ETV Bharat / sitara

ಸೋಷಿಯಲ್ ಮೀಡಿಯಾದಲ್ಲಿ ಕಪ್ಪು-ಬಿಳುಪು ಕಾಳಗ...ನಾಲಿಗೆ ಹರಿಬಿಟ್ಟವರ ಬಾಯಿ ಮುಚ್ಚಿಸಿದ ಶಾರುಖ್​ ಫ್ಯಾನ್ಸ್​ - ಫ್ಯಾನ್ಸ್​

ಬಾಲಿವುಡ್ ನಟ ಶಾರುಖ್ ಖಾನ್​ ಹಾಗೂ ತಮಿಳು ಚಿತ್ರ ನಿರ್ದೇಶಕ ಅಟ್ಲೀ ಜತೆಗಿರುವ ಫೋಟೋ ಟ್ರೋಲ್ ಆಗಿದೆ. ಅಟ್ಲೀ ಮೈಬಣ್ಣ ಗುರಿಯಾಗಿಸಿ ಕಾಲೆಳೆಯಲಾಗಿದೆ.

ಚಿತ್ರ ಕೃಪೆ: ಸೋಷಿಯಲ್ ಮೀಡಿಯಾ
author img

By

Published : Apr 11, 2019, 1:17 PM IST

ಸೋಷಿಯಲ್ ಮೀಡಿಯಾ ಟ್ರೋಲಿಗರಿಗೆ ಲಂಗು-ಲಗಾಮು ಇರೋದಿಲ್ಲ. ಚಿಕ್ಕವರು-ದೊಡ್ಡವರು, ಒಳ್ಳೆಯದು-ಕೆಟ್ಟದ್ದು ಇದ್ಯಾವುದನ್ನೂ ನೋಡದೇ ನಾಲಿಗೆ ಹರಿಬಿಟ್ಟು ಟೀಕೆ ಮಾಡಿ ಬಿಡ್ತಾರೆ. ಇದೀಗ ಬಾಲಿವುಡ್ ನಟ ಶಾರುಖ್ ಖಾನ್​ ಹಾಗೂ ತಮಿಳು ಚಿತ್ರ ನಿರ್ದೇಶಕ ಅಟ್ಲೀ ಜತೆಗಿರುವ ಫೋಟೋ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

ಮೊನ್ನೆ ನಡೆದ ಚೆನ್ನೈ ಹಾಗೂ ಕೆಕೆಆರ್​ ಐಪಿಎಲ್ ಪಂದ್ಯ ವೀಕ್ಷಣೆಗೆ ಬಾದ್​ಷಾ ಜತೆ ಅಟ್ಲೀ ಕುಳಿತಿದ್ದರು. ಈ ತಾರೆಯರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಉಭಯ ಪ್ರತಿಭೆಗಳ ಅಪರೂಪದ ಸಮಾಗಮಕ್ಕೆ ಅಭಿಮಾನಿಗಳು ಖುಷಿಯಾಗಿದ್ದರು. ಆದರೆ, ಕೆಲವರು ಮಾತ್ರ ಈ ಚಿತ್ರದಲ್ಲಿ 'ಕಪ್ಪು' ಚುಕ್ಕೆ ಹುಡುಕಿ, ಟ್ರೋಲ್ ಮಾಡಿದ್ದಾರೆ. ಅಷ್ಟಕ್ಕೂ ಈ ಚಿತ್ರದಲ್ಲಿ ಟೀಕಾಕಾರರು ಟ್ರೋಲ್ ಮಾಡಿದ್ದು, ಅಟ್ಲೀ ಅವರ ಮೈಬಣ್ಣವನ್ನು.

ಈ ನಿರ್ದೇಶಕನ ಮೈಬಣ್ಣ ಕಪ್ಪು. ಶಾರುಖ್ ಅವರದು ಬೆಳ್ಳನೆಯ ಬಣ್ಣ. ಈ ಇಬ್ಬರು ಜತೆಯಾಗಿ ಕುಳಿತಿರುವುದನ್ನೇ ದೊಡ್ಡ ಪ್ರಮಾದ ಎನ್ನುವಂತೆ ನೆಟ್ಟಿಗರು ಬಿಂಬಿಸಿ ಟ್ರೋಲ್ ಮಾಡಿದ್ದಾರೆ.

ಟೀಕಾಕಾರರ ಮನಸ್ಥಿತಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಜತೆಗೆ ಅಟ್ಲೀ ಹಾಗೂ ಶಾರುಖ್ ಫ್ಯಾನ್ಸ್​ ಸೋಷಿಯಲ್ ಮೀಡಿಯಾ ಬಾಯ್ಬಡುಕರಿಗೆ ಸಖತ್ ಆಗಿಯೇ ತರಾಟೆ ತೆಗೆದುಕೊಂಡಿದ್ದಾರೆ. ಅವರು ಕಪ್ಪಗಿರಬಹುದು. ಆದರೆ, ದೇಶವೇ ಮೆಚ್ಚುವಂತ ಟ್ಯಾಲೆಂಟ್ ಹೊಂದಿದ್ದಾರೆ. ಅವರ ಕಠಿಣ ಪರಿಶ್ರಮದ ಫಲವಾಗಿ ಇಂದು ದೊಡ್ಡ ಸ್ಟಾರ್​ (ಶಾರುಖ್​) ಜತೆ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದಾರೆ. ಅದೇ ನೀವು (ಟ್ರೋಲಿಗರು) ಎಲ್ಲೋ ಮೂಲೆಯಲ್ಲಿ ಕುಳಿತು ಅವರನ್ನು ಟೀಕಿಸುತ್ತಿದ್ದೀರಾ. ಇದರ ಮೇಲೆ ನಿಮ್ಮ ಯೋಗ್ಯತೆ ಗೊತ್ತಾಗುತ್ತೆ. ಕಾಲು ಎಳೆಯೋರು ಕಾಲು ಕೆಳಗೆ ಇರ್ತಾರೆ ಎಂದು ಮಾತಿನ ಪೆಟ್ಟು ಕೊಟ್ಟಿದ್ದಾರೆ.

ಇನ್ನೊಂದೆಡೆ ಅಟ್ಲೀ ನಿರ್ದೇಶನದ ತಮಿಳು ಬ್ಲಾಕ್ ಬಸ್ಟರ್ ಮರ್ಸಲ್ ಚಿತ್ರವನ್ನು ಶಾರುಖ್ ಹಿಂದಿಗೆ ರಿಮೇಕ್ ಮಾಡಲಿದ್ದಾರೆ. ಈ ಚಿತ್ರಕ್ಕೂ ಅಟ್ಲೀ ಅವರೇ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಮಾತು ಕೆಲ ದಿನಗಳ ಹಿಂದೆ ಕೇಳಿ ಬಂದಿತ್ತು. ಇದೀಗ ಈ ನಿರ್ದೇಶಕ ಹಾಗೂ ಶಾರುಖ್ ಒಟ್ಟಿಗೆ ಕಾಣಿಸಿಕೊಂಡಿರುವುದು ಈ ಸುದ್ದಿಗೆ ಪುಷ್ಟಿ ನೀಡಿದೆ. ತಮಿಳು ನಟ ವಿಜಯ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಮರ್ಸಲ್ ಸೂಪರ್ ಹಿಟ್ ಆಗಿತ್ತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.