ಪಾಟ್ನ: ಪಾಕಿಸ್ತಾನದಿಂದ ಹಣವನ್ನು ತಂದು ಇಲ್ಲಿನ ಜನರಿಗೆ ಹಂಚುವ ಮೂಲಕ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಜನರಿಗೆ ತಪ್ಪು ಕಲ್ಪನೆ ಮೂಡಿಸಿ ಧರಣಿ ಮಾಡಿಸುತ್ತಿವೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಆಪಾದಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಕಿಡಿಕಾರಿದ ಅವರು, ಪಾಕಿಸ್ತಾನದ ಹಣದಿಂದ ವಿರೋಧ ಪಕ್ಷಗಳು ಧರಣಿ ಕುಳಿತಿವೆ. ಅವರು ನೀಡುತ್ತಿರುವ ಧನಸಹಾಯದಿಂದ ವಿರೋಧ ಪಕ್ಷಗಳು ಎಗ್ಗಿಲ್ಲದೇ ಕುತಂತ್ರಗಳನ್ನ ಮಾಡುತ್ತಿವೆ. ಇದರಿಂದ ಏನೂ ಆಗುವುದಿಲ್ಲ ಎಂದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಬ್ಬ ಕಪಟ ನಾಯಕ. ಜನರು ಕೇಜ್ರಿವಾಲ್ ಅವರ ಬೂಟಾಟಿಕೆ ಅರ್ಥಮಾಡಿಕೊಂಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಈ ಬಾರಿ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಲಿದ್ದಾರೆ ಎಂದರು.