ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನುಮದಿನ. ರಾಜಕಾರಣಿಗಳು, ಹಿರಿತೆರೆ, ಕಿರುತೆರೆ ನಟರು ಈಗಾಗಲೇ ತಮ್ಮ ನೆಚ್ಚಿನ ನಟನಿಗೆ ಜನುಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
ಆದ್ರೆ ಇಲ್ಲೊಬ್ಬ ಪೋರ ಅಪ್ಪುಗೆ ರಾಜಕುಮಾರ ಚಿತ್ರದ ಬೊಂಬೆ ಹೇಳುತ್ತೈತೆ ಹಾಡನ್ನು ಪಿಯಾನೋ ನುಡಿಸುವ ಮೂಲಕ ವಿಭಿನ್ನವಾಗಿ ವಿಶ್ ಮಾಡಿದ್ದಾನೆ. ಆ ಹುಡುಗನೇ ಆಲಾಪ್.
ಆಲಾಪ್ ಕಿರುತೆರೆಯ ಜನಪ್ರಿಯ ಧಾರಾವಾಹಿ ಸಿಲ್ಲಿಲಲ್ಲಿಯ ಪ್ರಶಾಂತ್ ನೀರಗುಂದ್ ಮತ್ತು ರೂಪಪ್ರಭಾಕರ್ ದಂಪತಿಗಳ ಪುತ್ರ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಕ್ಕಳ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ನಲ್ಲೂ ಈ ಆಲಾಪ್ ಕಮಾಲ್ ಮಾಡಿದ್ದ.