ETV Bharat / sitara

ವಲಸೆ ಕಾರ್ಮಿಕರ ಜೊತೆ ಕಾಲ ಕಳೆದ "ಆ ದಿನಗಳು"ಬಗ್ಗೆ ಸೋನು ಸೂದ್ ಪುಸ್ತಕ!!​ - ವಲಸೆ ಕಾರ್ಮಿಕರು

ಬಡವರ ಜತೆ ಇದ್ದು ಅವರ ನೋವನ್ನು ಕಂಡಿದ್ದೇನೆ. ಇಂತಹವರ ಸಹಾಯಕ್ಕೆ ಮುಂದಾಗಿದ್ದು, ನನಗೆ ತುಂಬಾ ಸಂತಸ ತಂದಿದೆ. ಅವರ ಮುಖದಲ್ಲಿನ ನಗು ನೋಡಿ, ಅವರ ಕಣ್ಣುಗಳಲ್ಲಿನ ಸಂತೋಷದ ಕಣ್ಣೀರು ನನ್ನ ಜೀವನದ ಅತ್ಯಂತ ಸಾರ್ಥಕ ಕ್ಷಣಗಳಾಗಿವೆ’’ ಎಂದು ಸೋನು ಸೂದ್​ ಹೇಳಿದ್ದಾರೆ.

ನಟ ಸೋನು ಸೂದ್​​
ನಟ ಸೋನು ಸೂದ್​​
author img

By

Published : Jul 15, 2020, 7:32 AM IST

ಮುಂಬೈ: ನಟ ಸೋನು ಸೂದ್​​ ಅವರು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ನೆರವಾಗಿದ್ದು ಮತ್ತು ಆ ದಿನಗಳ ಬಗ್ಗೆ ಪುಸ್ತಕವೊಂದನ್ನು ಬರೆಯಲು ಸಜ್ಜಾಗಿದ್ದಾರೆ.

"ಕಳೆದ ಮೂರೂವರೆ ತಿಂಗಳಲ್ಲಿ ಕೊರೊನಾ ತಮ್ಮ ಜೀವನವನ್ನ ಬದಲಾಯಿಸಿದ ಅನುಭವವನ್ನ ನೀಡಿದೆ. ಇಂತಹ ಬಿಕ್ಕಟ್ಟಿನ ಹಾಗೂ ಸಂಕಷ್ಟದ ದಿನಗಳಲ್ಲಿ ವಲಸಿಗರೊಂದಿಗೆ ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ವಾಸಿಸುವ ಅವಕಾಶ ಸಿಕ್ಕಿದ್ದು, ಈ ಮೂಲಕ ಹೊಸ ಅನುಭವ ಪಡೆದಿದ್ದೇನೆ. ಬಡವರ ಜತೆ ಇದ್ದು ಅವರ ನೋವನ್ನು ಕಂಡಿದ್ದೇನೆ. ಇಂತಹವರಿಗೆ ಸಹಾಯಕ್ಕೆ ಮುಂದಾಗಿದ್ದು, ನನಗೆ ತುಂಬಾ ಸಂತಸ ತಂದಿದೆ. ಅವರ ಮುಖದಲ್ಲಿನ ನಗುವನ್ನು ನೋಡಿ, ಅವರ ಕಣ್ಣುಗಳಲ್ಲಿನ ಸಂತೋಷದ ಕಣ್ಣೀರು ನನ್ನ ಜೀವನದ ಅತ್ಯಂತ ಸಾರ್ಥಕ ಕ್ಷಣಗಳಾಗಿವೆ’’ ಎಂದು ಸೋನು ಸೂದ್​ ಹೇಳಿದ್ದಾರೆ.

ನಾನು ವಲಸಿಗರನ್ನ ಮರಳಿ ಅವರ ಗೂಡಿಗೆ ಕಳುಹಿಸಲು ಕೆಲಸ ಮಾಡುವುದನ್ನ ಮುಂದುವರೆಸುತ್ತೇನೆ. ಕೊನೆಯ ವಲಸಿಗನೂ ಅವರ ಹಳ್ಳಿಯನ್ನು ತಲುಪುವವರೆಗೆ ಸಹಾಯ ಮಾಡುತ್ತೇನೆ ಎಂದು ಸೂದ್​ ಇದೇ ವೇಳೆ ಪ್ರತಿಜ್ಞೆಯನ್ನೂ ಮಾಡಿದ್ದಾರೆ.

ಈ ಮೂಲಕ ನಾನು, ಯುಪಿ, ಬಿಹಾರ, ಜಾರ್ಖಂಡ್, ಅಸ್ಸೋಂ, ಉತ್ತರಾಖಂಡ್ ಮತ್ತು ಇತರ ರಾಜ್ಯಗಳ ಹಳ್ಳಿಗಳಲ್ಲಿ ನಾನು ಈಗ ಹೊಸ ಸ್ನೇಹಿತರನ್ನು ಕಂಡುಕೊಂಡಿದ್ದೇನೆ. ಈ ಹೊಸ ಅನುಭವಗಳನ್ನು, ನನ್ನ ಆತ್ಮದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡುತ್ತೇನೆ. ಅದಕ್ಕಾಗಿ ಈ ಅನುಭವಗಳನ್ನ ಪುಸ್ತಕ ರೂಪದಲ್ಲಿ ಇರಿಸಲು ನಾನು ನಿರ್ಧರಿಸಿದ್ದೇನೆ ಎಂದು ಸೂದ್ ಘೋಷಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.