ETV Bharat / sitara

ಬಾಲಿವುಡ್​ ನಟ ಶಾಹೀದ್​ ಕಪೂರ್​ 'ಹದಿಹರೆಯದ ಹುಡುಗಿಯಂತಿದೀಯಾ' ಅಂದಿದ್ದು ಯಾರಿಗೆ? - ಪತ್ನಿ ಮೀರಾ ಹೊಗಳಿದ ನಟ ಶಾಹೀದ್​ ಕಪೂರ್​

ನಟ ಶಾಹೀದ್​ ಕಪೂರ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪತ್ನಿ ಮೀರಾ ಬಗ್ಗೆ 'ಮೈ ಲವ್​..ಐ ಕ್ರಶಿಂಗ್​ ಆನ್​ ಯೂ..ಆಲ್​ ಓವರ್​ ಅಗೇನ್​..' ಹದಿಹರೆಯದ ಹುಡುಗಿಯಂತೆ ಕಾಣುತ್ತಿದ್ದೀಯಾ' ಅಂತೆಲ್ಲಾ ಬರೆದುಕೊಂಡಿದ್ದಾರೆ.

shahid kapoor
ಬಾಲಿವುಡ್​ ನಟ ಶಾಹೀದ್​ ಕಪೂರ್​
author img

By

Published : Dec 1, 2021, 9:06 PM IST

ಹೈದರಾಬಾದ್(ತೆಲಂಗಾಣ): ಬಾಲಿವುಡ್​ ನಟ ಶಾಹೀದ್​ ಕಪೂರ್​ ಪತ್ನಿ ಮೀರಾ ಕಪೂರ್​ ಇತ್ತೀಚೆಗೆ ಯೂಟ್ಯೂಬ್ ಚಾನೆಲ್​ ಆರಂಭಿಸಿದ್ದು, ಅದರಲ್ಲಿ ಅವರು ಕಾಣಿಸಿಕೊಂಡ ರೀತಿಗೆ ಶಾಹಿದ್​ ಕಪೂರ್​ ಫಿದಾ ಆಗಿದ್ದಾರೆ. ಅಲ್ಲದೇ ಮೀರಾ ಮೇಲೆ ಮತ್ತೆ ಕ್ರಶ್​ ಆಗಿದೆ ಎಂದು ಹೊಗಳಿದ್ದಾರೆ.

ನಟ ಶಾಹೀದ್​ ಕಪೂರ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪತ್ನಿ ಮೀರಾ ಕಪೂರ್​ರ ಯೂಟೂಬ್​ ಚಾನೆಲ್​ನ ಪ್ರೋಮೋ ವಿಡಿಯೋವನ್ನು ಹಂಚಿಕೊಂಡು, 'ಮೈ ಲವ್​..ಐ ಕ್ರಶಿಂಗ್​ ಆನ್​ ಯೂ..ಆಲ್​ ಓವರ್​ ಅಗೇನ್​..' ಹದಿಹರೆಯದ ಹುಡುಗಿಯಂತೆ ಕಾಣುತ್ತಿದ್ದೀಯಾ' ಅಂತೆಲ್ಲಾ ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಾಹೀದ್​ ಕಪೂರ್​ ಸಹೋದರ ಕೂಡ ಮೀರಾಳ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೆಬಿಸಿ ಸೆಟ್​ನಲ್ಲಿ ಬಿಗ್​ ಬಿ ಸುಳ್ಳನ್ನು ಬಯಲು ಮಾಡಿದ ಜಯಾ ಬಚ್ಚನ್

ಮೀರಾ ಕಪೂರ್​ ಅವರು ಆರಂಭಿಸಿರುವ ಯೂಟ್ಯೂಬ್​ ಚಾನಲ್​ನ ಮೊದಲ ವಿಡಿಯೋದಲ್ಲಿ ತಮ್ಮನ್ನು ಪರಿಚಯಿಸಿಕೊಂಡು ಮುಂದಿನ ದಿನಗಳಲ್ಲಿ ಆಯುರ್ವೇದ, ಚರ್ಮ ಮತ್ತು ಕೂದಲಿನ ಆರೋಗ್ಯ, ಮೇಕಪ್​ ಬಗ್ಗೆ ಮಾಹಿತಿ ನೀಡುವೆ ಎಂದು ಹೇಳಿಕೊಂಡಿದ್ದಾರೆ. ಶಾಹಿದ್​ ಕಪೂರ್​ ಮತ್ತು ಮೀರಾ 2015ರಲ್ಲಿ ವಿವಾಹವಾಗಿದ್ದು, ದಂಪತಿಗೆ ಒಂದು ಹೆಣ್ಣು, ಗಂಡು ಮಗುವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.