ETV Bharat / sitara

ನನ್ನ ಮಗ ತೈಮೂರ್​ನಂತಾಗಬಾರದು : ಶೋಯೆಬ್ ಅಖ್ತರ್ - ಬಾಲಿವುಡ್

ಪಾಕ್​ನ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಯುಟ್ಯೂಬ್ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jul 6, 2019, 4:42 PM IST

ಬಾಲಿವುಡ್​ ಬೇಬೊ ಕರೀನಾ ಕಪೂರ್ ಪುತ್ರ ​ತೈಮೂರ್ ಅಲಿ ಖಾನ್ ಎಲ್ಲರಿಗೂ ಇಷ್ಟ. ಈ ಚೋಟಾ ಪ್ರಿನ್ಸ್​​​ನ​​ ಕೆನ್ನೆಗಳನ್ನು ಒಮ್ಮೆ ಗಿಲ್ಲಿ ಮುದ್ದಿಸೋ ಆಸೆ ಯಾರಿಗಿಲ್ಲ ಹೇಳಿ. ನಮಗೂ ಇಂತಹ ಕ್ಯೂಟ್ ಕ್ಯೂಟಾಗಿರೋ ಒಂದು ಮಗು ಇದ್ರೆ ಚಂದ ಅಲ್ವಾ ಎಂದು ಅದೆಷ್ಟೋ ದಂಪತಿ ಭಾವಿಸಿದ್ದಾರೋ ಗೊತ್ತಿಲ್ಲ. ಆದರೆ, ಪಾಕ್​​ನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಮಾತ್ರ ನನ್ನ ಮಗ ತೈಮೂರ್​ನಂತೆ ಆಗಬಾರದು ಎಂದಿದ್ದಾರೆ.

ಹೌದು, ಮೊನ್ನೆಯಷ್ಟೆ ಶೋಯೆಬ್ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. ಇವರ ಪತ್ನಿ ರುಬಾಬ್ ಬೇಗಮ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಶೋಯೆಬ್​ ಈ ಖುಷಿಯ ವಿಚಾರವನ್ನು ತಮ್ಮ ಯುಟ್ಯೂಬ್ ಚಾನೆಲ್​​ಲ್ಲಿ ಹಂಚಿಕೊಂಡಿದ್ದಾರೆ.

'ನಾನು ಎರಡನೇ ಬಾರಿಗೆ ತಂದೆಯಾಗಿರುವ ಖುಷಿಯಲ್ಲಿದ್ದೇನೆ. ಮತ್ತೊಂದು ಗಂಡು ಮಗು ನೀಡಿದ ಅಲ್ಲಾಹನಿಗೆ ಕೃತಜ್ಞನಾಗಿದ್ದೇನೆ. ನಮ್ಮ ಮನೆಗೆ ಹೊಸ ಅತಿಥಿಯ ಆಗಮನದ ಸಂತಸವನ್ನು ಅಕ್ಷರಗಳಲ್ಲಿ ವರ್ಣಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ' ಎಂದಿದ್ದಾರೆ. ಮುಂದುವರೆದು ಮಾತಾಡಿರುವ ಅವರು, ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಪುತ್ರ ತೈಮೂರ್​ನಂತೆ ನನ್ನ ಮಗ ಸೆಲಬ್ರಿಟಿಯಾಗಲು ನಾನು ಬಯಸುವುದಿಲ್ಲ ಎಂದಿದ್ದಾರೆ.

ತೈಮೂರ್​ ಖಾನ್​ ಈಗಾಗಲೇ ಸೆಲಬ್ರಿಟಿಯಾಗಿದ್ದಾನೆ. ಈತ ಮನೆಯಿಂದ ಹೊರಬಿದ್ದರೆ ಸಾಕು, ಕ್ಯಾಮರಾ ಕಣ್ಣುಗಳು ಈತನನ್ನೇ ಹಿಂಬಾಲಿಸುತ್ತವೆ. ಈತನ ಮುಖ ಹೋಲುವ ಬೊಂಬೆಗಳು ಕೂಡ ಮಾರಾಟವಾಗುತ್ತಿವೆ. ಈ ವಯಸ್ಸಿನಲ್ಲಿಯೇ ದೊಡ್ಡ ಫ್ಯಾನ್ಸ್ ಫಾಲೋವ್ ಹೊಂದಿದ್ದಾನೆ. ಇದು ಕೆಲವೊಂದು ಬಾರೀ ಈತನ ಖಾಸಗಿ ತನಕ್ಕೂ ಅಡ್ಡಿಯುಂಟು ಮಾಡುವ ಸಾಧ್ಯತೆಯಿದೆ. ಆದ್ದರಿಂದ ಈ ರೀತಿ ನನ್ನ ಮಗನಿಗೆ ಆಗೋದು ಬೇಡ ಎಂಬರ್ಥದಲ್ಲಿ ಶೋಯೆಬ್ ಹೇಳಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.