ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಅಂಗಳದಿಂದ ಧಮಾಕೇದಾರ್ ಸುದ್ದಿಯೊಂದು ಹೊರ ಬಂದಿದೆ. ಟೀಸರ್ ಹಾಗೂ ಹಾಡಿನ ಮೂಲಕ ಕುತೂಹಲದ ಕೋಟೆ ಕಟ್ಟಿದ್ದ ಆರ್ಆರ್ಆರ್ ಟ್ರೇಲರ್ಗೆ ಅಭಿಮಾನಿಗಳು ಎದುರು ನೋಡುತ್ತಿದ್ದರು. ಅಂತಿಮವಾಗಿ ತ್ರಿಬಲ್ ಆರ್ ಸಿನಿಮಾದ ಟ್ರೇಲರ್ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ.
ಪಂಚ ಭಾಷೆಯಲ್ಲಿ ತಯಾರಾಗ್ತಿರುವ ಆರ್ಆರ್ಆರ್ ಸಿನಿಮಾ ಮೇಲೆ ಭಾರತೀಯ ಚಿತ್ರರಂಗದ ಚಿತ್ತ ನೆಟ್ಟಿದೆ. ಜಕ್ಕಣ್ಣಗಾರು ಸಿನಿಮಾ ಅಂದ್ಮೇಲೆ ಆ ನಿರೀಕ್ಷೆ ದುಪ್ಪಟ್ಟಾಗಿರುತ್ತದೆ. ಇದೀಗ ಅಂತಹದ್ದೇ ನಿರೀಕ್ಷೆ RRR movie ಮೇಲಿದೆ. ಹೀಗಾಗಿ ರಾಜಮೌಳಿಯ ಆರ್ಆರ್ಆರ್ ಸಿನಿಮಾ ಟ್ರೇಲರ್ ಡಿಸೆಂಬರ್ 3 ರಂದು ರಿಲೀಸ್ ಆಗ್ತಿದೆ.
![RRR movie trailer launch date, RRR movie trailer launch date fix, RRR movie trailer launch on december 3, Rajamouli direction RRR movie trailer, ಆರ್ಆರ್ಆರ್ ಚಿತ್ರದ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್, ಡಿಸೆಂಬರ್ 3ರಂದು ಆರ್ಆರ್ಆರ್ ಚಿತ್ರದ ಟ್ರೈಲರ್ ಬಿಡುಗಡೆ, ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರದ ಟ್ರೈಲರ್, ಆರ್ಆರ್ಆರ್ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕ,](https://etvbharatimages.akamaized.net/etvbharat/prod-images/kn-bng-08-rajamouli-direction-rrr-movie-tralier-launchage-date-fix-7204735_29112021224809_2911f_1638206289_846.jpg)
ಜೂನಿಯರ್ ಎನ್ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಆರ್ಆರ್ಆರ್ ಸಿನಿಮಾದಲ್ಲಿದೆ. ಎಂಎಂ ಕೀರವಾಣಿ ಮ್ಯೂಸಿಕ್ ಗುಂಗು, ಸೆಂಥಿಲ್ ಕ್ಯಾಮೆರಾ ಕೈಚಳಕವಿರುವ ಈ ಸಿನಿಮಾ ಜನವರಿ 7 ರಂದು ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.
ಓದಿ: ರಾಜ್ಯದಲ್ಲಿ ಮಳೆ ಮುನ್ಸೂಚನೆ: ಇಲ್ಲಿದೆ ಹವಾಮಾನ ಇಲಾಖೆ ವರದಿ
ರಾಜಮೌಳಿಯ ಕನಸಿನಂತೆ ಅದ್ದೂರಿಯಾಗಿ, ಆಡಂಬರದಿಂದ, ವೈಭವೋಪೇತವಾಗಿ ಮೂಡಿ ಬಂದಿರುವ ಟೀಸರ್, ಮೇಕಿಂಗ್ ಹಾಗೂ ಸಾಂಗ್ಸ್ ಹೀಗೆ ಇರುವಾಗ ಟ್ರೇಲರ್ ಯಾವ ಮಟ್ಟಿಗೆ ಇರಲಿದೆ ಅನ್ನುವುದಕ್ಕೆ ಡಿಸೆಂಬರ್ 3 ರಂದು ಉತ್ತರ ಸಿಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಾಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಆರ್ಆರ್ಆರ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ.
ಕನ್ನಡದಲ್ಲಿಯೂ ರಿಲೀಸ್ ಆಗ್ತಿರುವ ಆರ್ಆರ್ಆರ್ ಸಿನಿಮಾದ ವಿತರಣೆ ಹಕ್ಕುನ್ನು ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ಪಡೆದುಕೊಂಡಿದೆ. ಬಾಹುಬಲಿಯಂತಹ ಸಿನಿಮಾ ಹೇಳಿ ಕೇಳಿ ಸಕ್ಸಸ್ ಕಂಡಿರುವ ಜಕ್ಕಣ್ಣಗಾರು ತ್ರಿಬಲ್ ಆರ್ ಸಿನಿಮಾ ಏನೆಲ್ಲಾ ಮ್ಯಾಜಿಕ್ ಮಾಡ್ತಾರೆ ಅನ್ನೋದೇ ಚಿತ್ರಪ್ರೇಮಿಗಳಿರುವ ಕ್ಯೂರಿಯಾಸಿಟಿ.