ಮುಂಬೈ : ಕ್ಯಾನ್ಸರ್ನಿಂದ ಬಳಲುತ್ತಿರುವ ಬಡ ಮಕ್ಕಳಿಗೆ ಸಹಾಯ ಮಾಡಲು ದೇಣಿಗೆ ನೀಡುವಂತೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಟ್ಟಿರುವ ಒಬೆರಾಯ್, ಹಲವಾರು ಮಕ್ಕಳು ಈಗಾಗಲೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ರೋಗ ನಿರೋಧಕ ಶಕ್ತಿಯ ಕೊರತೆಯಿಂದ ಬಳಲುತ್ತಿದ್ದಾರೆ. ಅಂತವರ ಮೇಲೆ ಕೊರೊನಾ ವೈರಸ್ ದಾಳಿ ಮಾಡುವ ಸಾಧ್ಯತೆಗಳು ಹೆಚ್ಚು, ಕಳೆದ ಕೆಲ ತಿಂಗಳಿನಿಂದ ಕೊರೊನಾ ವೈರಸ್ ಜಗತ್ತಿನಾದ್ಯಂತ ರೌದ್ರ ನರ್ತನ ಮಾಡುತ್ತಿದೆ. ಈ ನಡುವೆ ಹಲವಾರು ಬಡ ಕುಂಟುಬಗಳು ಕ್ಯಾನ್ಸರ್ಗೆ ತುತ್ತಾಗಿರುವ ಮಕ್ಕಳನ್ನು ಇಲ್ಲಿಗೆ ( ಮೆಟ್ರೋಪಾಲಿಟನ್ ನಗರ) ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದಾರೆ. ಅಂತವರಿಗೆ ನೆರವಾಗೋಣ ಎಂದು ಕೇಳಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ನೆರವಾಗಲು ನಿಮ್ಮ ಸಹಾಯ ಬೇಕು ಎಂದು ಎಂದಿದ್ದಾರೆ.