ETV Bharat / sitara

ಮುಂಬೈ ವಿವಿಧೆಡೆ ಕ್ಯಾಮರಾ ಕಣ್ಣಿಗೆ ಬಿದ್ದ ಸಿನಿಮಾ ಸೆಲಬ್ರಿಟಿಗಳು - ಮುಂಬೈ ಏರ್​​ಪೋರ್ಟ್​ನಲ್ಲಿ ಜಾಹ್ನವಿ ಕಪೂರ್

ತಮನ್ನಾ ಭಾಟಿಯಾ, ಶೃತಿ ಹಾಸನ್, ಜಾಹ್ನವಿ ಕಪೂರ್, ರಿಯಾ ಚಕ್ರವರ್ತಿ, ದಿವ್ಯ ಖೋಸ್ಲ ಕುಮಾರ್ ಹಾಗೂ ಇನ್ನಿತರ ಸೆಲಬ್ರಿಟಿಗಳು ಮುಂಬೈ ಏರ್​ಪೋರ್ಟ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.

Paparazzi diary
ಸಿನಿಮಾ ಸೆಲಬ್ರಿಟಿಗಳು
author img

By

Published : Mar 1, 2021, 1:50 PM IST

ಸಿನಿಮಾ ಸೆಲಬ್ರಿಟಿಗಳು ಎಂದ ಮೇಲೆ ಚಿತ್ರೀಕರಣಕ್ಕಾಗಿ ಆಗ್ಗಾಗ್ಗೆ ಇತರ ಸ್ಥಳಗಳಿಗೆ ಪ್ರಯಾಣಿಸುತ್ತಿರುತ್ತಾರೆ. ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ ಜಿಮ್, ಖಾಸಗಿ ಕಾರ್ಯಕ್ರಮ, ವಿದೇಶಿ ಪ್ರಯಾಣ ಮಾಡುವ ವೇಳೆ ಜನಸಾಮಾನ್ಯರಿಗೆ ಸೆಲಬ್ರಿಟಿಗಳು ದರ್ಶನ ನೀಡುತ್ತಾರೆ. ಈ ಸಮಯದಲ್ಲಿ ಪಾಪರಾಜಿಗಳು ಕೂಡಾ ಸೆಲಬ್ರಿಟಿಗಳ ಫೋಟೋ ತೆಗೆಯಲು ಕಾಯುತ್ತಿರುತ್ತಾರೆ.

ಇತ್ತೀಚೆಗೆ ಕೆಲವು ಸಿನಿಮಾ ತಾರೆಯರು ಕ್ಯಾಮರಾಗೆ ಸೆರೆಯಾಗಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜುಹು ಪ್ರದೇಶದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಪಾಪಾರಾಜಿಗಳನ್ನು ನೋಡಿದ ಕೂಡಲೇ ಕ್ಯಾಮರಾ ಪೋಸ್​​​​ ನೀಡಿ ಅಲ್ಲಿಂದ ಹೊರಟಿದ್ದಾರೆ ಮಿಲ್ಕಿ ಬ್ಯೂಟಿ. ಮುಂಬೈ ಏರ್​​​ಪೋರ್ಟ್​ನಲ್ಲಿ 'ಧಡಕ್' ನಟಿ ಜಾಹ್ನವಿ ಕಪೂರ್​​​ ಕೂಡಾ ಕ್ಯಾಮರಾಗೆ ಸೆರೆ ಆಗಿದ್ದಾರೆ. ಬ್ಲಾಕ್ ಜೀನ್ಸ್ ಹಾಗೂ ಪುಲ್​ಓವರ್ ಸ್ವೆಟ್​​​​ಶರ್ಟ್ ಧರಿಸಿ ಏರ್​ಪೋರ್ಟ್​ನಿಂದ ಬರುತ್ತಿರುವ ಜಾಹ್ನವಿ ಫೋಟೋ ಹಾಗೂ ವಿಡಿಯೋಗಳನ್ನು ಪಾಪಾರಾಜಿಗಳು ಕ್ಲಿಕ್ ಮಾಡಿದ್ದಾರೆ. ಜಾಹ್ನವಿ ಅಭಿನಯದ ಹಾರರ್ ಕಾಮಿಡಿ 'ರೂಹಿ' ಇದೇ ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದೆ.

ಕ್ಯಾಮರಾ ಕಣ್ಣಿಗೆ ಸೆರೆಯಾದ ಸೆಲಬ್ರಿಟಿಗಳು

ಇದನ್ನೂ ಓದಿ: ದೊಡ್ಡ ಪರದೆಯ ಮೇಲೆ ಪ್ರಭಾಸ್​ ಜೊತೆ ನಟಿಸಲಿದ್ದಾರೆ ಬಾಲಿವುಡ್​ನ ಸೂಪರ್​​ ಸ್ಟಾರ್​ಗಳು !

ಇನ್ನು ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ರಿಯಾ ಚಕ್ರವರ್ತಿ ಕೂಡಾ ಸಹೋದರ ಹಾಗೂ ತಂದೆಯೊಂದಿಗೆ ಏರ್​​​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ದಿವ್ಯ ಖೋಸ್ಲ ಕುಮಾರ್ ಹಾಗೂ ಪತಿ ಭೂಷಣ್ ಕುಮಾರ್ ಜುಹು ರೆಸ್ಟೋರೆಂಟ್​​ನಲ್ಲಿ, ಮುಂಬೈ ಏರ್​ ಪೋರ್ಟ್​ನಲ್ಲಿ ವರುಣ್ ಧವನ್ ಹಾಗೂ ತನ್ನ ಬಾಯ್ ಫ್ರೆಂಡ್ ಸಂತನು ಹಜಾರಿಕ ಜೊತೆ ಶೃತಿ ಹಾಸನ್ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.