ಹೊಸದಿಲ್ಲಿ : ಬಾಲಿವುಡ್ನ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿಯು ಟೈಗರ್-3 ಸಿನಿಮಾ ಮೂಲಕ ಮತ್ತೆ ಜೊತೆಯಾಗಿದ್ದು ಚಿತ್ರ ತಂಡ ಈಗ ರಷ್ಯಾದಲ್ಲಿ ಬೀಡು ಬಿಟ್ಟಿದೆ. ಚಿತ್ರೀಕರಣದ ಬಿಡುವಿನ ವೇಳೆ ನಟಿ ಕತ್ರಿನಾ ಕೈಫ್ ರಷ್ಯಾದ ಕೆಲ ಪ್ರಮುಖ ಬೀದಿಯಲ್ಲಿ ಸುತ್ತಾಡುತ್ತಾ ತಂಗಾಳಿಯ ಖುಷಿ ಸವಿದ್ದಾರೆ. ಇದನ್ನು ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ರಷ್ಯಾದ ಎರಡನೇ ಅತಿದೊಡ್ಡ ನಗರವಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿನ ತಂಪಾದ ವಾತಾವರಣದ ನಡುವೆ ಕತ್ರಿನಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಮತ್ತೊಂದೆಡೆ ಹಸಿರು ಉದ್ಯಾನವನದಲ್ಲಿ ಲ್ಯಾವೆಂಡರ್ ಟೀ ಶರ್ಟ್ ಮತ್ತು ವರ್ಣರಂಜಿತ ಸ್ಕರ್ಟ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಎರಡಕ್ಕೂ ಆಕರ್ಷಕ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
![Katrina Kaif feels the chills in Russia as she shoots for Tiger 3, shares video](https://etvbharatimages.akamaized.net/etvbharat/prod-images/salman-katrina_1608newsroom_1629107743_622.jpg)
ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಚಿತ್ರದ ಬಗ್ಗೆ ಬಾಲಿವುಡ್ ಬಳಗ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಇಮ್ರಾನ್ ಹಶ್ಮಿ ಖಳನಾಯಕನ ಪಾತ್ರದಲ್ಲಿ ಮಿಂಚು ಹರಿಸಲಿದ್ದಾರೆ. ಸಲ್ಲು ವಿರುದ್ಧ ಕಾದಾಟಕ್ಕೆ ನಿಲ್ಲಲಿದ್ದಾರೆ. ಚಿತ್ರದಲ್ಲಿ ಇವರೂ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ ಎನ್ನಲಾಗುತ್ತಿದೆ.
- " class="align-text-top noRightClick twitterSection" data="
">
ಟೈಗರ್ ಸರಣಿಯ ಮೂರನೇ ಭಾಗವಾದ ಈ ಚಿತ್ರವನ್ನು ಮನೀಶ್ ಶರ್ಮಾ ನಿರ್ದೇಶಿಸುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ತಡವಾಗಿ ಆರಂಭವಾಗಿದೆ. ಇದೇ ಸರಣಿಯ ಏಕ್ ಥಾ ಟೈಗರ್ 2012ರಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿತ್ತು. ಅಷ್ಟೇ ಅಲ್ಲ, ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿತ್ತು.
ಕಬೀರ್ ಖಾನ್ ನಿರ್ದೇಶದಲ್ಲಿ ಆ ಚಿತ್ರ ತೆರೆ ಕಂಡಿತ್ತು. ಇನ್ನು, ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ ಎರಡನೇ ಭಾಗವಾದ ಟೈಗರ್ ಜಿಂದಾ ಹೈ ಚಿತ್ರವು 2017ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವೂ ಸಹ ದೊಡ್ಡಮಟ್ಟದಲ್ಲಿ ಬ್ರೇಕ್ ನೀಡಿತ್ತು. ಹಾಗಾಗಿ, ಈ ಜೊಡಿ ಅದೇ ನಿರೀಕ್ಷೆ ಇಟ್ಟುಕೊಂಡಿದೆ.
![Katrina Kaif feels the chills in Russia as she shoots for Tiger 3, shares video](https://etvbharatimages.akamaized.net/etvbharat/prod-images/e61b685df60927d2bd22a122b7623764_2207a_1626946219_323.jpg)
ಟೈಗರ್ 3ರಲ್ಲಿ ಸಲ್ಲು ಏಜೆಂಟ್ ಅವಿನಾಶ್ ಸಿಂಗ್ ರಾಥೋಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಕತ್ರಿನಾ ಕೈಫ್ ಮಹಿಳಾ ಅಧಿಕಾರಿಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ.