ETV Bharat / sitara

ಸೈಫಿನಾ ದಂಪತಿಯ ಎರಡನೇ ಮಗನ ಹೆಸರು ರಿವೀಲ್ - ಲೇಟೆಸ್ಟ್​ ಬಾಲಿವುಡ್ ನ್ಯೂಸ್

ಕೆಲವು ದಿನಗಳ ಹಿಂದೆ ನಟ ರಣಧೀರ್ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಗಂಡು ಮಕ್ಕಳ ಫೋಟೋವನ್ನು ಶೇರ್​ ಮಾಡಿದ್ದರು. ಈ ಮಕ್ಕಳಲ್ಲಿ ಸೈಫ್ ಮತ್ತು ಕರೀನಾ ದಂಪತಿಯ ಎರಡನೇ ಗಂಡು ಮಗು ಕೂಡಾ ಇದೆ ಎಂದು ಅಭಿಮಾನಿಗಳು ಊಹಿಸಿದ್ದರು.

Randhir Kapoor reveals name of Kareena-Saif's second child
ಸೈಫಿನಾ ದಂಪತಿಯ ಎರಡನೇ ಮಗನ ಹೆಸರು ರಿವೀಲ್
author img

By

Published : Jul 10, 2021, 5:54 PM IST

ಮುಂಬೈ: ಬಾಲಿವುಡ್ ಸ್ಟಾರ್ ದಂಪತಿಯಾದ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರ ಎರಡನೇ ಮಗನ ಹೆಸರು ಬಹಿರಂಗವಾಗಿದೆ. ಸೈಫ್ ದಂಪತಿ 2ನೇ ಮಗನಿಗೆ ಜೆಹ್ ಎಂದು ಹೆಸರಿಟ್ಟಿದ್ದಾರೆ ಎಂದು ಬಾಲಿವುಡ್ ಹಿರಿಯ ನಟ ನಟ ರಣಧೀರ್ ಕಪೂರ್ ಖಚಿತಪಡಿಸಿದ್ದಾರೆ.

ಫೆಬ್ರವರಿ 21ರಂದು ಸೈಫ್ ಮತ್ತು ಕರೀನಾ​ ದಂಪತಿಗೆ ಎರಡನೇ ಮಗುವಾಗಿದ್ದು, ಸುಮಾರು ಒಂದು ವಾರದ ಹಿಂದೆ ಜೆಹ್ ಎಂಬ ಹೆಸರನ್ನು ಅಂತಿಮಗೊಳಿಸಲಾಗಿತ್ತು ಎಂದು ನಟ ರಣಧೀರ್ ಕಪೂರ್ ಹೇಳಿದ್ದಾರೆ. ಲ್ಯಾಟಿನ್ ಭಾಷೆಯಲ್ಲಿ ಜೆಹ್ ಎಂದರೆ ನೀಲಿ ಗರಿಗಳ ಹಕ್ಕಿ ಎಂಬ ಅರ್ಥವಿದ್ದು, ಪಾರ್ಸಿ ಭಾಷೆಯಲ್ಲೂ ಇದಕ್ಕೆ ಅದೃಷ್ಟ ಎಂಬ ಅರ್ಥ ಬರುವ ಎಂದು ವರದಿಗಳು ಹೇಳಿವೆ.

ಕೆಲವು ದಿನಗಳ ಹಿಂದೆ ರಣಧೀರ್ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಗಂಡು ಮಕ್ಕಳ ಫೋಟೋವನ್ನು ಶೇರ್​ ಮಾಡಿದ್ದರು. ಈ ಮಕ್ಕಳಲ್ಲಿ ಸೈಫ್ ಮತ್ತು ಕರೀನಾ ದಂಪತಿಯ ಎರಡನೇ ಗಂಡು ಮಗು ಕೂಡ ಇದೆ ಎಂದು ಅಭಿಮಾನಿಗಳು ಊಹಿಸಿದ್ದರು.

ಇದನ್ನೂ ಓದಿ: ಕೇಂದ್ರ ಸಂಪುಟದಲ್ಲಿ ಶೇ.90ರಷ್ಟು ಸಚಿವರು ಕೋಟ್ಯಧಿಪತಿಗಳು; ಶೇ.42ರಷ್ಟು ಕ್ರಿಮಿನಲ್ಸ್​​: ADR ವರದಿ

ಆದಾದ ನಂತರ ಶೇರ್ ಮಾಡಿದ್ದ ಫೋಟೋವನ್ನು ರಣಧೀರ್ ಡಿಲೀಟ್ ಮಾಡಿದ ಮೇಲೆ ಭಾರಿ ಸಂಚಲನ ಸೃಷ್ಟಿಯಾಯಿತು. ಈಗಾಗಲೇ ಸೈಪ್ ಮತ್ತು ಕರೀನಾ ದಂಪತಿಗೆ ತೈಮೂರ್​ ಎಂಬ ಮಗನಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.