ETV Bharat / sitara

ಸಂಜಯ್​ ದತ್​ ಅವರಿಗೆ ಕುಟುಂಬದೊಂದಿಗೆ ಇರಲು ಅವಕಾಶ ಕೊಡಿ: ಇರ್ಫಾನ್ ಖಾನ್ ಪುತ್ರ - ಸಂಜಯ್ ದತ್​ ಇರ್ಫಾನ್ ಖಾನ್ ಸ್ನೇಹ

ಸಂಜಯ್​ ದತ್​ಗೆ ತಮ್ಮ ಆರೋಗ್ಯ ಯುದ್ಧದಲ್ಲಿ ಒಬ್ಬಂಟಿಯಾಗಿ ಹೋರಾಡಲು ಅವಕಾಶ ಮಾಡಿಕೊಡಿ ಎಂದು ದಿ.ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್ ಮನವಿ ಮಾಡಿದ್ದಾರೆ.

babil khan on sanjay dutt health
ಬಾಬಿಲ್ ಖಾನ್ ಇನ್​ಸ್ಟಾಗ್ರಾಂ ಪೋಸ್ಟ್
author img

By

Published : Aug 20, 2020, 3:02 PM IST

ನವದೆಹಲಿ : ತಂದೆ ನಿಧನರಾದಾಗ ನಮ್ಮ ಕುಟುಂಬದ ಸಹಾಯಕ್ಕೆ ಬಂದವರಲ್ಲಿ ನಟ ಸಂಜಯ್​ ದತ್​ ಮೊದಲಿಗರು ಎಂದು ಬಾಲಿವುಡ್‌ ನಟ ಇರ್ಫಾನ್​ ಖಾನ್ ಪುತ್ರ ಬಾಬಿಲ್ ಖಾನ್ ಹೇಳಿದ್ದಾರೆ. ಇದರ ಜೊತೆಗೆ, ದತ್ ಅವರಿ​ಗೆ ತಮ್ಮ ಆರೋಗ್ಯ ಯುದ್ಧದಲ್ಲಿ ಒಬ್ಬಂಟಿಯಾಗಿ ಹೋರಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಇನ್​ಸ್ಟಾಗ್ರಾಂ ಪೋಸ್ಟ್​ ಹಾಕಿರುವ ಬಾಬಲ್​ ಖಾನ್, 2018ರಲ್ಲಿ ನಮ್ಮ ತಂದೆಗೆ ಕ್ಯಾನ್ಸರ್​ ಇರುವುದು ಪತ್ತೆಯಾದಾಗ ಎಲ್ಲ ರೀತಿಯಲ್ಲೂ ಸಹಾಯ ಮಾಡಿದವರಲ್ಲಿ ಅವರೂ​ ಕೂಡ ಒಬ್ಬರು. ಬಾಬಾ (ತಂದೆ) ನಿಧನರಾದ ಬಳಿಕ ದತ್ ನಮ್ಮ ಬೆನ್ನಿಗೆ ನಿಂತರು ಎಂದು ಬರೆದುಕೊಂಡಿದ್ದಾರೆ.

ಸಂಜಯ್​ ದತ್​ ಆರೋಗ್ಯ ಕುರಿತು ಹಲವು ಊಹಾಪೋಹಗಳು ಸೃಷ್ಟಿಯಾದ ಬಗ್ಗೆ ಬಾಬಿಲ್ ಬೇಸರ ವ್ಯಕ್ತಪಡಿಸಿದ್ದಾರೆ. ನಿಮ್ಮ ಕೆಲಸ ನನಗೆ ಗೊತ್ತಿದೆ. ಆದರೂ, ಮಾನವೀಯ ನೆಲೆಯಲ್ಲಿ ಸಂಜು ಭಾಯ್​ ಅವರಿಗೆ ಅವರ ಆರೋಗ್ಯ ವಿಚಾರವಾಗಿ ಹೋರಾಡಲು ಅವಕಾಶ ಕೊಡಿ. ತೊಂದರೆ ಕೊಡಬೇಡಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.