ETV Bharat / sitara

'ರಾಧೆ' ಚಿತ್ರಕ್ಕೂ ಪೈರಸಿ ಕಾಟ: ಸೈಬರ್​ ಕಳ್ಳರಿಗೆ 'ಚುಲ್‌ಬುಲ್‌ ಪಾಂಡೆ' ಎಚ್ಚರಿಕೆ - ಸಲ್ಮಾನ್ ಖಾನ್

'ಒಂದು ಚಿತ್ರ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ಜನರ ಶ್ರಮವಿರುತ್ತದೆ. ಆದರೆ, ಪೈರಸಿ ಮಾಡಿ ಲೀಕ್ ಮಾಡಿದಾಗ ತುಂಬಾ ದುಃಖವಾಗುತ್ತದೆ. ದಯವಿಟ್ಟು ಸರಿಯಾದ ಪ್ಲಾಟ್‌ಫಾರ್ಮ್‌ನಲ್ಲಿ 'ರಾಧೆ' ಚಿತ್ರವನ್ನು ವೀಕ್ಷಿಸಿ. ಮನರಂಜನೆಯಲ್ಲಿ ಪೈರಸಿ ಬೇಡ ಎಂಬ ಕಮಿಟ್‌ಮೆಂಟ್ ಈದ್ ಸಂದರ್ಭದಲ್ಲಿ ನನಗೆ ಪ್ರೇಕ್ಷಕರಿಂದ ಬೇಕು ಎಂದು ಸಲ್ಮಾನ್ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದರು.

'ರಾಧೆ' ಚಿತ್ರಕ್ಕೆ ಪೈರಸಿ ಕಾಟ
'ರಾಧೆ' ಚಿತ್ರಕ್ಕೆ ಪೈರಸಿ ಕಾಟ
author img

By

Published : May 16, 2021, 11:58 AM IST

Updated : May 16, 2021, 1:24 PM IST

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಂಟೆಡ್‌, ದಬಂಗ್ 3 ನಂತರ ನಿರ್ದೇಶಕ ಪ್ರಭುದೇವ-ಸಲ್ಮಾನ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಸಿನಿಮಾ ಇದಾಗಿದೆ. ಚಿತ್ರತಂಡ ಈದ್ ಹಬ್ಬದ ಪ್ರಯುಕ್ತ ಮೇ 13ರಂದು ಒಟಿಟಿ ಮತ್ತು ಚಿತ್ರಮಂದಿರದಲ್ಲಿ ನೇರವಾಗಿ ತೆರೆಗೆ ತರಬೇಕೆಂದು ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಕೊರೊನಾ ಕಾರಣದಿಂದ ಚಿತ್ರಮಂದಿರ ಪೂರ್ಣ ಪ್ರಮಾಣದಲ್ಲಿ ಬಂದ್​ ಆಗಿದ್ದು, ಒಟಿಟಿಯಲ್ಲಿ ಚಿತ್ರ ರಿಲೀಸ್ ಮಾಡಲಾಗಿದೆ. ಆದರೆ, ತೆರೆಕಂಡ ದಿನದಿಂದ ಚಿತ್ರಕ್ಕೆ ವಿಘ್ನಗಳು ಎದುರಾಗಿವೆ.

ಜೀ 5, ಜೀ ಪ್ಲೆಕ್ಸ್‌ನಲ್ಲಿ ಈಗ ರಾಧೆ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, ರಿಲೀಸ್ ಕೆಲವೇ ಗಂಟೆಗಳಲ್ಲಿ ಸಿನಿಮಾ ಪೈರಸಿ ಆಗಿದೆ. ತಮಿಳ್ ರಾಕರ್ಸ್ ಸೇರಿದಂತೆ ಸಾಕಷ್ಟು ಪೈರಸಿ ವೆಬ್‌ಸೈಟ್‌ಗಳಲ್ಲಿ ಚಿತ್ರವನ್ನು ಸೋರಿಕೆ ಮಾಡಲಾಗಿದೆ. ಹಲವು ಟೆಲಿಗ್ರಾಮ್ ಚಾನೆಲ್‌ಗಳಲ್ಲೂ ಈ ಚಿತ್ರ ಫ್ರೀಯಾಗಿ ವೀಕ್ಷಣೆಗೆ ಸಿಗುತ್ತಿದೆ. ಸಿನಿಮಾ ರಿಲೀಸ್‌ಗೂ ಮೊದಲೇ ಪೈರಸಿ ಮಾಡದಂತೆ ಸಲ್ಮಾನ್ ಮನವಿ ಮಾಡಿದ್ದರು. 'ಒಂದು ಚಿತ್ರ ಮಾಡಲು ಸಾಕಷ್ಟು ಜನ ಶ್ರಮ ಪಡುತ್ತಾರೆ. ಆದರೆ, ಚಿತ್ರವನ್ನು ಪೈರಸಿ ಮಾಡಿ ಲೀಕ್ ಮಾಡಿದಾಗ ತುಂಬಾ ದುಃಖ ಆಗುತ್ತದೆ. ದಯವಿಟ್ಟು ಸರಿಯಾದ ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರ ವೀಕ್ಷಿಸಿ. ಮನರಂಜನೆಯಲ್ಲಿ ಪೈರಸಿ ಬೇಡ ಎಂಬ ಕಮಿಟ್‌ಮೆಂಟ್ ಈದ್ ಸಂದರ್ಭದಲ್ಲಿ ನನಗೆ ಪ್ರೇಕ್ಷಕರಿಂದ ಬೇಕು' ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದರು.

ಆದರೆ ಇದಕ್ಕೂ ಬಗ್ಗದೆ ಚಿತ್ರಕ್ಕೆ ಪೈರಸಿ ಕಾಟ ಮುಂದುವರೆದಿದೆ. ಹೀಗಾಗಿ ಸಲ್ಮಾನ್​ ಖಾನ್​ ಸೈಬರ್‌ಸೆಲ್‌ನಿಂದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಹೀಗೆ ಪೈರಸಿ ಮಾಡಿ ಚಿತ್ರ ನೋಡುವುದು "ಗಂಭೀರ ಅಪರಾಧ" ಎಂದು ಕಿಡಿ ಕಾರಿದ್ದಾರೆ.

"ಚಿತ್ರವನ್ನು ಪ್ರತಿ ವೀಕ್ಷಣೆಗೆ 249 ರೂ. ಸಮಂಜಸವಾದ ಬೆಲೆಯಲ್ಲಿ ವೀಕ್ಷಿಸಲು ಅವಕಾಶ ನೀಡಿದ್ದೇವೆ. ಆ ಪೈರಸಿ ಸೈಟ್‌ಗಳು ರಾಧೆಯನ್ನು ಅಕ್ರಮವಾಗಿ ಸ್ಟ್ರೀಮ್ ಮಾಡುತ್ತಿವೆ, ಇದು ಗಂಭೀರ ಅಪರಾಧ" ಎಂದು ಅವರು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇಂತಹ ಪೈರಸಿ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವವರ ವಿರುದ್ಧ ಸೈಬರ್‌ಸೆಲ್ ಕ್ರಮ ಕೈಗೊಳ್ಳಲಿದೆ. ದಯವಿಟ್ಟು ಇಂತಹದ್ದನ್ನು ಮಾಡಬೇಡಿ, ಇದರಿಂದ ತುಂಬಾ ತೊಂದರೆ ಅನುಭವಿಸುತ್ತೀರಿ, ಅರ್ಥಮಾಡಿಕೊಳ್ಳಿ" ಎಂದು ಅವರು ಎಚ್ಚರಿಸಿದ್ದಾರೆ.

ಈ ಚಿತ್ರದಲ್ಲಿ ಸಲ್ಮಾನ್‌ ಖಾನ್ ಜೊತೆ ದಿಶಾ ಪಟಾಣಿ, ಜಾಕಿ ಶ್ರಾಫ್, ರಂದೀಪ್ ಹೂಡಾ ಮುಂತಾದವರು ನಟಿಸಿದ್ದಾರೆ.

Last Updated : May 16, 2021, 1:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.