ETV Bharat / sitara

ಬಿಚ್ಚುಗತ್ತಿ, ಮಾಯಾ ಬಜಾರ್ ಸೇರಿ ಇಂದು 9 ಕನ್ನಡ ಚಿತ್ರಗಳು ತೆರೆಗೆ - ಫೆಬ್ರವರಿ 28 ಕ್ಕೆ 9 ಕನ್ನಡ ಸಿನಿಮಾಗಳು ತೆರೆಗೆ

ಫೆಬ್ರವರಿ ಕೊನೆಯ ದಿನವಾದ ಇಂದು 9 ಕನ್ನಡ ಸಿನಿಮಾಗಳು ತೆರೆ ಕಾಣುತ್ತಿವೆ. ಮಾಯಾಬಜಾರ್, ಬಿಚ್ಚುಗತ್ತಿ, ಶಿವ, ಆನೆಬಲ, ಅಸುರ ಸಂಹಾರ, ಜಗ್ಗಿ ಜಗನ್ನಾಥ್, ರಾಗಶೃಂಗ, ಮಾಯಾ ಕನ್ನಡಿ ಹಾಗೂ ಪುಷ್ಪ ಐ ಹೇಟ್ ಟಿಯರ್ಸ್ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಅವುಗಳಲ್ಲಿ ಪುನೀತ್ ರಾಜ್​​ಕುಮಾರ್ ಪಿಆರ್​ಕೆ ಸಂಸ್ಥೆಯ ಮಾಯಾಬಜಾರ್ ಹಾಗೂ ರಾಜವರ್ಧನ್ ಅಭಿನಯದ ಬಿಚ್ಚುಗತ್ತಿ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತವೆ.

Kannada movies
ಕನ್ನಡ ಸಿನಿಮಾಗಳು
author img

By

Published : Feb 28, 2020, 11:41 AM IST

ಮಾಯಾಬಜಾರ್​​​​​​​​​​​​

ಪುನೀತ್ ರಾಜ್​​ಕುಮಾರ್ ಅವರ ಪಿಆರ್​ಕೆ ಬ್ಯಾನರ್ ಅಡಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್​​​ಕುಮಾರ್ ಹಾಗೂ ಎಂ. ಗೋವಿಂದು ಜಂಟಿ ನಿರ್ಮಾಣದ ಎರಡನೇ ಸಿನಿಮಾ 'ಮಾಯಾ ಬಜಾರ್' ಇಂದು ಬಿಡುಗಡೆಯಾಗುತ್ತಿದೆ. ಅಭಿಷೇಕ್​​​​​​ ಕಾಸರಗೋಡು ಛಾಯಾಗ್ರಹಣ, ಮಿದುನ್ ಮುಕುಂದನ್ ಸಂಗೀತ, ಯೋಗರಾಜ್ ಭಟ್ ಹಾಗೂ ಪವನ್ ಗೀತ ಸಾಹಿತ್ಯ ಒದಗಿಸಿದ್ದಾರೆ. ಇದು ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಮೊದಲ ಸಿನಿಮಾ. ಜಗದೀಶ್ ಸಂಕಲನ, ಹರ್ಷ ಹಾಗೂ ಧನು ನೃತ್ಯ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ. ಶೆಟ್ಟಿ, ವಸಿಷ್ಠ ಎನ್. ಸಿಂಹ, ಚೈತ್ರಾ ರಾವ್, ಪ್ರಕಾಶ್​​​​​​​​​​​​​​​​ ರೈ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಸುಧಾರಾಣಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಒಂದು ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಜ್ಜೆ ಹಾಕಿದ್ದಾರೆ.

Kannada movies
ಮಾಯಾ ಬಜಾರ್
Kannada movies
ಮಾಯಾ ಬಜಾರ್ ಅತಿಥಿ ಪಾತ್ರದಲ್ಲಿ ಪುನೀತ್

ಬಿಚ್ಚುಗತ್ತಿ

ಕನ್ನಡ ಚಿತ್ರರಂಗದಲ್ಲಿ ಚರಿತ್ರೆಯ ಪುಟಗಳನ್ನು ತಿರುವು ಹಾಕುವ ಪ್ರಯತ್ನ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಇದೀಗ ಚಿತ್ರದುರ್ಗದ ಮದಕರಿ ವಂಶದ ಬಿಚ್ಚುಗತ್ತಿ ಭರಮಣ್ಣ ನಾಯಕ ಕುರಿತ 'ಬಿಚ್ಚುಗತ್ತಿ' ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಹರಿ ಸಂತೋಷ್​​​​​​​​​​​​​​​​​​​​ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಭರಮಣ್ಣ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.

Kannada movies
ಬಿಚ್ಚುಗತ್ತಿ ಚಿತ್ರದಲ್ಲಿ ರಾಜವರ್ಧನ್​​​

ಹೆಸರಾಂತ ಕಾದಂಬರಿಕಾರ ಬಿ.ಎಲ್​​​​​. ವೇಣು ಅವರ ‘ದಳವಾಯಿ ಮುದ್ದಣ್ಣ’ ಕಾದಂಬರಿ ಭಾಗ 1 ಆಗಿ ತೆರೆ ಮೇಲೆ ಬರುತ್ತಿದೆ. ಹರಿಪ್ರಿಯಾ ಈ ಚಿತ್ರದಲ್ಲಿ ನಾಯಕಿ ಸಿದ್ದಾಂಬೆ ಪಾತ್ರ ನಿರ್ವಹಿಸಿದ್ದಾರೆ. ಬಾಹುಬಲಿ ಖ್ಯಾತಿಯ ಪ್ರಭಾಕರ್ ದಳವಾಯಿ ಮುದ್ದಣ್ಣ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀನಿವಾಸಮೂರ್ತಿ, ಶರತ್ ಲೋಹಿತಾಶ್ವ, ಕಲ್ಯಾಣಿ, ಶಿವರಾಮಣ್ಣ, ರೇಖಾ, ರಮೇಶ್ ಪಂಡಿತ್, ಡಿಂಗ್ರಿ ನಾಗರಾಜ್, ಪ್ರಕಾಶ್​​​​​ ಹೆಗ್ಗೋಡು, ಸುನೇತ್ರ ಪಂಡಿತ್, ಉಗ್ರಂ ಮಂಜು ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.

Kannada movies
ಬಿಚ್ಚುಗತ್ತಿ ಚಿತ್ರದಲ್ಲಿ ಹರಿಪ್ರಿಯಾ

ಚಿತ್ರದಲ್ಲಿ ಆರು ಸಾಹಸ ಸನ್ನಿವೇಶಗಳಿದ್ದು ರವಿವರ್ಮ, ವಿಜಯ್, ವಿನೋದ್​​​, ಸಣ್ಣಪ್ಪ ಹಾಗೂ ವಿಕ್ರಮ್ ಫೈಟ್ ಕೊರಿಯೋಗ್ರಫಿ ಮಾಡಿದ್ದಾರೆ. ಶ್ರೀ ಕೃಷ್ಣ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾಗೆ ಕೆ.ಎಂ. ಪ್ರಕಾಶ್ ಸಂಕಲನ, ಎಡ್ವರ್ಡ್ ಕೆನಡಿ ಕಲಾ ನಿರ್ದೇಶನ, ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಗುರು ಪ್ರಶಾಂತ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

ಓ ಪುಷ್ಪ ಐ ಹೇಟ್ ಟಿಯರ್ಸ್

'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಖ್ಯಾತರಾದ, ಬಿಗ್​​ಬಾಸ್​​​​ ಮಾಜಿ ಸ್ಪರ್ಧಿ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ನಟಿಸಿರುವ 'ಓ ಪುಷ್ಪ ಐ ಹೇಟ್ ಟಿಯರ್ಸ್' ಸಿನಿಮಾ ಇಂದು ತೆರೆ ಕಾಣುತ್ತಿದೆ. ಈ ಸಿನಿಮಾ ಹಿಂದಿ ಭಾಷೆಯಲ್ಲಿ ತಯಾರಾಗಿದ್ದು ಹಿಂದಿಗೆ ಡಬ್ ಆಗಿದೆ. 'ಸಿಯಾ ಕಿ ರಾಮ್​' ಹಿಂದಿ ಮೆಗಾ ಧಾರಾವಾಹಿ ಮೂಲಕ ರಾವಣ ಆಗಿ ಘರ್ಜಿಸಿದ್ದ ಜೆಕೆ ಈ ಚಿತ್ರದ ಮೂಲಕ ಬಾಲಿವುಡ್​​ಗೆ ಕಾಲಿಟ್ಟಿದ್ದಾರೆ. ಇದು ಥ್ರಿಲ್ಲರ್ ಸಿನಿಮಾ ಕೂಡಾ ಎನ್ನಲಾಗಿದ್ದು ದಿನಕರ್ ಕಪೂರ್ ನಿರ್ದೇಶನದ ಸಿನಿಮಾವನ್ನು ಅಮೂಲ್ಯ ದಾಸ್ ನಿರ್ಮಿಸಿದ್ದಾರೆ.

Kannada movies
ಪುಷ್ಪ ಐ ಹೇಟ್ ಟಿಯರ್ಸ್​

ಖ್ಯಾತ ಹಾಸ್ಯ ನಟ ಕೃಷ್ಣ ಅಭಿಷೇಕ್​​​​​​​​​​​​​​​​​​​​​​​​​​​​​​​​​​​​​, ಅರ್ಜುಮಾನ್ ಮುಘಲ್, ಅನುಸ್ಮೃತಿ ಸರ್ಕಾರ್, ಅನಘ ದೇಸಾಯಿ, ಪ್ರದೀಪ್ ಕಬ್ರ, ಜಿಮ್ಮಿ ಮೊಸೆಸ್, ಅಖಿಲೇಂದ್ರ ಮಿಶ್ರ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಅರವಿಂದ್ ಸಿಂಗ್ ಪೂವಾರ್ ಛಾಯಾಗ್ರಹಣ ಹಾಗೂ ರಾಂಜಿ ಗುಲಾಟಿ ಚಿತ್ರದ ಹಾಡುಗಳಿಗೆ ಸಂಗೀತ ಒದಗಿಸಿದ್ದಾರೆ.

ಆನೆಬಲ

ಇದು ಮಂಡ್ಯ ಸೊಗಡಿನ ಹಾಗೂ ಸಾಂಸ್ಕೃತಿಕ ಸೊಬಗಿನ ಸಿನಿಮಾ. ಜನತಾ ಟಾಕೀಸ್ ಬ್ಯಾನರ್ ಅಡಿ ಎ.ವಿ. ವೇಣುಗೋಪಾಲ್ ಅಡಕಮಾರನಹಳ್ಳಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸೂಗನಹಳ್ಳಿ ರಾಜು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವಿರುವ ಮೂರು ಹಾಡುಗಳಲ್ಲಿ 'ಮಳವಳ್ಳಿ ಜಾತ್ರೇಲಿ....ಮುದ್ದೆ ಮುದ್ದೆ ರಾಗಿ ಮುದ್ದೆ....ಎನ್ ಚಂದನೇ...' ಹಾಡುಗಳು ಈಗಾಗಲೇ ಜನಪ್ರಿಯತೆ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಮಂಡ್ಯ ಸಂಸ್ಕೃತಿ, ಭಾಷೆ, ಜನ ಜೀವನವನ್ನು ವ್ಯಕ್ತ ಮಾಡುವುದರ ಜೊತೆಗೆ ಮುದ್ದೆ ತಿನ್ನುವ ಸ್ಪರ್ಧೆಯನ್ನು ತೋರಿಸಲಾಗಿದೆ.

Kannada movies
ಆನೆ ಬಲ

ಬೆಟ್ಟೇಗೌಡ ಕೀಲಾರ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಬಿ.ಎಸ್​​. ಕೆಂಪರಾಜ್ ಸಂಕಲನ, ಕಲೈ ನೃತ್ಯ, ಅಲ್ಟಿಮೇಟ್ ಶಿವು ಸಾಹಸ ಒದಗಿಸಿದ್ದಾರೆ. ಖ್ಯಾತ ಕಲಾ ನಿರ್ದೇಶಕ ಈಶ್ವರಿ ಕುಮಾರ್ ಅವರ ಪುತ್ರ ಸಾಗರ್ ಚಿತ್ರದ ಕಥಾ ನಾಯಕ. ರಕ್ಷಿತ, ಮಲ್ಲರಾಜು, ಕೀಲಾರ ಉದಯ್, ಹರೀಶ್ ಶೆಟ್ಟಿ, ಚಿರಂಜೀವಿ ಹಾಗೂ ಇತರರು ತಾರಾಗಣದಲಿದ್ದಾರೆ.

ಶಿವ

ಆರ್​​ವಿಕೆ ಕ್ರಿಯೇಷನ್ಸ್​​​​​​​​​​​​​​​​​​​​​​​​​ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ರೌದ್ರ, ರೋಚಕ ಹಾಗೂ ರಮಣೀಯ ಅಂಶಗಳ ಸಮ್ಮಿಲನ ಇದೆ ಎಂದು ನಿರ್ದೇಶಕ ಹಾಗೂ ನಟ ರಘು ವಿಜಯ್ ಕಸ್ತೂರಿ ಹೇಳುತ್ತಾರೆ. ಮಂಡ್ಯ ಸೊಗಡಿನ ಭಾಷೆ ಜೊತೆಗೆ 25 ಹೊಸ ಕಲಾವಿದರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ರೌಡಿಯೊಬ್ಬನ ಜೀವನ ಹಾಗೂ ಅವನ ಪ್ರೀತಿಯ ವಿಚಾರ ಇಲ್ಲಿ ಪ್ರಮುಖವಾಗಿದೆ.

Kannada movies
ಶಿವ

ರಘು ವಿಜಯ್ ಕಸ್ತೂರಿ ಜೊತೆ ನಾಯಕಿ ಆಗಿ ಧರಣಿ ಅಭಿನಯಿಸಿದ್ದಾರೆ. ಇವರೊಂದಿಗೆ ವಿಕ್ರಮ್ ಯಶೋಧರ, ನಿಶಾಂತ್, ಬೇಬಿ ಸಾನ್ವಿ, ಪಲ್ಲವಿ, ಉಮೇಶ್ ಹಾಗೂ ಇತರರು ನಟಿಸಿದ್ದಾರೆ. ಸತೀಶ್ ಬಾಬು ಸಂಗೀತ, ರಮೇಶ್ ರಾಜ್ ಛಾಯಾಗ್ರಹಣ ಮಾಡಿದ್ದಾರೆ.

Kannada movies
ಜಗ್ಗಿ ಜಗನ್ನಾಥ್

ಜಗ್ಗಿ ಜಗನ್ನಾಥ್

100 ಸಿನಿಮಾಗಳ ನಿರ್ದೇಶಕ ಓಂ ಸಾಯಿಪ್ರಕಾಶ್ ನಿರ್ದೇಶನದ ಚಿತ್ರ ಇದು. ಸಾಮಾನ್ಯ ಪ್ರಜೆಯೊಬ್ಬ ಅಘೋರಿ ಆಗುವ ಕಥಾ ಹಂದರವನ್ನು ಸಿನಿಮಾ ಹೊಂದಿದೆ. ಲಿಖಿತ್ ರಾಜ್ ನಾಯಕ, ಧುನಿಯ ರಶ್ಮಿ ನಾಯಕಿಯಾಗಿ ನಟಿಸಿದ್ದಾರೆ. ರೇಣುಕುಮಾರ್ ಸಂಗೀತ, ಹ್ಯಾರಿಸ್ ಜಾನಿ ಸಾಹಸ ಈ ಚಿತ್ರಕ್ಕಿದೆ.

Kannada movies
ಮಾಯಾಕನ್ನಡಿ ಚಿತ್ರತಂಡ
Kannada movies
ರಾಗಶೃಂಗ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.