ಹೈದರಾಬಾದ್: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಿಂದಿ 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮವನ್ನು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದು, ಕಾರ್ಯಕ್ರಮ ಒಂದು ಸಾವಿರ ಸಂಚಿಕೆಗಳು ಪೂರ್ಣಗೊಳಿಸಿದೆ. ಇದೀಗ ಅದರ ಹೊಸ ಪ್ರೋಮೋ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಜಯಾ ಬಚ್ಚನ್ ಕಾಣಿಸಿಕೊಂಡಿದ್ದಾರೆ.
ಕೆಬಿಸಿ ಸೆಟ್‌ನಲ್ಲಿ ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಮುಖಾಮುಖಿಯಾಗಿದ್ದಾರೆ.ಈ ವಿಶೇಷ ಸಂಚಿಕೆಯಲ್ಲಿ ಜಯಾ ಬಚ್ಚನ್ ವರ್ಚುಯಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಿಗ್ ಬಿ ಕಾಲೆಳೆದಿದ್ದಾರೆ. ಈ ಕುರಿತಾದ ಹೊಸ ಪ್ರೋಮೋವನ್ನು ಸೋನಿ ಟಿವಿ ತಮ್ಮ ಇಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ.
ಇದರಲ್ಲಿ ಜಯಾ ಬಚ್ಚನ್ ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಬಿಗ್ ಬಿ ಬಗ್ಗೆ ಜಯಾ ದೂರಿದ್ದು, 'ನಾವು ಎಷ್ಟೇ ದೂರವಾಣಿ ಕರೆ ಮಾಡಿದರು ಫೋನ್ ಸ್ವೀಕರಿಸುವುದಿಲ್ಲ ಎನ್ನುತ್ತಾರೆ. ಇದಕ್ಕೆ ಬಿಗ್ ಬಿ ಪ್ರತಿಕ್ರಿಯಿಸಿ, ನನ್ನ ಫೋನ್ ನೆಟ್ವರ್ಕ್ ಹೋಗಿದೆ. ನಾನೇನು ಮಾಡಲಿ ಎಂದು ತಮಾಷೆಯಾಗಿ ಹೇಳಿದರು.
- " class="align-text-top noRightClick twitterSection" data="
">
ಆಗ ಕಾರ್ಯಕ್ರಮದಲ್ಲಿ ಭಾಗಿಯಾದ ಬಿಗ್ ಬಿ ಮಗಳು ಶ್ವೇತಾ ಮತ್ತು ಮೊಮ್ಮಗಳು ನವ್ಯಾ ನವೇಲಿ ಜಯಾ ಪರ ಮಾತನಾಡಿ, ಸೋಷಿಯಲ್ ಮಿಡಿಯಾಲ್ಲಿ ಫೋಟೋ, ವಿಡಿಯೋಗಳನ್ನು ಹಾಕುವಾಗ ಯಾವುದೇ ನೆಟ್ವರ್ಕ್ ಸಮಸ್ಯೆ ಇರುವುದಿಲ್ಲ ಎಂದು ತಮಾಷೆಯಾಗಿ ಬಿಗ್ ಬಿ ಕಾಲೆಳೆದರು.
ಬಿಗ್ ಬಿ ಅವರು ತಮ್ಮ ಕುಟುಂಬದೊಂದಿಗೆ ಕೆಬಿಸಿ(ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ)ಯ 1000 ನೇ ಸಂಚಿಕೆಯನ್ನು ಆಚರಿಸುತ್ತಿದ್ದು,ಈ ಸಂಚಿಕೆಯೂ ವೀಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಮಗದೊಂದು ಹೈಪ್ರೊಫೈಲ್ ಮದುವೆ; ಇದು ಸುಳ್ಳಾಗಲು ಸಾಧ್ಯವೇ?