ETV Bharat / sitara

ದೇಶದಲ್ಲಿ ಭಿನ್ನಾಭಿಪ್ರಾಯಗಳನ್ನ ಸೃಷ್ಟಿಸುವವರಿಗೆ ಗಮನ ಕೊಡಬೇಡಿ : ಅಕ್ಷಯ್​-ಅಜಯ್​ ಕರೆ​ - ಸುನೀಲ್​ ಶೆಟ್ಟಿ

ಇದಕ್ಕೆ ಧ್ವನಿಗೂಡಿಸಿರುವ ನಟ ಅಜಯ್ ದೇವ್‌ಗನ್, ಭಾರತ ಅಥವಾ ಭಾರತೀಯ ನೀತಿಗಳ ವಿರುದ್ಧ ಯಾವುದೇ ಸುಳ್ಳು ಪ್ರಚಾರಕ್ಕೆ ಬಲಿಯಾಗಬೇಡಿ. ಯಾವುದೇ ಜಗಳವಿಲ್ಲದೇ ನಾವು ಒಗ್ಗಟ್ಟಿನಿಂದ ಇರಬೇಕು ಎಂದು ಟ್ವೀಟ್​ ಮಾಡಿದ್ದಾರೆ..

akshay-kumar
ನಟ ಅಕ್ಷಯ್​ ಕುಮಾರ್​
author img

By

Published : Feb 3, 2021, 9:46 PM IST

Updated : Feb 3, 2021, 10:51 PM IST

ನವದೆಹಲಿ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ವಿದೇಶಿ ಸೆಲೆಬ್ರಿಟಿಗಳು ಮಾಡಿರುವ ಟ್ವೀಟ್​ಗೆ ವಿರೋಧಿಸಿ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ.

akshay-kumar
ನಟ ಅಕ್ಷಯ್​ ಕುಮಾರ್​

ಪಾಪ್​ ತಾರೆ ರಿಹಾನಾ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್​ ಮಾಡಿದ್ದರು. ಇದನ್ನು ಆಕ್ಷೇಪಿಸಿ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿತ್ತು.

ಈ ಬಗ್ಗೆ ಟ್ವೀಟ್​ ಮಾಡಿರುವ ರೈತರು ಈ ದೇಶದ ಮುಖ್ಯ ಭಾಗವಾಗಿದ್ದಾರೆ. ರಾಷ್ಟ್ರದಲ್ಲಿ "ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವರಿಗೆ ಗಮನ ಕೊಡುವ ಬದಲು ಸೌಹಾರ್ದಯುತ ನಿರ್ಣಯವನ್ನು ಬೆಂಬಲಿಸಬೇಕೆಂದು ಹೇಳಿದ್ದಾರೆ.

ಇದಕ್ಕೆ ಧ್ವನಿಗೂಡಿಸಿರುವ ನಟ ಅಜಯ್ ದೇವ್‌ಗನ್, ಭಾರತ ಅಥವಾ ಭಾರತೀಯ ನೀತಿಗಳ ವಿರುದ್ಧ ಯಾವುದೇ ಸುಳ್ಳು ಪ್ರಚಾರಕ್ಕೆ ಬಲಿಯಾಗಬೇಡಿ. ಯಾವುದೇ ಜಗಳವಿಲ್ಲದೇ ನಾವು ಒಗ್ಗಟ್ಟಿನಿಂದ ಇರಬೇಕು ಎಂದು ಟ್ವೀಟ್​ ಮಾಡಿದ್ದಾರೆ.

ಮತ್ತೊಬ್ಬ ನಟ ಸುನೀಲ್​ ಶೆಟ್ಟಿ ಟ್ವೀಟ್​ ಮಾಡಿ, ನಾವು ಯಾವಾಗಲೂ ವಿಷಯಗಳ ಬಗ್ಗೆ ಸಮಗ್ರ ದೃಷ್ಟಿಕೋನ ಹೊಂದಿರಬೇಕು. ಯಾಕೆಂದರೆ, ಅರ್ಧ ಸತ್ಯಕ್ಕಿಂತ ಅಪಾಯಕಾರಿ ಏನೂ ಇಲ್ಲ. ದೇಶದ ಜನತೆ ಒಗ್ಗಟ್ಟಾಗಿರಬೇಕು ಎಂದು ಮನವಿ ಮಾಡಿದ್ದಾರೆ.

Last Updated : Feb 3, 2021, 10:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.