ETV Bharat / sitara

ಐಟಂಗರ್ಲ್ ಎಂದು ಕರೆಯುವವರ ಹಲ್ಲು ಉದುರಿಸ್ತಾರಂತೆ ಮಲೈಕಾ ಅರೋರ..! - undefined

ತನ್ನ ಬಗ್ಗೆ ಮಾತನಾಡುವವರು ನನ್ನನ್ನು ಯಾವಾಗಲೂ ಐಟಂಗರ್ಲ್ ಎಂದು ಕರೆಯುತ್ತಾರೆ. ಅಂತವರ ಹಲ್ಲು ಉದುರಿಸುವಷ್ಟು ಕೋಪ ಬರುತ್ತದೆ ಎಂದು ಬಾಲಿವುಡ್​ ನಟಿ ಮಲೈಕಾ ಅರೋರ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಮಲೈಕಾ ಅರೋರ
author img

By

Published : May 3, 2019, 11:59 AM IST

ತನ್ನನ್ನು ಐಟಂ ಗರ್ಲ್ ಎಂದು ಯಾರಾದರೂ ಕರೆದರೆ ಅಂತವರ ಹಲ್ಲು ಉದುರಿಸುತ್ತೇನೆ ಎಂದು ಬಾಲಿವುಡ್ ನಟಿ ಮಲೈಕಾ ಅರೋರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

malika
ಮಲೈಕಾ ಅರೋರ

ಶಾರುಖ್ ಖಾನ್ ಅಭಿನಯದ 'ದಿಲ್ ಸೇ' ಚಿತ್ರದ ಫೇಮಸ್ 'ಚಯ್ಯಾ ಚಯ್ಯಾ' ಹಾಡಿನಲ್ಲಿ ಕುಣಿಯುವ ಮೂಲಕ ತನ್ನ ಸಿನಿ ಕೆರಿಯರ್ ಆರಂಭಿಸಿದ ಮಲೈಕಾ ಅರೋರ ನಂತರ 'ಮುನ್ನಿ ಬದ್ನಾಮ್​' 'ಕೆವ್ವು ಕೇಕ' ಸೇರಿ ಸಾಕಷ್ಟು ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ. ನನ್ನ ಬಗ್ಗೆ ಯಾರಾದರೂ ಮಾತನಾಡುವಾಗ ಆಕೆ ಐಟಂ ಗರ್ಲ್ ಎಂದು ಕರೆಯುತ್ತಾರಂತೆ. ಆದರೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಲೈಕಾ ಇಂದು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಬಹುತೇಕ ಸಿನಿಮಾಗಳಲ್ಲಿ ಅಂತಹ ಹಾಡುಗಳು ಇದ್ದೇ ಇರುತ್ತವೆ. ಪ್ರತ್ಯೇಕ ಹಾಡುಗಳಲ್ಲಿ ನಾನು ಕುಣಿಯುವಾಗ ನನ್ನನ್ನು ಐಟಂ ಗರ್ಲ್ ಎಂದು ಕರೆದರೆ ಬಹಳ ಕೋಪ ಬರುತ್ತದೆ. ಹಾಗೆ ಕರೆಯುವವರ ಹಲ್ಲು ಉದುರಿಸಬೇಕು ಎನ್ನಿಸುತ್ತದೆ.

malika
ಬಾಲಿವುಡ್ ನಟಿ ಮಲೈಕಾ ಅರೋರ

ಕೆಲವೊಂದು ಸಿನಿಮಾಗಳಲ್ಲಿ ಅಂತಹ ಪ್ರತ್ಯೇಕ ಹಾಡುಗಳೇ ಹೆಚ್ಚು ಫೇಮಸ್ ಆಗಿಬಿಡುತ್ತದೆ. ಅಂತಹ ಹಾಡುಗಳಲ್ಲಿ ಕುಣಿಯುವುದರಲ್ಲಿ ಯಾವುದೇ ಅಸಭ್ಯತೆ ಇರುವುದಿಲ್ಲ. ಒಂದು ವೇಳೆ ನನಗೆ ಇಷ್ಟವಾಗದಿದ್ದಲ್ಲಿ ಡ್ಯಾನ್ಸ್ ಮಾಡುವುದಿಲ್ಲ ಎಂದು ನೇರವಾಗಿ ಹೇಳಿಬಿಡುತ್ತೇನೆ. ಯಾರ ಬಲವಂತಕ್ಕೂ ನಾನು ಕುಣಿಯುವುದಿಲ್ಲ ಎಂದು ಮಲೈಕಾ ಇತ್ತೀಚಿಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ವಿಶಾಲ್ ಭಾರಧ್ವಜ್ ನಿರ್ದೇಶನದ 'ಪಟಾಕ' ಸಿನಿಮಾದ ಹಾಡೊಂದರಲ್ಲಿ ಮಲೈಕಾ ಕೊನೆಯ ಬಾರಿ ಕುಣಿದಿದ್ದರು. ಸದ್ಯಕ್ಕೆ ಮಲೈಕಾ ಅರ್ಜುನ್ ಕಪೂರ್ ಅವರೊಂದಿಗೆ ಸಪ್ತಪದಿ ತುಳಿಯುವ ತಯಾರಿಯಲ್ಲಿದ್ದಾರೆ.

Intro:Body:

Malaika arora

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.