂದನವನಕ್ಕೆ ಡೈರೆಕ್ಟರ್ ಆಗಿ ಎಂಟ್ರಿ ಕೊಟ್ಟಿದ್ದ ಎಸ್ ಎಸ್ ಸಜ್ಜನ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ಕುಮಾರ್ ನಾಯಕ, ನಟನಾಗಿ ಮಿಂಚಿದ್ದಾರೆ. ಮೂರು ಶೇಡ್‌ನ ಚಿತ್ರದಲ್ಲಿ ಕಾಣಸಿಗಲಿದ್ದಾರೆ. ಟೀಸರ್ ನೋಡಿ ಅಚ್ಯುತ್‌ಕುಮಾರ್ ಹೊಸ ಗೆಟಪ್‌ನಲ್ಲಿ ಕಂಡ ಚಿತ್ರಪ್ರೇಮಿಗಳು ಸಿನಿಮಾ ಬಗ್ಗೆ ಇನ್ನಿಲ್ಲದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

four walls movie team
ಫೋರ್ ವಾಲ್ಸ್ ಚಿತ್ರ ತಂಡ

ಇದೊಂದು ಫ್ಯಾಮಿಲಿ ಎಂಟಟೈನ್ಮೆಂಟ್ ಚಿತ್ರವಾಗಿದೆ. ತಂದೆ-ಮಗನ ನಡುವಿನ ಬಾಂಧವ್ಯದ ಕತೆ ಚಿತ್ರದಲ್ಲಿದೆ. ಮನರಂಜನೆಗೆ ಎಲ್ಲೂ ಕೊರತೆ ಇಲ್ಲ ಎನ್ನುವುದು ಚಿತ್ರತಂಡದ ಮಾತು. ಎಸ್.ವಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಟಿ.ವಿಶ್ವನಾಥ್ ನಾಯಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಡಾ.ಪವಿತ್ರ ನಾಯಕಿಯಾಗಿ ಅಭಿನಯಿಸಿದ್ದಾರೆ.

ಡಾ. ಜಾಹ್ನವಿ ಜ್ಯೋತಿ, ದತ್ತಣ್ಣ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ಆಂಚಲ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ವಿಡಿಆರ್ ಛಾಯಾಗ್ರಹಣ ಚಿತ್ರಕ್ಕಿದೆ. ಈ ಸಿನಿಮಾವನ್ನ ಸತ್ಯ ಪಿಕ್ಚರ್ಸ್ ಅಡಿ ಬಿಡುಗಡೆ ಮಾಡುತ್ತಿದ್ದು, ಮುಂದಿನ ತಿಂಗಳು ಫೋರ್ ವಾಲ್ಸ್ ಬಿಡುಗಡೆಯಾಗಲಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.