ETV Bharat / sitara

ರಣಬೀರ್ ಕಪೂರ್ ಪತ್ನಿ ಪಾತ್ರದಲ್ಲಿ ನಟಿಸಲಿರುವ ಪರಿಣಿತಿ ಛೋಪ್ರಾ - Sandeep reddy venga movie

ವಿಜಯ್​ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ನಿರ್ದೇಶಿಸಿದ್ದ ಸಂದೀಪ್ ರೆಡ್ಡಿ ವೆಂಗಾ ನಿರ್ದೇಶಿಸುತ್ತಿರುವ 'ಅನಿಮಲ್' ಹಿಂದಿ ಚಿತ್ರದಲ್ಲಿ ರಣಬೀರ್ ಕಪೂರ್ ಹಾಗೂ ಪರಿಣತಿ ಛೋಪ್ರಾ ಜೊತೆಯಾಗಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ.

Animal
'ಅನಿಮಲ್'
author img

By

Published : Jan 22, 2021, 1:23 PM IST

ಅರ್ಜುನ್ ರೆಡ್ಡಿ, ಕಬೀರ್ ಸಿಂಗ್​​​​​​​ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವೆಂಗಾ ಇದೀಗ 'ಅನಿಮಲ್' ಎಂಬ ಬಾಲಿವುಡ್​ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದು, ಆ ಚಿತ್ರದಲ್ಲಿ ರಣಬೀರ್ ಕಪೂರ್ ಹಾಗೂ ಪರಿಣಿತಿ ಛೋಪ್ರಾ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪರಿಣಿತಿ, ರಣಬೀರ್ ಪತ್ನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಆಡಿಯೋ ಟೀಸರನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ತಮಿಳು ಕುಟುಂಬದ ಹುಡುಗನನ್ನು ಮದುವೆಯಾಗಲಿದ್ದಾರಂತೆ ನಾಗಿಣಿ​​​..!

"ಅಪ್ಪ, ಮುಂದಿನ ಜನ್ಮದಲ್ಲಿ ನೀವು ನನ್ನ ಮಗನಾಗಿ ಹುಟ್ಟಿ, ಆಗ ನೋಡಿ ನಾನು ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ತಿಳಿಯುತ್ತದೆ" ಎಂದು ಆರಂಭವಾಗುವ ಆಡಿಯೋ ಕೇಳಿದರೆ ಇದು ತಂದೆ ಮಗನ ಬಾಂಧವ್ಯದ ಕಥೆ ಹೊಂದಿರುವ ಸಿನಿಮಾ ಎಂದು ತಿಳಿಯುತ್ತದೆ. ಜೊತೆಗೆ ಚಿತ್ರದ ಟೈಟಲ್ ಕೇಳಿದರೆ, ಇದರಲ್ಲಿ ಗ್ಯಾಂಗ್​​ಸ್ಟರ್​​​​ ಕಥೆಯ ಅಂಶವೂ ಇದೆ ಎಂಬುದು ತಿಳಿಯುತ್ತದೆ. ಪರಿಣಿತಿ ಛೋಪ್ರಾ ಹಾಗೂ ರಣಬೀರ್ ಜೊತೆ ಅನಿಲ್ ಕಪೂರ್ ಹಾಗೂ ಬಾಬಿ ಡಿಯೋಲ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅನಿಲ್ ಕಪೂರ್, ರಣಬೀರ್ ಕಪೂರ್ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಬಿ ಡಿಯೋಲ್ 'ಅನಿಮಲ್' ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ರಣಬೀರ್ ಸದ್ಯಕ್ಕೆ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರದ ನಂತರ 'ಅನಿಮಲ್' ಸೆಟ್ಟೇರಲಿದೆ. ಪರಿಣಿತಿ ಛೋಪ್ರಾ ಕೂಡಾ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ನಂತರ ಆಕೆ ಕೂಡಾ 'ಅನಿಮಲ್' ಚಿತ್ರತಂಡ ಸೇರಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.