ಹೈದರಾಬಾದ್(ತೆಲಂಗಾಣ): ಬಾಲಿವುಡ್ನ ಬ್ಯುಸಿ ನಟಿಯರಲ್ಲಿ ಒಬ್ಬರಾದ ರಾಕುಲ್ ಪ್ರೀತ್ ಸಿಂಗ್ (Actress Rakul preet singh) ಕೊನೆಗೂ ತಮ್ಮ ಪ್ರಿಯತಮನ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅವರ ಮತ್ತು ನಟ - ನಿರ್ಮಾಪಕ ಜಾಕಿ ಭಗ್ನಾನಿ(Actor/producer Jackky Bhagnani) ಮಧ್ಯೆ ಹಲವು ದಿನಗಳಿಂದ ನಡೆಯುತ್ತಿದ್ದ ಗುಸುಗುಸು ಸುದ್ದಿಗಳಿಗೆ ಕೊನೆಗೂ ರಾಕುಲ್ ಷರಾ ಬರೆದಿದ್ದಾರೆ.
ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ರಾಕುಲ್, ನನ್ನ ವೈಯಕ್ತಿಕ ಜೀವನದ ಬಗ್ಗೆ ಬೇರೆಯವರು ಕೆಟ್ಟದಾಗಿ ಬಿಂಬಿಸುವ ಮೊದಲು ನಾನೇ ಈ ವಿಷಯವನ್ನು ಹಂಚಿಕೊಳ್ಳುತ್ತೇನೆ. ಸದ್ಯ ನಾನು ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಡೇಟಿಂಗ್ (Dating with Jackky Bhagnani) ಮಾಡುತ್ತಿದ್ದೇನೆ. ಈ ವಿಷಯವನ್ನು ಹಂಚಿಕೊಳ್ಳಲು ಖುಷಿಯಾಗುತ್ತದೆ. ಕಾರಣ ನನ್ನ ಜೀವನ ಸುಂದರವಾಗಿಡಲು ಬಯಸುತ್ತೇನೆ ಎಂದಿದ್ದಾರೆ.
ಮದುವೆ ಯಾವಾಗ ಎಂಬ ಪ್ರಶ್ನೆಗೆ, ಈ ಬಗ್ಗೆ ನಾನು ಇನ್ನೂ ಯೋಚಿಸಿಲ್ಲ. ಅದು ಘಟಿಸಿದಾಗ ನಾನೇ ಬಹಿರಂಗಪಡಿಸುತ್ತೇನೆ. ಸದ್ಯಕ್ಕೆ ನಾನು ವೃತ್ತಿ ಜೀವನದ ಮೇಲೆ ಗಮನ ಹರಿಸಿದ್ದೇನೆ ಎಂದು ಮದುವೆ ಆಲೋಚನೆ ಸದ್ಯಕ್ಕಿಲ್ಲ ಎಂದಿದ್ದಾರೆ.
ಕಳೆದ ತಿಂಗಳು ನಡೆದ ರಾಕುಲ್ರ ಜನ್ಮದಿನದಂದು ಜಾಕಿ ಭಗ್ನಾನಿ ಕಾಣಿಸಿಕೊಂಡ ಬಳಿಕ ಇಬ್ಬರ ಮಧ್ಯೆ ಏನೋ ನಡೀತಿದೆ ಎಂಬ ಸುದ್ದಿ ಬಾಲಿವುಡ್ನಲ್ಲಿ ಹರಿದಾಡಿತ್ತು. ಇನ್ನು ನಟಿ ರಾಕುಲ್ ಪ್ರೀತ್ ಸಿಂಗ್, ಆಯುಷ್ಮಾನ್ ಖುರ್ರಾನ್ರ ಜೊತೆಗೆ 'ಡಾಕ್ಟರ್ ಜೀ' ಸಿನಿಮಾದಲ್ಲಿ, ಕಾಂಡೋಮ್ ಕಥೆಯಾಧಾರಿತ 'ಛತ್ರಿವಾಲಾ', ಅಜಯ್ ದೇವಗನ್ರ 'ಥ್ಯಾಂಕ್ ಗಾಡ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.