ಈ ಎಲ್ಲ ಪ್ರಶ್ನೆಗಳಿಗೆ ಈ ಒಂದು ಫೋಟೋ ಉತ್ತರ ನೀಡುತ್ತಿದೆ. ಐಶ್ವರ್ಯ ರೈ ಬಚ್ಚನ್ ಇದೀಗ ಪತಿ ಅಭಿಷೇಕ್ ಬಚ್ಚನ್ ಜೊತೆಗೆ ಗೋವಾದ ಬೀಚ್ವೊಂದರಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ವೈರಲ್ ಆಗಿದೆ.
ಅಲ್ಲದೆ ಈ ಫೋಟೋ ನೋಡಿದ ಅಭಿಮಾನಿಗಳೆಲ್ಲ ಐಶು ಮತ್ತೇ ಪ್ರಗ್ನೆಂಟ್ ಆದ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳಲ್ಲಿ ಈ ಪ್ರಶ್ನೆ ಮೂಡಲೂ ಕಾರಣವು ಇದೆ..
ನಿನ್ನೆ ಸೆಲಬ್ರಿಟಿಗಳೆಲ್ಲ ಮುಂಬೈನಲ್ಲಿ ರಂಗಿನಾಟ ಆಡಿದರು. ಆದರೆ, ಐಶ್ ತಮ್ಮ ಪತಿ ಜತೆ ಗೋವಾ ಕಡಲ ತೀರದಲ್ಲಿ ಹೋಳಿ ಆಚರಿಸಿದರು. ಈ ವೇಳೆ ಅವರ ಫೋಟೋ ಒಂದು ಈಗ ಹೊಸ ಸುದ್ದಿಯೊಂದನ್ನ ಹೊತ್ತು ತಂದಿದೆ. ಅಭಿ ಜತೆ ಕಡಲ ತಡಿಯಲ್ಲಿ ವಾಕ್ ಮಾಡುತ್ತಿರುವ ಐಶ್, ಕೊಂಚ ದಪ್ಪ ಆದಂತಿದೆ. ಅವರು ಬೇಬಿ ಬಂಪ್ ಸ್ಪಷ್ಟವಾಗಿ ಫೋಟೋದಲ್ಲಿ ಕಾಣಿಸುತ್ತಿದೆ. ಇದೇ ಕಾರಣಕ್ಕೆ ನೆಟ್ಟಿಜನ್ಗಳೆಲ್ಲ ಕುತೂಹಲ ಭರಿತ ಪ್ರಶ್ನೆಗಳನ್ನು ಐಶ್ನತ್ತ ತೂರುತ್ತಿದ್ದಾರೆ.