ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಜೊತೆಯಾಗಿ ನಟನೆ ಮಾಡಿರುವ ಬಹು ನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಚಿತ್ರ ಏಪ್ರಿಲ್ 14ರಂದು ತೆರೆ ಕಾಣುವುದು ಖಚಿತಗೊಂಡಿದೆ. ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಉಂಟಾಗಿದ್ದ ಅನೇಕ ಗೊಂದಲಗಳಿಗೆ ಇಂದು ತೆರೆ ಬಿದ್ದಿದೆ.
ಅಮೀರ್ ಖಾನ್ ಅಭಿಯನದ ಲಾಲ್ ಸಿಂಗ್ ಚಡ್ಡಾ ಈಗಾಗಲೇ ನಿಗದಿ ಮಾಡಿರುವ ವೇಳಾಪಟ್ಟಿಯಂತೆ ಏಪ್ರಿಲ್ 14ರಂದು ಥಿಯೇಟರ್ಗಳಿಗೆ ಬರಲಿದೆ ಎಂದು ಚಿತ್ರ ತಂಡ ಇಂದು ಸ್ಪಷ್ಟನೆ ನೀಡಿದೆ.
ಈ ಮೂಲಕ ಬಿಡುಗಡೆಗೆ ಸಂಬಂಧಿಸಿದಂತೆ ಕೇಳಿ ಬಂದಿದ್ದ ಊಹಾಪೋಹಗಳಿಗೆ ಬ್ರೇಕ್ ಹಾಕಿದೆ ಚಿತ್ರತಂಡ. ಕಳೆದ ಕೆಲ ದಿನಗಳಿಂದ ಈ ಚಿತ್ರ ಏಪ್ರಿಲ್ 14ರ ಬದಲಾಗಿ ಆಗಸ್ಟ್ 11ರಂದು ರಿಲೀಸ್ ಆಗಲಿದೆ ಎಂಬ ಮಾತು ಕೇಳಿ ಬಂದಿದ್ದವು.
- " class="align-text-top noRightClick twitterSection" data="
">
ಇದನ್ನೂ ಓದಿರಿ: 'RRR' ರಿಲೀಸ್‌ಗೆ ಹೊಸ ದಿನಾಂಕ ಫಿಕ್ಸ್.. ಅಂದಾದ್ರೂ ಬಿಡುಗಡೆಯಾಗುತ್ತಾ ಚಿತ್ರ?
ಏಪ್ರಿಲ್ 14ರಂದು ದೇಶಾದ್ಯಂತ ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF-2 ಚಿತ್ರ ರಿಲೀಸ್ ಆಗುತ್ತಿರುವ ಕಾರಣ ಅಮೀರ್ ಖಾನ್ ತಮ್ಮ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಅಮೀರ್ ಖಾನ್ ಪ್ರೊಡಕ್ಷನ್ಸ್ನಲ್ಲಿ ತಯಾರುಗೊಂಡಿರುವ ಲಾಲ್ ಸಿಂಗ್ ಚಡ್ಡಾ ಅದೇ ದಿನ ಬಿಡುಗಡೆಯಾಗಲಿದೆ.
ಕಳೆದ ವರ್ಷ ಡಿಸೆಂಬರ್ 25ರಂದು ಈ ಚಿತ್ರ ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಚಿತ್ರ ರಿಲೀಸ್ ದಿನಾಂಕ ಮುಂದೂಡಿಕೆ ಮಾಡಲಾಗಿದೆ. ಚಿತ್ರದಲ್ಲಿ ಅಮೀರ್ ಖಾನ್ ಜೊತೆಗೆ ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋನಾ ಸಿಂಗ್ ಮತ್ತು ನಾಗಚೈತನ್ಯ ಕೂಡ ಇದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ