ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೊಸಬರ ಎಂಟ್ರಿ ಹೆಚ್ಚಾಗಿದ್ದು, ಹೊಸ ಸಿನಿಮಾಗಳು ಡಿಫರೆಂಟ್ ಟೈಟಲ್ ಇಟ್ಟುಕೊಂಡು ತೆರೆ ಕಾಣುತ್ತಿವೆ. ಇದೀಗ ಅಂತಹದ್ದೇ ಒಂದು ಸಿನಿಮಾ ರೆಡಿಯಾಗುತ್ತಿದೆ. ಅದೇ '19 ಏಜ್ ಈಸ್ ನಾನ್ ಸೆನ್ಸ್'. ಈ ಸಿನಿಮಾ ಕೆಲ ದಿನಗಳ ಹಿಂದೆ ಸೆನ್ಸಾರ್ನಲ್ಲಿ ಪಾಸಾಗಿದ್ದು ಈ ವಾರ ರಿಲೀಸ್ ಆಗುತ್ತಿದೆ.
ಈ ಬಗ್ಗೆ ತಿಳಿಸೋಕೆ ನಿರ್ದೇಶಕ ಎಮ್ ಗಿಣಿ, ಯುವ ನಟ ಮನುಷ್, ನಟಿ ಮಧುಮಿತ , ಬಾಲು ಹಾಗು ನಿರ್ಮಾಪಕ ಎಸ್ ಲೋಕೇಶ್ ಸುದ್ದಿಗೋಷ್ಠಿ ನಡೆಸಿದ್ರು. ಈ ಚಿತ್ರದಲ್ಲಿರುವ ಕಂಟೆಂಟ್ ನೋಡಿ ತಮಿಳಿನ ಚಿತ್ರದ ವಿತರಕ ಪ್ರಸಾದ್ ಸಿನಿಮಾವನ್ನ ತಮಿಳಿಗೆ ರಿಮೇಕ್ ಮಾಡಲು ಕೇಳಿದ್ದಾರೆ ಅಂತಾ ನಿರ್ದೇಶಕ ಎಮ್ ಗಿಣಿ ಹೇಳಿದ್ರು.
ಇನ್ನು ಈ ಸಿನಿಮಾ 19 ರಿಂದ 25 ವಯಸ್ಸಿನ ಹದಿ ಹರೆಯದ ಹುಡುಗ-ಹುಡುಗಿಯರ ಪ್ರೀತಿ, ಮನಸಿನ ತಾಕಲಾಟದ ಕಥೆಯಾಗಿದೆ. ನಿರ್ಮಾಪಕ ಎಸ್. ಲೋಕೇಶ್ ಮನುಷ್ ಆಸೆಯಂತೆ ಈ ಸಿನಿಮಾ ನಿರ್ಮಾಣ ಮಾಡಿದ್ದು, ತಮಿಳಿನ ನಟಿ ಮಧುಮಿತ ಮನುಷ್ಗೆ ಜೋಡಿಯಾಗಿದ್ದಾರೆ.
ಇನ್ನು ಉಳಿದಂತೆ ಅನು ಬಾಲು ಈ ಚಿತ್ರದಲ್ಲಿ ವಿಭಿನ್ನವಾದ ಪಾತ್ರ ಮಾಡಿದ್ದಾರೆ. ಎಂ ಗಿಣಿ ನಿರ್ದೇಶನದ ಜೊತೆ ಚಿತ್ರಕಥೆ, ಸಂಭಾಷಣೆಯನ್ನೂ ಮಾಡಿದ್ದಾರೆ. ಸಿನಿಮಾದಲ್ಲಿ ವಿ.ನಾಗೇಂದ್ರ ಪ್ರಸಾದ್ ಹಾಡುಗಳಿವೆ. ಈ ವಾರ ತೆರೆ ಕಾಣುತ್ತಿರುವ ಹತ್ತು ಸಿನಿಮಾಗಳಲ್ಲಿ 19 ಏಜ್ ಈಸ್ ನಾನ್ ಸೆನ್ಸ್ ಸಿನಿಮಾ ಪ್ರೇಕ್ಷಕರ ಮನ ಸೇರುತ್ತೋ ಇಲ್ವೋ ಎಂಬುದನ್ನ ಕಾದು ನೋಡಬೇಕು.