ETV Bharat / sitara

ಥಿಯೇಟರ್ ಓಪನ್ ಆಗುತ್ತೆ, ಚಿಂತೆಬೇಡ : ನಟ ಅಭಿಷೇಕ್​​ ಅಂಬರೀಷ್ - ಅಭಿಷೇಕ್​​ ಅಂಬರೀಶ್​​

ಈಗಾಗಲೇ ನಮ್ಮ ಹಿರಿಯರು ಮಾತನಾಡಿದ್ದು, ಸರಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡು ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ಸಿನಿಮಾ ಮಂದಿರಗಳು ಓಪನ್ ಆಗಲಿದೆ ಎಂದು ಅಭಿಷೇಕ್ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದರು.

ಥಿಯೇಟರ್ ಓಪನ್ ಆಗುತ್ತೆ, ಚಿಂತೆಬೇಡ : ನಟ ಅಭಿಷೇಕ್​​

author img

By

Published : Feb 4, 2021, 9:18 PM IST

ಹಾಸನ : ಈಗಾಗಲೇ ನಮ್ಮ ಹಿರಿಯರು ಮಾತನಾಡಿದ್ದು, ಸರಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡು ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ಸಿನಿಮಾ ಮಂದಿರಗಳು ಓಪನ್ ಆಗಲಿವೆ ಎಂದು ಅಭಿಷೇಕ್ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಅರಳೇಪೇಟೆ ರಸ್ತೆಯಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ ಸ್ನೇಹಿತರ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದರು. ಚಲನಚಿತ್ರ ಮಂದಿರ ವಿಚಾರವಾಗಿ ಈಗಾಗಲೇ ಹಿರಿಯ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ಎಲ್ಲರೂ ಸರಕಾರದ ಮಟ್ಟದಲ್ಲಿ ಮಾತನಾಡಿದ್ದು, ಪೂರ್ಣ ಪ್ರಮಾಣದಲ್ಲಿ ಥಿಯೇಟರುಗಳು ತೆರೆಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರವೂ ಒಳ್ಳೆಯ ನಿರ್ಧಾರ ಕೈಗೊಳ್ಳಲಿದೆ. ಆತಂಕ ಬೇಡ. ನನಗೂ ಚಿತ್ರ ಮಂದಿರ ಬೇಗ ತರೆಯಲಿ ಎಂಬ ವಿಶ್ವಾಸವಿದೆ ಎಂದ್ರು.

ಥಿಯೇಟರ್ ಓಪನ್ ಆಗುತ್ತೆ, ಚಿಂತೆಬೇಡ : ನಟ ಅಭಿಷೇಕ್​​

ಕೊರೊನಾ ಆವರಿಸಿದ ಹಿನ್ನಲೆಯಲ್ಲಿ ಕಳೆದ ವರ್ಷ ಸಿನಿಮಾ ರಂಗ ಮಾತ್ರವಲ್ಲ, ವಿವಿಧ ಕ್ಷೇತ್ರಗಳ ಆರ್ಥಿಕಾಭಿವೃದ್ದಿಯ ಮೇಲೆ ಹೊಡೆತ ಬಿದ್ದಿದೆ. 2021ರ ನಂತರ ಎಲ್ಲ ವ್ಯವಹಾರಗಳು ಸುಧಾರಿಸಿಕೊಳ್ಳುತ್ತಿವೆ. ಆದರೆ ಸಿನಿಮಾ ರಂಗ ಮಾತ್ರ ನಿಧಾನಗತಿಯಲ್ಲಿ ಇದೆ. ಕಾರಣ ಇದರಲ್ಲಿ ಹೆಚ್ಚಾಗಿ ಜನರು ಸೇರುವ ಸಂದರ್ಭ ಇರುವುದರಿಂದ ನಿಯಮಗಳನ್ನು ಪಾಲಿಸುವುದು ಕಷ್ಟವಾಗುತ್ತದೆ. ಈಗ ಎಲ್ಲಾ ಕಡೆ ಓಪನ್ ಆಗಿರುವುದರಿಂದ ಇಲ್ಲೂ ಓಪನ್ ಆಗುತ್ತದೆ ಆತಂಕ ಬೇಡ ಎಂದು ಪ್ರೇಕ್ಷಕರಿಗೆ ಧೈರ್ಯ ತುಂಬಿದ್ರು.

ಮಂಡ್ಯದಲ್ಲಿ ನನ್ನ ಫಿಲಂ ಶೂಟಿಂಗ್ ನಡೆಯುತ್ತಿದ್ದಾಗ ಸ್ನೇಹಿತರು ಬಂದು ಹಾಸನದಲ್ಲಿ ಮದುವೆ ಇದೆ, ಮದುವೆಗೆ ಬರಲೇ ಬೇಕು ಎಂದು ಹೇಳಿದ್ರು. ಹಾಸನವನ್ನು ಒಂದು ಬಾರಿ ನೋಡೊಣ ಎಂದು ಆಗಮಿಸಿದ್ದೇನೆ. ರಾಜಕೀಯದ ಬಗ್ಗೆ ನಾನೇನು ಈಗ ಮಾತನಾಡುವುದಿಲ್ಲ. ಸೂಕ್ತ ಸಂದರ್ಭವೂ ಅಲ್ಲ ಎಂದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.