ಹೈದರಾಬಾದ್: ಕೊರೊನಾ ಪ್ರೇರಿತ ಲಾಕ್‌ಡೌನ್ ಕುರಿತು 'ಇಂಡಿಯಾ ಲಾಕ್‌ಡೌನ್' ಚಲನಚಿತ್ರ ನಿರ್ಮಿಸುವುದಾಗಿ ನಿರ್ಮಾಪಕ ಮಧುರ್ ಭಂಡಾರ್ಕರ್ ಹೇಳಿದ್ದಾರೆ.
ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಭಂಡಾರ್ಕರ್ ಅವರ ಹೊಸ ಚಿತ್ರದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
"ಮಧುರ್ ಭಂಡಾರ್ಕರ್ ಮುಂದಿನ ಚಲನಚಿತ್ರವನ್ನು ಪ್ರಕಟಿಸಿದ್ದಾರೆ. ಇಂಡಿಯಾ ಲಾಕ್‌ಡೌನ್ ಎಂಬ ಶೀರ್ಷಿಕೆಯಲ್ಲಿ ಚಿತ್ರ ಬರಲಿದ್ದು, ಇದು ನೈಜ ಘಟನೆಗಳಿಂದ ಪ್ರೇರಿತ ಚಿತ್ರವಾಗಲಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಚಿತ್ರವನ್ನು ಪಿಜೆ ಮೋಷನ್ ಪಿಕ್ಚರ್ಸ್ ಮತ್ತು ಭಂಡಾರ್ಕರ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಲಿದೆ ಎಂದು ತರಣ್ ಆದರ್ಶ್ ಹೇಳಿದ್ದಾರೆ.