ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಬಾಲಿವುಡ್ ಬಹುನಿರೀಕ್ಷಿತ 'ಸಾಹೋ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಿನಿಮಾ ಶೂಟಿಂಗ್ ಆರಂಭವಾಗಿ ಮೂರು ವರ್ಷಗಳು ಕಳೆಯುತ್ತಾ ಬಂದರೂ ಸಿನಿಮಾದ ಮೊದಲ ಟೀಸರನ್ನು ಚಿತ್ರತಂಡ ಈಗ ಬಿಡುಗಡೆ ಮಾಡುವ ಮೂಲಕ ಚಿತ್ರಪ್ರೇಮಿಗಳ ಕುತೂಹಲಕ್ಕೆ ಬ್ರೇಕ್ ಹಾಕಿದೆ.
- " class="align-text-top noRightClick twitterSection" data="">
ಇನ್ನು ಟೀಸರ್ ನೋಡಿದರೆ ಸಿನಿಮಾ ಇಷ್ಟು ತಡವಾಗುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ದೊರಕಲಿದೆ. ಅದ್ಭುತ ಮೇಕಿಂಗ್, ಆ್ಯಕ್ಷನ್, ಲವ್, ವಿಶ್ಯುಯಲ್ ಎಫೆಕ್ಟ್ ಎಲ್ಲವನ್ನೂ ಟೀಸರ್ನಲ್ಲಿ ಕಾಣಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಟೀಸರ್ನಲ್ಲಿ ಆ್ಯಕ್ಷನ್ ಹೆಚ್ಚಾಗಿದೆ. ಟೀಸರ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಿಡುಗಡೆಯಾದ ಕೇವಲ ಒಂದು ಗಂಟೆಯಲ್ಲೇ ಸುಮಾರು 4 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಹಿಂದಿ ಟೀಸರ್ ನೋಡಿದ್ದಾರೆ. 1:39 ಸೆಕೆಂಡ್ ಟೀಸರ್ ಅಭಿಮಾನಿಗಳು ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಸಿನಿಮಾ ಬೆಳ್ಳಿಪರದೆಯ ಮೇಲೆ ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿ ಒಟ್ಟು 4 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ನಾಲ್ಕೂ ಭಾಷೆಗಳಲ್ಲೂ ಒಟ್ಟಿಗೆ ಟೀಸರನ್ನೂ ಬಿಡುಗಡೆ ಮಾಡಲಾಗಿದೆ.
ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ವಂಶಿ ಹಾಗೂ ಪ್ರಮೋದ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಕಥೆ ಬರೆದಿರುವ ಸುಜಿತ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಪ್ರಭಾಸ್ ಜೊತೆಗೆ ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ನೀಲ್ ನಿತಿನ್ ಮುಖೇಶ್, ಜಾಕಿಶ್ರಾಫ್, ವೆನ್ನಿಲ ಕಿಶೋರ್, ಪ್ರಕಾಶ್ ಬೆಳವಾಡಿ, ಮಂದಿರಾ ಬೇಡಿ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಆಗಸ್ಟ್ 15 ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.