ನವದೆಹಲಿ: ಬಾಲಿವುಡ್ ನಟ ವರುಣ್ ಧವನ್ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಬೀಗಲ್ ಜಾತಿಯ ನಾಯಿಮರಿಯನ್ನು ಧವನ್ ಪಡೆದುಕೊಂಡಿದ್ದು, ಅದಕ್ಕೆ 'ಜೋಯ್' ಎಂದು ನಾಮಕರಣ ಮಾಡಿದ್ದಾರೆ. ಇದರ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಕೂಡಾ ಮಾಡಿದ್ದಾರೆ.
ವರುಣ್ ಮತ್ತು ಜೋಯ್ ಸಖತ್ ಎಂಜಾಯ್ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ವಿಡಿಯೋದಲ್ಲಿ ವರುಣ್ ನಾಯಿಮರಿಯೊಂದಿಗೆ ಆಟ ಆಡುತ್ತಿದ್ದು, ಜೋಯ್ ಸಹ ಮುದ್ದಾಗಿ ಕಾಣುತ್ತಿದೆ. ವರುಣ್ ಜೊತೆ ಕೆಲಸದ ಸಂದರ್ಭದಲ್ಲಿ, ಜಿಮ್ನಲ್ಲಿ ವರ್ಕೌಟ್ ಮಾಡುವಾಗಲೂ ಜೋಯ್ ಜೊತೆಯಾಗಿ ಕಾಣುತ್ತಿದೆ.
- " class="align-text-top noRightClick twitterSection" data="
">
ಇನ್ನು ಕಳೆದ ತಿಂಗಳಷ್ಟೇ ಮನೆಗೆ ಹೊಸ ಅತಿಥಿಯನ್ನು ಧವನ್ ಸ್ವಾಗತಿಸಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು.