ಹೈದರಾಬಾದ್: ಅಂತಾರಾಷ್ಟ್ರೀಯ ತಾರೆ ಪ್ರಿಯಾಂಕಾ ಚೋಪ್ರಾ ಜೊನಸ್ ತನ್ನ ಆತ್ಮಚರಿತ್ರೆ 'ಅನ್ಫಿನಿಶ್ಡ್'ನಲ್ಲಿ ತಾನು 2000ರ ಮಿಸ್ ವರ್ಲ್ಡ್ ಪ್ರಶಸ್ತಿ ಪಡೆದ ನಂತರ ನಿರ್ದೇಶಕರೊಬ್ಬರು ಪ್ಲಾಸ್ಟಿಕ್ ಸರ್ಜರಿ ಮೂಲಕ ತನ್ನ ಅಂಗಗಳನ್ನು ಸರಿಪಡಿಸಲು ಕೇಳಿಕೊಂಡ ಬಗ್ಗೆ ಮಾತನಾಡಿದ್ದಾರೆ.
- " class="align-text-top noRightClick twitterSection" data="
">
ಬೃಹತ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಯಶಸ್ವಿಯಾಗಲು ಏನೆಲ್ಲಾ ಮಾಡಬೇಕು ಹಾಗೂ ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ಪ್ರಿಯಾಂಕಾ ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಸವಾಲುಗಳ ವಿವರಗಳನ್ನು ಓದುಗರು ಈ ಪುಸ್ತಕದಲ್ಲಿ ಕಾಣಬಹುದು.
- " class="align-text-top noRightClick twitterSection" data="
">
ಪ್ರಿಯಾಂಕ ಅವರು ಹದಿಹರೆಯದವರಾಗಿದ್ದಾಗ ಪ್ಲಾಸ್ಟಿಕ್ ಸರ್ಜರಿ ಮಾಡಲು ಚಲನಚಿತ್ರ ನಿರ್ಮಾಪಕರು ಹೇಗೆ ಕೇಳಿಕೊಂಡರು ಎಂಬುದರ ಬಗ್ಗೆ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.
- " class="align-text-top noRightClick twitterSection" data="
">
"ಕೆಲ ನಿಮಿಷಗಳ ಸಣ್ಣ ಮಾತುಕತೆಯ ನಂತರ, ನಿರ್ದೇಶಕ / ನಿರ್ಮಾಪಕನು ಎದ್ದು ನಿಂತು ನನ್ನನ್ನು ತಿರುಗುವಂತೆ ಹೇಳಿದನು. ನನ್ನನ್ನು ನೋಡಿ ದೇಹದ ಕೆಲ ಅಂಗಗಳನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಸರಿಪಡಿಸುವಂತೆ ಹೇಳಿದರು" ಎಂದು ಪ್ರಿಯಾಂಕ ಆತ್ಮಚರಿತ್ರೆ 'ಅನ್ಫಿನಿಶ್ಡ್'ನಲ್ಲಿ ಬರೆಯಲಾಗಿದೆ.