ETV Bharat / sitara

'ಹಾಟ್​ಶಾಟ್​' ಆ್ಯಪ್​ಗಾಗಿ ನನ್ನನ್ನು ಸಂಪರ್ಕಿಸಿದ್ದರು: Kundra ಮುಖವಾಡ ಕಳಚಿಟ್ಟ Puneeth Kaur! - ರಾಜ್​ ಕುಂದ್ರಾ ಸುದ್ದಿ

ರಾಜ್​ ಕುಂದ್ರಾ ತಮ್ಮ ಆ್ಯಪ್​ನಲ್ಲಿ ಕೆಲಸ ಮಾಡಲು ಮೆಸೇಜಿಂಗ್ ಮೂಲಕ ನನ್ನನ್ನು ಸಂಪರ್ಕಿಸಿದ್ದಾರೆ. ಅಷ್ಟೇ ಅಲ್ಲದೆ, ನಗ್ನವಾಗಿ ಫೋಟೋಶೂಟ್​ ಮಾಡಿಸಲು ಒತ್ತಾಯಿಸಿದ್ದರು ಎಂದು ಯೂಟ್ಯೂಬರ್ ಪುನೀತ್ ಕೌರ್ ಹೇಳಿದ್ದಾರೆ.

YouTuber Puneet Kaur
ಯೂಟ್ಯೂಬರ್ ಪುನೀತ್ ಕೌರ್
author img

By

Published : Jul 22, 2021, 6:58 AM IST

ಮುಂಬೈ: ಅಶ್ಲೀಲ ಚಿತ್ರ ನಿರ್ಮಿಸಿರುವ ಆರೋಪದಡಿ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಬಂಧನವಾದ ಬೆನ್ನಲ್ಲೇ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಯೂಟ್ಯೂಬರ್ ಪುನೀತ್ ಕೌರ್ ಅವರು ಸಹ ಮಾತನಾಡಿದ್ದು, ತಮ್ಮ ಮೊಬೈಲ್ ಆ್ಯಪ್‌ಗಾಗಿ ಸೋಷಿಯಲ್ ಮೀಡಿಯಾ ಡೈರೆಕ್ಟ್ ಮೆಸೇಜಿಂಗ್ ಮೂಲಕ ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜ್​ ಕುಂದ್ರಾ ತಮ್ಮ ಆ್ಯಪ್​ನಲ್ಲಿ ಕೆಲಸ ಮಾಡಲು ಮೆಸೇಜಿಂಗ್ ಮೂಲಕ ನನ್ನನ್ನು ಸಂಪರ್ಕಿಸಿದ್ದಾರೆ. ಅಷ್ಟೇ ಅಲ್ಲದೆ, ನಗ್ನವಾಗಿ ಫೋಟೋಶೂಟ್​ ಮಾಡಿಸಲು ಒತ್ತಾಯಿಸಿದ್ದರು. ಆದರೆ ಅದಕ್ಕೆ ನಾನು ಒಪ್ಪಲಿಲ್ಲ. ಕೊನೆಗೆ ಅವರ ಒತ್ತಡಕ್ಕೆ ಮಣಿದು ಮಾದಕ ಫೋಟೋಶೂಟ್​ನಲ್ಲಿ ಪಾಲ್ಗೊಂಡಿದ್ದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಅವಕಾಶಕ್ಕಾಗಿ ‘ನಗ್ನ ಆಡಿಷನ್​​’ ನೀಡುವಂತೆ ಹೇಳಿದ್ದರು: ರಾಜ್ ಕುಂದ್ರಾ ಕರಾಳ ಮುಖ ಬಿಚ್ಚಿಟ್ಟ ಮಾಡೆಲ್​!

ಸದ್ಯ ಕುಂದ್ರಾ ಅವರು ಮುಂಬೈ ಪೊಲೀಸರ ವಶದಲ್ಲಿದ್ದು, ನ್ಯಾಯಾಲಯ ಅವರನ್ನು ಜುಲೈ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಲಂಡನ್​ ಕಂಪನಿ ಜೊತೆ ಕುಂದ್ರಾ ನಂಟು:

ಉದ್ಯಮಿ ರಾಜ್ ಕುಂದ್ರಾ ಅವರ ಕಂಪನಿಯು ಲಂಡನ್ ಮೂಲದ ಸಂಸ್ಥೆಯೊಂದರ ಜೊತೆ ಸಂಬಂಧಿಯೊಬ್ಬರ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ಈ ಸಂಸ್ಥೆ ಅಶ್ಲೀಲ ಚಿತ್ರ ನಿರ್ಮಿಸುವ ಕಾರ್ಯ ಮಾಡುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜ್ ಕುಂದ್ರಾ ಅವರ ‘ವಯಾನ್ ಇಂಡಸ್ಟ್ರೀಸ್’ ಲಂಡನ್ ಮೂಲದ ‘ಕೆನ್ರಿನ್’ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಇದು 'ಹಾಟ್‌ಶಾಟ್ಸ್' ಆ್ಯಪ್ ಮೂಲಕ ಅಶ್ಲೀಲ ಚಿತ್ರಗಳನ್ನು ಪ್ರಕಟಿಸುವುದರಲ್ಲಿ ಭಾಗಿಯಾಗಿದೆ. ಈ ಕೆನ್ರಿನ್ ಸಂಸ್ಥೆ ರಾಜ್ ಕುಂದ್ರಾ ಸೋದರ ಮಾವನ ಒಡೆತನದಲ್ಲಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೊತೆಗೆ ಅವರ ಮುಂಬೈ ಕಚೇರಿಯಲ್ಲಿ ಶೋಧ ನಡೆಸಿದ್ದ ಪೊಲೀಸರಿಗೆ ಹಲವು ಸುಳಿವು ಸಿಕ್ಕಿದ್ದು, ವಾಟ್ಸ್​ಆ್ಯಪ್ ಚಾಟ್​​, ಇ-ಮೇಲ್ ಮತ್ತು ಕೆಲ ಅಶ್ಲೀಲ ಚಿತ್ರಗಳ ಕಳುಹಿಸಿರುವ ದಾಖಲೆ ಸಹ ಪತ್ತೆಯಾಗಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.