ETV Bharat / sitara

ನೋಡಿದಷ್ಟು ಸುಲಭ ಅಲ್ಲ... ಕ್ಯಾನ್ಸರ್​​​​​​​​​​​​​​​​​​​​ಬಾಧಿತ ಸೋನಾಲಿ ಬೇಂದ್ರೆ ಹೀಗೆ ಹೇಳಿದ್ದು ಏಕೆ? - undefined

ಕ್ಯಾನ್ಸರ್​​ನಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಮುಂಬೈನಲ್ಲಿ ಆಕ್ವಾ ಥೆರಪಿ ಟ್ರೀಟ್​​ಮೆಂಟ್ ಪಡೆಯುತ್ತಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ಸೋನಾಲಿ, ಇದು ನೋಡಿದಷ್ಟು ಸುಲಭ ಅಲ್ಲ. ಈ ವ್ಯಾಯಾಮ ಮಾಡುವುದು ಬಹಳ ಕಷ್ಟ ಎಂದು ಹೇಳಿದ್ದಾರೆ.

ಸೋನಾಲಿ ಬೇಂದ್ರೆ
author img

By

Published : Jun 11, 2019, 4:37 PM IST

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್​​ನಿಂದ ಬಳಲುತ್ತಿದ್ದು, ಇಂದಿಗೂ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮನ್ನು ಪೀಡಿಸುತ್ತಿರುವ ಕ್ಯಾನ್ಸರ್​ಗಾಗಿ ನ್ಯೂಯಾರ್ಕಿಗೆ ತೆರಳಿ ಕಿಮೋ ಥೆರಪಿ ಟ್ರೀಟ್​​​ಮೆಂಟ್ ಪಡೆದು ಬಂದಿದ್ದಾರೆ.

ಬಹಳ ದಿನಗಳ ನಂತರ ನ್ಯೂಯಾರ್ಕಿನಿಂದ ಮುಂಬೈಗೆ ಬಂದ ಸೋನಾಲಿ ಇಂದಿಗೂ ಟ್ರೀಟ್​​​ಮೆಂಟ್ ಪಡೆಯುತ್ತಿದ್ದಾರೆ. ಚಿಕಿತ್ಸೆಯ ಭಾಗವಾಗಿ ಪ್ರಸ್ತುತ ಆಕ್ವಾ ಥೆರಪಿ ಪಡೆಯುತ್ತಿದ್ದಾರೆ. ನೀರು ತುಂಬಿದ ಟ್ಯಾಂಕರ್​​​ನಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದನ್ನು ಸೋನಾಲಿ ತಮ್ಮ ಇನ್ಸ್​​ಟಾಗ್ರಾಮ್​​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುತ್ತಾ, 'ಇದು ನೋಡಿದಷ್ಟು ಸುಲಭವಲ್ಲ, ಈ ಆಕ್ವಾ ಥೆರಪಿ ಟ್ರೀಟ್​ಮೆಂಟ್ ಬಹಳ ಕಷ್ಟಕರವಾಗಿದೆ. ಆದರೆ ಆರೋಗ್ಯ ಸರಿ ಇದ್ದರೆ ಮಾತ್ರ ಈ ವ್ಯಾಯಾಮವನ್ನು ಸುಲಭವಾಗಿ ಮಾಡಬಹುದು' ಎಂದು ಹೇಳಿಕೊಂಡಿದ್ದಾರೆ.

sonlai bendre
ಸೋನಾಲಿ ಬೇಂದ್ರೆ

ಈ 'ಪ್ರೀತ್ಸೆ' ಸುಂದರಿ ವಿಡಿಯೋ ನೋಡಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ತಮ್ಮ ಮೆಚ್ಚಿನ ನಟಿ ಮತ್ತೆ ಮೊದಲಿನಂತೆ ಆಗಲಿ ಎಂದು ಹಲವರು ಹಾರೈಸಿದ್ದಾರೆ. ಸೋನಾಲಿ ಅವರ ಈ ಪ್ರಯಾಣ ಕ್ಯಾನ್ಸರ್​​​ನಿಂದ ಬಳಲುತ್ತಿರುವವರಿಗೆ ಸ್ಫೂರ್ತಿದಾಯಕ. ಆಕೆ ಶಕ್ತಿವಂತ ಮಹಿಳೆ, ನೋವನ್ನೂ ನಗುತ್ತಾ ಸ್ವೀಕರಿಸುತ್ತಿರುವ ನಿಮಗೆ ಹ್ಯಾಟ್ಸ್​​​ ಆಫ್ ಎಂದು ಹೊಗಳಿದ್ದಾರೆ.

Intro:Body:

sonali bendre

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.