ಮುಂಬೈ: ಬಾಲಿವುಡ್ನಲ್ಲಿ ತಮ್ಮ ಫಿಟ್ನೆಸ್ ಮೂಲಕ ಮೋಡಿ ಮಾಡಿಡುವ ಪಿಂಕಿ, ಪಡೆ ಹುಡುಗರ ಹಾಟ್ ಫೇವರಿಟ್, ಸದ್ಯ ಲಾಕ್ಡೌನ್ನಿಂದ ಜಿಮ್ ಇಲ್ಲ ಅಂತ ಕುಳಿತವರಿಗೆ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಟಿಪ್ಸ್ ನೀಡಿದ್ದಾರೆ.
- " class="align-text-top noRightClick twitterSection" data="
">
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಪಿಂಕಿ, ಅದರಲ್ಲಿ ಬೆಡ್ ಮೇಲೆ ಮಲಗಿ ಡಂಬಲ್ಸ್ ಬದಲಿಗೆ ಪುಟ್ಟ ಯುವತಿಯನ್ನು ಎತ್ತಿ ರೆಪ್ಸ್ ಹೊಡೆಯುತ್ತಿದ್ದಾರೆ. ಅಲ್ಲದೆ ವಿಡಿಯೋಗೆ ಶೀರ್ಷಿಕೆ ನೀಡಿದ್ದು, 'ಜಿಮ್ ಇಲ್ಲ, ತೊಂದರೆ ಇಲ್ಲ' ಎಂದು ಬರೆದುಕೊಂಡಿದ್ದಾರೆ.
ಪತಿ ಪಾಪ್ ಗಾಯಕ ನಿಕಿ ಜೊನಸ್ ಜೊತೆ ಅಮೆರಿಕದಲ್ಲಿ ಉಳಿದುಕೊಂಡಿರುವ ನಟಿ ಇತ್ತೀಚಿಗಷ್ಟೆ ನೀಲಿ ಬಣ್ಣದ ಅದ್ಭುತ ಸೀರೆ ತೊಟ್ಟ ಚಿತ್ರವನ್ನು ಹಂಚಿಕೊಂಡಿದ್ದು ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿತ್ತು.