ETV Bharat / sitara

ವಿಡಿಯೋ ಶೇರ್​ ಮಾಡಿದ ವಿರಾಟ್ ​: ಹಾಡಿನ ಮೂಲಕ ಪತ್ನಿಗೆ ಶ್ಲಾಘನೆ - ಮೇರೆ ಮೆಹಬೂಬ್ ಕಯಾಮತ್ ಹೋಗಿ

ವಿರುಷ್ಕಾ ದಂಪತಿ ಮಾಡುವ ವಿವಿಧ ಕೆಲಸಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ವಿರಾಟ್ ಹಳೆಯ ವಿಡಿಯೋವೊಂದನ್ನು ಶೇರ್​ ಮಾಡಿದ್ದು, ಅದರಲ್ಲಿನ ಹಾಡನ್ನು ಅನುಷ್ಕಾಗೆ ಅರ್ಪಿಸಿದಂತೆ ಭಾಸವಾಗುತ್ತಿದೆ..

virushka
ವಿರುಷ್ಕಾ ದಂಪತಿ
author img

By

Published : Jun 16, 2021, 4:48 PM IST

ನವದೆಹಲಿ : ಭಾರತೀಯ ಕ್ರಿಕೆಟ್​ ತಂಡದ ನಾಯಕ​ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ದಂಪತಿ ಮಾಡುವ ವಿವಿಧ ಕೆಲಸಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಇವರಿಬ್ಬರ ವಿಡಿಯೋವೊಂದು ವೈರಲ್​ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

ಹಳೆಯ ವಿಡಿಯೋವೊಂದನ್ನು ಶೇರ್​ ಮಾಡಿರುವ ವಿರಾಟ್​, ತನ್ನ ಕುಟುಂಬ, ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಎಲ್ಲರೂ ಅನುಷ್ಕಾರನ್ನು ಹೊಗಳುವ ರೀತಿಯಲ್ಲಿ ‘ಮೇರೆ ಮೆಹಬೂಬ್ ಕಯಾಮತ್ ಹೋಗಿ’ ಎಂಬಂತೆ ಹಾಡನ್ನು ಹಾಡುತ್ತಿದ್ದಾರೆ. ಇನ್ನು, ಕ್ಯಾಮೆರಾವನ್ನು ಕೊಹ್ಲಿ ಅನುಷ್ಕಾ ಕಡೆಗೆ ತಿರುಗಿಸಿದ್ದು, ಈ ಮೂಲಕ ಹಾಡನ್ನು ಅನುಷ್ಕಾಗೆ ಅರ್ಪಿಸಿದಂತೆ ಭಾಸವಾಗುತ್ತಿದೆ.

ಇದನ್ನು ಓದಿ: ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸಿ ವಿರುದ್ಧ ಕಾನೂನು ಹೋರಾಟ ಗೆದ್ದ ಬಿಸಿಸಿಐ

ವಿರುಷ್ಕಾ ದಂಪತಿ ಎಂದೇ ಫೇಮಸ್​ ಆಗಿರುವ ಇವರು ನಾಲ್ಕು ವರ್ಷಗಳ ಹಿಂದೆ ಇಟಲಿಯಲ್ಲಿ ಮದುವೆಯಾಗಿದ್ದರು. ಇದೀಗ ಇವರಿಗೆ ವಮಿಕಾ ಎಂಬ ಮುದ್ದಾದ ಮಗಳಿದ್ದಾಳೆ. ವಿರಾಟ್ ಕೊಹ್ಲಿ, ಅನುಷ್ಕಾ ಮತ್ತು ಅವರ ಪುತ್ರಿ ವಮಿಕಾ ಪ್ರಸ್ತುತ ಇಂಗ್ಲೆಂಡ್‌ನಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.