90 ರ ದಶಕದಲ್ಲಿ ಬಾಲಿವುಡ್ ಆಳಿದ್ದ ಸ್ಟಾರ್ ನಟರ ಮಕ್ಕಳು ಕೂಡಾ ಈಗ ಒಬ್ಬೊಬ್ಬರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಶ್ರೀದೇವಿ ಪುತ್ರಿ ಜಾನ್ವಿ ಕಪೂರ್, ಜಾಕಿಶ್ರಾಫ್ ಪುತ್ರ ಟೈಗರ್ ಶ್ರಾಫ್, ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ಹೀಗೆ ಸಾಕಷ್ಟು ಸ್ಟಾರ್ನಟರ ಮಕ್ಕಳು ಬಾಲಿವುಡ್ಗೆ ಕಾಲಿಟ್ಟಿದ್ದಾರೆ.
- " class="align-text-top noRightClick twitterSection" data="">
ಬಾಲಿವುಡ್ ಸನ್ನಿ ಡಿಯೋಲ್ ನಿಮಗೆಲ್ಲಾ ಗೊತ್ತು. ಇದೀಗ ಸನ್ನಿ ಡಿಯೋಲ್ ಪುತ್ರ ಕರಣ್ ಡಿಯೋಲ್ ಕೂಡಾ ಬಾಲಿವುಡ್ಗೆ ಎಂಟ್ರಿ ನೀಡಿದ್ದಾರೆ. ಈಗಾಗಲೇ ಕರಣ್ ನಟಿಸಿರುವ 'ಪಲ್ ಪಲ್ ದಿಲ್ ಕೆ ಪಾಸ್' ಚಿತ್ರದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ನೋಡಿದರೆ ಇದೊಂದು ಪ್ರೇಮಕಥೆ ಎಂದು ಸುಲಭವಾಗಿ ತಿಳಿಯುತ್ತದೆ. ನಾಯಕನ ಗೈಡೆನ್ಸ್ನಲ್ಲಿ ನಾಯಕಿ ಅಡ್ವೆಂಚರ್ ಟ್ರಿಪ್ ಹೊರಡುತ್ತಾಳೆ. ಟ್ರಿಪ್ ಮುಗಿಸಿ ಬರುವಾಗ ನಾಯಕ ತಾನು ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನಿಸುತ್ತದೆ. ಕೊನೆಗೆ ಆಕೆಗೆ ಪ್ರೇಮ ನಿವೇದನೆ ಮಾಡುತ್ತಾನೆ. ಇಬ್ಬರೂ ಪ್ರಣಯ ಪಕ್ಷಿಗಳಂತೆ ತಿರುಗುತ್ತಿರುವಾಗ ಅವರ ಜೀವನದಲ್ಲಿ ಒಂದು ದುರ್ಘಟನೆ ನಡೆಯುತ್ತದೆ. ಇವಿಷ್ಟನ್ನೂ ನೀವು ಟ್ರೇಲರ್ನಲ್ಲಿ ನೋಡಬಹುದು.

ಇನ್ನು ಇದು ಕರಣ್ಗೆ ಮೊದಲ ಚಿತ್ರವಾಗಿದ್ದು ಮಗನನ್ನು ಬಾಲಿವುಡ್ಗೆ ಪರಿಚಯಿಸಲು ಸನ್ನಿ ಡಿಯೋಲ್ ಸ್ವತ: ಹಣ ಹಾಕಿ ಸಿನಿಮಾ ಮಾಡಿದ್ದಾರೆ. ಸನ್ನಿ ಸೌಂಡ್ಸ್ ಪ್ರೈ. ಲಿ. ಪ್ರೊಡಕ್ಷನ್ ಹಾಗೂ ಜೀ ಸ್ಟುಡಿಯೋಸ್ ಜೊತೆ ಸೇರಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಇನ್ನು ಸನ್ನಿ ಡಿಯೋಲ್ ಅವರೇ ಮಗನ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇನ್ನು ಕರಣ್ ಜೊತೆ ಸಹರ್ ಬಂಬಾ ಎಂಬ ಹೊಸ ನಟಿ ಕೂಡಾ ಬಾಲಿವುಡ್ಗೆ ಪರಿಚಯವಾಗುತ್ತಿದ್ದಾರೆ. ಸಿನಿಮಾ ಸೆಪ್ಟೆಂಬರ್ 20 ರಂದು ಬಿಡುಗಡೆಯಾಗಲಿದೆ. ಚಿತ್ರಪ್ರೇಮಿಗಳು ಸನ್ನಿ ಡಿಯೋಲ್ ಪುತ್ರನನ್ನು ಹೇಗೆ ಕೈ ಹಿಡಿಯಲಿದ್ದಾರೆ ಕಾದು ನೋಡಬೇಕು.
