ಹೈದರಾಬಾದ್ : ಈದ್ ವೇಳೆ ಬಿಡುಗಡೆಯಾದ ಸಲ್ಮಾನ್ ಖಾನ್ ಅಭಿನಯದ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದಲ್ಲಿ ನಟ ಗೌತಮ್ ಗುಲಾಟಿ ಖಳನಟರಾಗಿ ನಟಿಸಿದ್ದಾರೆ.
ಈ ಸಿನಿಮಾದಲ್ಲಿ ಗೌತಮ್ ಸೂಪರ್‌ಸ್ಟಾರ್‌ಗಳೊಂದಿಗೆ ಹಲವಾರು ಫೈಟ್ ಸೀಕ್ವೆನ್ಸ್‌ಗಳನ್ನು ಹೊಂದಿದ್ದು, ಅಂತದೇ ಒಂದು ಆ್ಯಕ್ಷನ್ ಸೀನ್ ಚಿತ್ರೀಕರಣ ಮಾಡುವಾಗ ಗೌತಮ್ ಅಕಸ್ಮಾತ್ ಆಗಿ ಸಲ್ಮಾನ್‌ಗೆ ಹೊಡೆದರಂತೆ.
- " class="align-text-top noRightClick twitterSection" data="">
ಫೈಟ್ ದೃಶ್ಯದಲ್ಲಿ ಅಕಸ್ಮಾತ್ ಆಗಿ ಹೇಗೆ ಸಲ್ಮಾನ್ ಅವರಿಗೆ ಹೊಡೆದೆ ಎಂದು ಗೌತಮ್ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ರು. ಸಿನಿಮಾ ಚಿತ್ರೀಕರಣದ ವೇಳೆ ಫೈಟಿಂಗ್ ಸನ್ನಿವೇಷಗಳ ಶೂಟಿಂಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾಗಿ ಹೇಳಿದ್ರು.
ಪ್ರಾಮಾಣಿಕವಾಗಿ, ನಾನು ಕೆಲವು ವಿಷಯಗಳನ್ನು ಕಲಿಯಬೇಕಾಗಿತ್ತು. ನಾಯಕನಾಗಿ ನಾನು ಹೇಗೆ ಫೈಟ್ ಮಾಡಬೇಕೆಂದು ಬಲ್ಲೆ. ಆದರೆ, ಈ ಸೀನ್ನಲ್ಲಿ ನಾನು ಖಳನಾಯಕನ ಪಾತ್ರದಲ್ಲಿದ್ದು, ಹೀರೋಯಿಂದ ಹೇಗೆ ಹೊಡೆಸಿಕೊಳ್ಳಬೇಕು ಎಂಬುದನ್ನು ಕಲಿಯಬೇಕಾಯ್ತು ಎಂದ್ರು.
- " class="align-text-top noRightClick twitterSection" data="
">
ಹಾಗಾಗಿ, ಒಮ್ಮೆ, ಸಲ್ಮಾನ್ ಸರ್ಗೆ ಮಿಸ್ ಆಗಿ ಹೊಡೆದೆ ಎಂದು ಗೌತಮ್ ಹೇಳಿದರು. ನಂತರ ಅವರು ತಕ್ಷಣವೇ ಅವರನ್ನು ಕ್ಷಮೆಯಾಚಿಸಿದರು. ಆದರೆ, ಸಲ್ಮಾನ್ ಡೋಂಟ್ ವರಿ ಅದರ ಬಗ್ಗೆ ಚಿಂತಿಸಬೇಡಿ ಎಂದ್ರು ಎಂದು ಹೇಳಿದ್ರು.
ಆ್ಯಕ್ಷನ್ ದೃಶ್ಯಕ್ಕೆ ಸಾಕಷ್ಟು ತರಬೇತಿಯ ಅಗತ್ಯವಿತ್ತು. ಕೆಲವೊಮ್ಮೆ ಬೆಳಗ್ಗೆಯಿಂದ ರಾತ್ರಿಯವರೆಗೆ ಪ್ರಾಕ್ಟೀಸ್ ನಡೆಸುತ್ತಿದ್ದೆವು ಎಂದು ಗೌತಮ್ ಹೇಳಿದರು.