ಮುಂಬೈ: ಬಾಲಿವುಡ್ ಹಿರಿಯ ನಟ ನಾಸಿರುದ್ದಿನ್ ಶಾ ತೀವ್ರ ಆನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಗುರುವಾರ ಸಂಜೆ ಮಾಧ್ಯಮಗಳಲ್ಲಿ ಪ್ರಸಾರಗೊಂಡಿತ್ತು. ಈ ವಿಷಯವನ್ನು ಅಲ್ಲಗಳೆದಿರುವ ಕುಟುಂಬಸ್ಥರು ಶಾ ಅವರು ನಗರದ ನಿವಾಸದಲ್ಲಿ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ನಾಸಿರುದ್ದೀನ್ ಶಾ ಮ್ಯಾನೇಜರ್, ಇದು ಸುಳ್ಳು ಸುದ್ದಿ, ಯಾರು ಈ ರೀತಿ ಸುಳ್ಳು ಸುದ್ದಿ ಹರಡುತ್ತಿದ್ದಾರೋ ನಮಗೆ ಗೊತ್ತಿಲ್ಲ. ನಾಸಿರುದ್ದಿನ್ ಜಿ ಆರೋಗ್ಯವಾಗಿದ್ದಾರೆ. ಲಾಕ್ ಡೌನ್ ಆರಂಭವಾದಾಗಿನಿಂದ ಅವರು ಮುಂಬೈ ಹೊರ ವಲಯದಲ್ಲಿರುವ ಕಾರತ್ ಮತ್ತು ಪುಣೆ ನಡುವಿನ ಅವರ ತೋಟದ ಮನೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.