ನವದೆಹಲಿ : ಆರೋಗ್ಯ ಮತ್ತು ಅಗತ್ಯ ಸೇವೆ ನೀಡುತ್ತಿರುವ ಸಮುದಾಯದ ಕಾರ್ಯಕರ್ತರನ್ನು ಗೌರವಿಸುವ ದೃಷ್ಟಿಯಿಂದ ನಡೆಸಲಾಗುತ್ತಿರುವ ವರ್ಚುವಲ್ ಬೆನಿಫಿಟ್ ಕನ್ಸರ್ಟ್-ಒನ್ ವರ್ಲ್ಡ್: ಟುಗೆದರ್ ಅಟ್ ಹೋಮ್‌ನ ಭಾಗವಾಗುವುದಾಗಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಘೋಷಿಸಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೋಗ್ಯ ಮತ್ತು ಅಗತ್ಯ ಸೇವೆ ನೀಡುತ್ತಿರುವ ಸಿಬ್ಬಂದಿಯನ್ನು ಸಂಗೀತ ಮತ್ತು ಸಂಭ್ರಮಾಚರಣೆ ಮೂಲಕ ಗೌರವ ಸಲ್ಲಿಸಲು ಇದನ್ನು ಆಯೋಜಿಸಲಾಗಿದೆ ಎಂದು ಚೋಪ್ರಾ ತಿಳಿಸಿದ್ದಾರೆ. ಗ್ಲೋಬಲ್ ಸಿಟಿಜನ್ ಸಹಭಾಗಿತ್ವದಲ್ಲಿ ಏಪ್ರಿಲ್ 18ರಂದು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮಗಿರುವ ಉತ್ಸಾಹವನ್ನು ಇನ್ಸ್ಟಾಗ್ರಾಮ್ ಮೂಲಕ ಪಿಗ್ಗಿ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ಈ ಬಗ್ಗೆ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿರುವ ಪ್ರಿಯಾಂಕಾ @WHO COVID-19 ಸಾಲಿಡಾರಿಟಿ ಫಂಡ್‌ನ ಲಾಭಕ್ಕಾಗಿ ಈ ರೀತಿಯ ಜಾಗತಿಕ ಪ್ರಸಾರ ಕಾರ್ಯಕ್ರಮ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಹಾಗೆಯೇ ಈ ಸಂಗೀತ ಕಾರ್ಯಕ್ರಮವನ್ನು ಹಾಸ್ಯನಟರಾದ ಜಿಮ್ಮಿ ಫಾಲನ್, ಜಿಮ್ಮಿ ಕಿಮ್ಮೆಲ್ ಮತ್ತು ಸ್ಟೀಫನ್ ಕೋಲ್ಬರ್ಟ್ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಎಬಿಸಿ, ಎನ್‌ಬಿಸಿ, ಸಿಬಿಎಸ್, ಬಿಬಿಸಿ ಮತ್ತು ಪ್ರಪಂಚದಾದ್ಯಂತದ ಇತರ ಡಿಜಿಟಲ್ ಫ್ಲ್ಯಾಟ್‌ಫಾರ್ಮ್‌ಗಳಲ್ಲಿ ಸಂಜೆ 5 ಗಂಟೆಗೆ ನೇರ ಪ್ರಸಾರವಾಗಲಿದೆ.