ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಇಂದು 55ನೇ ವಸಂತಕ್ಕೆ ಕಾಲಿಟ್ಟಿದ್ದು, ಮುಂಬೈನ ತಮ್ಮ ನಿವಾಸದಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ತೆರೆಯ ಮೇಲಿನ ಅಬ್ಬರದಿಂದ ಲಕ್ಷಾಂತರ ಮಂದಿಯ ಹೃದಯ ಗೆದ್ದಿರುವ ಸಲ್ಲು ಬಾಲಿವುಡ್‌ನಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ.
ಬಾಲಿವುಡ್‌ನ ಅತ್ಯಂತ ಗೌರವಾನ್ವಿತ ಮತ್ತು ಪ್ರೀತಿಯ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಸಲ್ಲು, ತಮ್ಮ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮುಂಬೈನ ಪನ್ವೇಲ್ನಲ್ಲಿ ನಡೆದ ಬರ್ತ್ ಡೇ ಸಂಭ್ರಮದಲ್ಲಿ ಹಲವು ಮಂದಿ ಭಾಗವಹಿಸಿದ್ದರು.
ಜಾಲತಾಣದಲ್ಲೂ ಕೂಡ ಸಲ್ಲು ಬರ್ತ್ ಡೇ ಸದ್ದು ಮಾಡುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಷಯ ತಿಳಿಸುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಚಲನಚಿತ್ರದ ತುಣುಕುಗಳು, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲು ಸದ್ದು ಮಾಡುತ್ತಿವೆ.
ಕೋವಿಡ್ ಕಾರಣದಿಂದಾಗಿ ಸರಳವಾಗಿ ಹುಟ್ಟುಹಬ್ಬ ಆಸರಿಸಿಕೊಳ್ಳುತ್ತಿರುವ ಸಲ್ಲು, ಮನೆ ಬಳಿ ಬಂದು ಗುಂಪು ಸೇರಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಸಲ್ಮಾನ್ ಖಾನ್ ಮನೆಯ ಗೇಟಿನ ಮುಂದೆ ದೊಡ್ಡ ನೋಟಿಸ್ ಅಂಟಿಸಲಾಗಿದ್ದು, ಅಭಿಮಾನಿಗಳು ಯಾರೂ ಸಹ ನನ್ನ ಹುಟ್ಟುಹಬ್ಬದಂದು ಮನೆಯ ಮುಂದೆ ಗುಂಪು ಸೇರಬೇಡಿ.
ಕೊರೊನಾ ಇರುವ ಕಾರಣ ನಿಮ್ಮ ಆರೋಗ್ಯದ ದೃಷ್ಟಿಯಿಂದಾಗಿ ಯಾರೂ ಸಹ ಮನೆಯ ಬಳಿ ಬಂದು ತೊಂದರೆಗೆ ಸಿಲುಕಬೇಡಿ ಎಂದು ಸಲ್ಮಾನ್ ಮನವಿ ಮಾಡಿದ್ದಾರೆ. ಸದ್ಯ ಸಲ್ಮಾನ್ ಖಾನ್ ನಟನೆಯ ರಾಧೆ ಸಿನಿಮಾ ಬಿಡುಗಡೆ ಆಗಬೇಕಿದೆ. ಈ ನಡುವೆ ಬಿಗ್‌ಬಾಸ್ 14 ನಿರೂಪಣೆ ಮಾಡುತ್ತಿದ್ದಾರೆ ಸಲ್ಮಾನ್ ಖಾನ್.