ಮುಂಬೈ: ಕಳೆದ ಕೆಲ ತಿಂಗಳಿಂದ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಆಕೆಯ ಸಹೋದರಿ ರಂಗೋಲಿ ಚಾಂಡೆಲ್ಗೆ ಇದೀಗ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
![Kangana Ranaut](https://etvbharatimages.akamaized.net/etvbharat/prod-images/mh-mum-04-21-samans-7201159_21102020204541_2110f_03800_45.jpg)
ಟ್ವೀಟ್ಗಳ ಮೂಲಕ ಎರಡು ಸಮುದಾಯಗಳ ಮಧ್ಯೆ ಕೋಮುಗಲಭೆ, ದ್ವೇಷ ಹರಡುವ ಪ್ರಯತ್ನ ನಡೆಸಿದ್ದಕ್ಕಾಗಿ ಈಗಾಗಲೇ ಅವರ ವಿರುದ್ಧ ಮುಂಬೈನ ಬಾಂದ್ರಾದಲ್ಲಿ ಸೆಕ್ಷನ್ 124ಎ ಸೇರಿ ವಿವಿಧ ಸೆಕ್ಷನ್ಗಳ ಅಡಿ ಕೇಸ್ ದಾಖಲಾಗಿವೆ. ಇದೀಗ ಸಮನ್ಸ್ ಜಾರಿ ಮಾಡಿರುವ ಮುಂಬೈ ಪೊಲೀಸರು ಅಕ್ಟೋಬರ್ 26 ಹಾಗೂ 27ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
-
Mumbai Police summons Kangana Ranaut (file pic) & her sister Rangoli Chandel, asking them to appear before investigating officer, on next Monday & Tuesday (Oct 26 & 27)
— ANI (@ANI) October 21, 2020 " class="align-text-top noRightClick twitterSection" data="
FIR was registered against them at Mumbai's Bandra Police Station, under various sections incl 124A (Sedition) pic.twitter.com/69lFJaWqTh
">Mumbai Police summons Kangana Ranaut (file pic) & her sister Rangoli Chandel, asking them to appear before investigating officer, on next Monday & Tuesday (Oct 26 & 27)
— ANI (@ANI) October 21, 2020
FIR was registered against them at Mumbai's Bandra Police Station, under various sections incl 124A (Sedition) pic.twitter.com/69lFJaWqThMumbai Police summons Kangana Ranaut (file pic) & her sister Rangoli Chandel, asking them to appear before investigating officer, on next Monday & Tuesday (Oct 26 & 27)
— ANI (@ANI) October 21, 2020
FIR was registered against them at Mumbai's Bandra Police Station, under various sections incl 124A (Sedition) pic.twitter.com/69lFJaWqTh
ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 ಎ, 295 ಎ( ಧರ್ಮವನ್ನು ಅಪಮಾನಿಸುವ ಮೂಲಕ ಕೋಮು ಭಾವನೆ ಕೆರಳಿಸುವ ಚಟುವಟಿಕೆ) ಮತ್ತು 124ಎ ಅನ್ವಯ ದೇಶ ದ್ರೋಹದ ಆಧಾರದ ಮೇಲೆ ಪ್ರಕರಣ ದಾಖಲಾಗಿವೆ. ಇನ್ನು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲೂ ಮುಂಬೈಯನ್ನು ಪಾಕ್ ಎಂದು ಕಂಗನಾ ಕರೆದಿದ್ದರಿಂದ ವಿವಾದ ಉಂಟಾಗಿತ್ತು.
![Kangana Ranaut](https://etvbharatimages.akamaized.net/etvbharat/prod-images/mh-mum-04-21-samans-7201159_21102020204548_2110f_03800_114.jpg)
ಇನ್ನು ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದ ವೇಳೆ, ಟ್ವಿಟರ್ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ವಿರುದ್ಧ ಇದೀಗ ತುಮಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.