ETV Bharat / sitara

ಆಸ್ಕರ್​ ಪ್ರಶಸ್ತಿ ರೇಸ್​ನಲ್ಲಿ ಪ್ರಿಯಾಂಕಾ ಚೋಪ್ರಾ: ಯಾವ ಸಿನಿಮಾಗೆ ಗೊತ್ತಾ? - ಪ್ರಿಯಾಂಕಾ ಚೋಪ್ರಾ ಲೇಟೆಸ್ಟ್ ನ್ಯೂಸ್

ನಟಿ ಪ್ರಿಯಾಂಕಾ ಚೋಪ್ರಾ ಅವರು ಮುಂಬರುವ ನೆಟ್‌ಫ್ಲಿಕ್ಸ್ ಚಿತ್ರ'ದಿ ವೈಟ್ ಟೈಗರ್'‌ಗಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

Priyanka Chopra expected to be one of the top Best Supporting Actress
ಆಸ್ಕರ್​ ಪ್ರಶಸ್ತಿ ರೇಸ್​ನಲ್ಲಿ ಪ್ರಿಯಾಂಕಾ ಚೋಪ್ರಾ
author img

By

Published : Sep 20, 2020, 1:34 PM IST

ವಾಷಿಂಗ್ಟನ್: ಈ ವರ್ಷದ ಆಸ್ಕರ್‌ನಲ್ಲಿ ಅತ್ಯುತ್ತಮ ಪೋಷಕ ನಟಿ ವಿಭಾಗದ ಅಗ್ರ ಸ್ಪರ್ಧಿಗಳಲ್ಲಿ ಸೂಪರ್‌ ಸ್ಟಾರ್ ಪ್ರಿಯಾಂಕಾ ಚೋಪ್ರಾ ಕೂಡ ಒಬ್ಬರಾಗಿದ್ದಾರೆ.

ಪಿಗ್ಗಿ, ತನ್ನ ಮುಂಬರುವ ನೆಟ್‌ಫ್ಲಿಕ್ಸ್ ಚಿತ್ರ ದಿ ವೈಟ್ ಟೈಗರ್‌ಗಾಗಿ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಯನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ. ರಾಮಿನ್ ಬಹ್ರಾನಿ ನಿರ್ದೇಶನದ ಈ ಚಿತ್ರವು ಅರವಿಂದ್ ಅಡಿಗಾ ಅವರ ಅದೇ ಹೆಸರಿನ ಕಾದಂಬರಿಯ ರೂಪಾಂತರವಾಗಿದೆ. ಈ ಚಿತ್ರದಲ್ಲಿ ಅವರ ಪಾತ್ರವು ತುಂಬಾ ವಿಭಿನ್ನವಾಗಿದೆ. ಇದು ಇದುವರೆಗಿನ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ.

ವೆರೈಟಿಸ್ ಅವಾರ್ಡ್ಸ್ ಸರ್ಕ್ಯೂಟ್ ಮುಂಬರುವ ಆಸ್ಕರ್ ಪ್ರಶಸ್ತಿಗಳ ಅಧಿಕೃತ ಮುನ್ಸೂಚನೆಗಳಿಗೆ ನೆಲೆಯಾಗಿದೆ. ಮೆರಿಯಲ್ ಸ್ಟ್ರೀಪ್ (ದಿ ಪ್ರಾಮ್), ಹ್ಯಾನ್ ಯೆನ್-ರಿ (ಮಿನಾರಿ), ಕ್ರಿಸ್ಟಿನ್ ಸ್ಕಾಟ್ ಥಾಮಸ್ (ರೆಬೆಕ್ಕಾ) ಮತ್ತು ಒಲಿವಿಯಾ ಕೋಲ್ಮನ್ (ದಿ ಫಾದರ್ ) ಅವರೊಂದಿಗೆ ಪ್ರಿಯಾಂಕಾ ಅವರ ಹೆಸರನ್ನೂ ಪಟ್ಟಿ ಮಾಡಲಾಗಿದೆ.

ಹಲವಾರು ಯುವತಿಯರಿಗೆ ಸ್ಫೂರ್ತಿಯಾದ 38 ವರ್ಷದ ನಟಿ ಸಾಂಕ್ರಾಮಿಕ ರೋಗದ ಮಧ್ಯೆ ವಿಶ್ವದ ವಿವಿಧ ಭಾಗಗಳಲ್ಲಿ ಮಹಿಳೆಯರಿಗೆ ಸ್ಫೂರ್ತಿ ನೀಡುತ್ತಿದ್ದಾರೆ. "ಮಹಿಳೆಯರಿಗೆ ಆರ್ಥಿಕವಾಗಿ ಅಧಿಕಾರ ದೊರೆತಾಗ ಅವರು ಕುಟುಂಬಗಳು, ಸಮುದಾಯಗಳು ಮತ್ತು ದೇಶಗಳನ್ನು ಪರಿವರ್ತಿಸಬಹುದು" ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದರು.

ನೆಟ್​ಫ್ಲಿಕ್ಸ್ ಮುಕುಲ್ ಡಿಯೋರಾ ಅವರ ಸಹಯೋಗದೊಂದಿಗೆ ದಿ ವೈಟ್ ಟೈಗರ್ ಅನ್ನು ನಿರ್ಮಿಸುತ್ತಿದೆ ಮತ್ತು ಪ್ರಿಯಾಂಕಾ ಸಹ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.