ETV Bharat / sitara

ಮದುವೆ, ಪ್ರೀತಿ, ಸಿನಿಮಾ: ವೈಯುಕ್ತಿಕ ಜೀವನದ ಬಗ್ಗೆ ಹಂಚಿಕೊಂಡ ನಟಿ ರಾಕುಲ್ ಪ್ರೀತ್​ ಸಿಂಗ್

ನಾನು ಪ್ರೀತಿ ಮತ್ತು ವೈವಾಹಿಕ ಜೀವನವನ್ನು ಸಂಪೂರ್ಣ ನಂಬುತ್ತೇನೆ ಮತ್ತು ಅದು ಸುಂದರವಾಗಿದೆ ಎಂದು ಭಾವಿಸುತ್ತೇನೆ. ಜನರು ಯಾಕೆ ಇದನ್ನು ಒಂದು ರೀತಿ ಒತ್ತಡ ಎಂದು ಭಾವಿಸುತ್ತಾರೋ ನನಗೆ ಅರ್ಥವಾಗ್ತಿಲ್ಲ ಎಂದು ನಟಿ ರಾಕುಲ್ ಪ್ರೀತ್​ ಸಿಂಗ್ ಹೇಳಿದ್ದಾರೆ.

Rakul Preet Singh reveals qualities that she looks out for in a guy
ವೈಯುಕ್ತಿಕ ಜೀವನದ ಬಗ್ಗೆ ಹಂಚಿಕೊಂಡ ನಟಿ ರಾಕುಲ್
author img

By

Published : Jul 9, 2020, 3:17 PM IST

ಮುಂಬೈ: ನಾನು ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ನಂಬಿಕೆಯಿಟ್ಟಿದ್ದೇನೆ. ಜನ ಇದನ್ನು ಯಾಕೆ ಒಂದು ರೀತಿಯ ಒತ್ತಡವೆಂದು ಭಾವಿಸುತ್ತಾರೋ ನನಗೆ ಅರ್ಥವಾಗುತ್ತಿಲ್ಲ ಎಂದು ನಟಿ ರಾಕುಲ್ ಪ್ರೀತ್​ ಸಿಂಗ್ ಹೇಳಿದ್ದಾರೆ.

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡಿರುವ ಅವರು, ನಾನು ಏನು, ಏನಲ್ಲ ಎಂಬುದನ್ನು ಮತ್ತು ಪ್ರೀತಿಯ ಅರ್ಥವೇನುಂಬುದನ್ನು ನನ್ನ ಹೆತ್ತವರಲ್ಲಿ ಕಾಣುತ್ತಿದ್ದೇನೆ. ನಾನು ಪ್ರೀತಿ ಮತ್ತು ವೈವಾಹಿಕ ಜೀವನವನ್ನು ಸಂಪೂರ್ಣ ನಂಬುತ್ತೇನೆ ಮತ್ತು ಅದು ಸುಂದರವಾಗಿದೆ ಎಂದು ಭಾವಿಸುತ್ತೇನೆ. ನೀವು ಯಾರನ್ನಾದರು ಪ್ರೀತಿಸುವಾಗ ಅವರನ್ನು ಹೃದಯದಿಂದ ಪ್ರೀತಿಸಿರಿ ಎಂದು ಹೇಳಿದ್ದಾರೆ.

ಇನ್ನು ಒಬ್ಬ ಹುಡುಗನಲ್ಲಿ ನಟಿ ಕಾಣಬಯಸುವ ಗುಣಗಳ ಬಗ್ಗೆಯೂ ವಿವರಿಸಿದ್ದು, ನಾನು ಇಷ್ಟಪಡುವ ಹುಡುಗ ಎತ್ತರದ ವ್ಯಕ್ತಿಯಾಗಿರಬೇಕು. ನನ್ನನ್ನು ಮನುಷ್ಯನಾಗಿ ನೋಡುವವನಾಗಿರಬೇಕು. ಪ್ರಮುಖ ಗುಣವೆಂದರೆ ಆತನಿಗೆ ಬುದ್ಧಿ ಶಕ್ತಿ ಇರಬೇಕು ಮತ್ತು ಜೀವನದಲ್ಲಿ ಕೆಲವು ಉದ್ದೇಶಗಳಿರಬೇಕು ಎಂದಿದ್ದಾರೆ.

ನಾನು ಯಾವಾಗಲೂ ನಟನಾ ಜಗತ್ತಿಗೆ ಧುಮುಕಲು ಬಯಸುತ್ತೇನೆ. ನಾನು 18 ವರ್ಷದವಳಿದ್ದಾಗ ಮಾಡೆಲಿಂಗ್‌ ಜಗತ್ತಿಗೆ ಪ್ರವೇಶಿಸಿದೆ. ಬಳಿಕ ಅಲ್ಪ ಪಾಕೇಟ್​ ಮನಿ ಸಂಪಾದಿಸಲು ಮೊದಲ ಸಿನಿಮಾ ಮಾಡಿದೆ ಮತ್ತು ಆರಂಭದಿಂದಲೂ ಗಮನ ಸೆಳೆದಿದ್ದೇನೆ. ಮೊದಲಿಗೆ ನನಗೆ ಕನ್ನಡ ಇಂಡಸ್ಟ್ರಿಯಿಂದ ಅವಕಾಶಕ್ಕಾಗಿ ಕರೆ ಬಂತು ಎಂದು ರಾಕುಲ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.