ETV Bharat / sitara

₹200 ಕೋಟಿ ಕ್ಲಬ್​ ಸೇರಿದ 'ದಿ ಕಾಶ್ಮೀರ್​ ಫೈಲ್ಸ್​' ಸಿನಿಮಾ - 200 ಕೋಟಿ ಕ್ಲಬ್​ಗೆ ದಿ ಕಾಶ್ಮೀರ್​ ಫೈಲ್ಸ್ ಸಿನಿಮಾ

ಕಾಶ್ಮೀರದಲ್ಲಿ ಪಾಕ್‌ ಬೆಂಬಲಿಕ ಮುಸ್ಲಿಂ ಮೂಲಭೂತವಾದಿಗಳಿಂದ ನಡೆದ ಬ್ರಾಹ್ಮಣ ಪಂಡಿತರ ನರಮೇಧದ ಕುರಿತು ಚಿತ್ರಿಸಲಾದ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ಇದೀಗ 200 ಕೋಟಿ ರೂ ಕ್ಲಬ್​ ಸೇರಿದೆ.

The Kashmir Files
ದಿ ಕಾಶ್ಮೀರ್​ ಫೈಲ್ಸ್
author img

By

Published : Mar 24, 2022, 4:17 PM IST

ಮುಂಬೈ: ದೇಶದ ಗಮನ ಸೆಳೆದಿರುವ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ಇದೀಗ 200 ಕೋಟಿ ಕ್ಲಬ್​ ಸೇರಿದೆ. ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ಸಿನಿಮಾ 200.13 ಕೋಟಿ ರೂಪಾಯಿ ಗಳಿಸಿದೆ. ಈ ಬಗ್ಗೆ ಭಾರತೀಯ ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ.

ಕಡಿಮೆ ಬಜೆಟ್​ನಲ್ಲಿ ನಿರ್ಮಿಸಿರುವ ದಿ ಕಾಶ್ಮೀರ್‌ ಫೈಲ್ಸ್‌ ದಿನಕಳೆದಂತೆ ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆಯುತ್ತಿದೆ. ಸಿನಿಮಾದಲ್ಲಿ ಅನುಪಮ್​ ಖೇರ್​, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪುನೀತ್ ಇಸ್ಸಾರ್, ಮೃಣಾಲ್ ಕುಲಕರ್ಣಿ ಮತ್ತು ಇತರರು ನಟಿಸಿದ್ದಾರೆ. ಉತ್ತರ ಪ್ರದೇಶ, ತ್ರಿಪುರಾ, ಗೋವಾ, ಹರಿಯಾಣ ಮತ್ತು ಉತ್ತರಾಖಂಡ, ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಲಾಗಿದೆ.

ಇದನ್ನೂ ಓದಿ: ಇನ್​​ಸ್ಟಾಗ್ರಾಮ್​ನಲ್ಲಿ ಮಾಜಿ ಪತಿಯನ್ನು ಅನ್​ಫಾಲೋ ಮಾಡಿದ ಸಮಂತಾ.. ಆದ್ರೆ ನಾಗಚೈತನ್ಯ...?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.