ಜೈಪುರ: ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ವಿವಾಹ ನಾಡಿದ್ದು ಮಾಧೋಪುರದಲ್ಲಿ ಜರುಗಲಿದ್ದು, ಇಂದಿನಿಂದ ಕಾರ್ಯಕ್ರಮಗಳು ಆರಂಭವಾಗಿವೆ. ಇತ್ತ ಅತಿಥಿಗಳು ಮದುವೆಗಾಗಿ ಮುಂಬೈನಿಂದ ಜೈಪುರದತ್ತ ಹೊರಟಿದ್ದಾರೆ.
ಚಿತ್ರ ನಿರ್ದೇಶಕ ಕಬೀರ್ ಖಾನ್, ನಟಿ ನೇಹಾ ಧೂಪಿಯಾ ಸೇರಿದಂತೆ ಹಲವು ಗಣ್ಯರು ಇಂದು ಬೆಳಗ್ಗೆ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಅತಿಥಿಗಳು ರಸ್ತೆಯ ಮೂಲಕ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್ ಹೋಟೆಲ್‌ನತ್ತ ತೆರಳುತ್ತಿದ್ದಾರೆ.
ನಕ್ಷತ್ರಗಳ ಮಾದರಿಯಲ್ಲಿ ಅಲಂಕರಿಸಲ್ಪಟ್ಟ ಈ ರಾಯಲ್ ವೆಡ್ಡಿಂಗ್ ಅನ್ನು ತುಂಬಾ ಗೌಪ್ಯತೆಯಾಗಿ ನಡೆಸಲಾಗುತ್ತಿದ್ದು, ಎಲ್ಲೂ ಕೂಡ ಮದುವೆಯ ವಿಡಿಯೋಗಳು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಗಣ್ಯರೂ ಕೂಡ ಇಲ್ಲಿ ಮೊಬೈಲ್ ಬಳಸಲು ನಿಷೇಧವಿದೆ.
ಇದನ್ನೂ ಓದಿ: Vicky-Katrina wedding : ನಿರ್ಬಂಧಗಳ ನಡುವೆಯೂ ವಿಡಿಯೋ ತುಣುಕು ಲೀಕ್