ETV Bharat / sitara

ನನಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ, ಈಗ ಆರೋಗ್ಯವಾಗಿದ್ದೇನೆ..ಹಿರಿಯ ಬಾಲಿವುಡ್ ನಟ ದಿಲೀಪ್ ಕುಮಾರ್ - Dilip Kumar health updates

ಅನಾರೋಗ್ಯದ ಕಾರಣ ಕಳೆದ ಕೆಲವು ದಿನಗಳಿಂದ ಮುಂಬೈ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ತಮ್ಮ ಆರೋಗ್ಯದ ಬಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್​​​​​ಡೇಟ್ ನೀಡಿದ್ದಾರೆ.

Dileep kumar
ದಿಲೀಪ್ ಕುಮಾರ್
author img

By

Published : Mar 17, 2020, 10:26 AM IST

ದೇಶಾದ್ಯಂತ ಜನರು ಕೊರೊನಾ ವೈರಸ್​​ಗೆ ಹೆದರಿ ಮನೆಯಿಂದ ಹೊರ ಹೋಗುವುದನ್ನೇ ನಿಲ್ಲಿಸಿದ್ದಾರೆ. ಪ್ರತಿ ದಿನ ಕೆಲವೊಂದು ರಾಜ್ಯಗಳಲ್ಲಿ ಹೊಸ ಕೊರೊನಾ ಶಂಕಿತ ಕೇಸ್​​​​​​​ಗಳು ವರದಿಯಾಗುತ್ತಿದೆ. ಕರ್ನಾಟಕದ ಕಲಬುರಗಿಯಲ್ಲಿ ಈಗಾಗಲೇ ವೃದ್ಧರೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆವರೆಗೂ ಭಾರತದಲ್ಲಿ ಸುಮಾರು 114 ಕೊರೊನಾ ಕೇಸ್​​​​​​ಗಳು ದಾಖಲಾಗಿವೆ.

ಪರಿಸ್ಥಿತಿ ಹೀಗಿರುವಾಗ ಅನಾರೋಗ್ಯದ ಕಾರಣ ಕಳೆದ ಕೆಲವು ದಿನಗಳಿಂದ ಮುಂಬೈ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ತಮ್ಮ ಆರೋಗ್ಯದ ಬಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್​​​​​ಡೇಟ್ ನೀಡಿದ್ದಾರೆ. ದಿಲೀಪ್​ ಕುಮಾರ್​​ ಅವರಿಗೆ 97 ವರ್ಷ ವಯಸ್ಸಾಗಿದೆ. ಕೊರೊನಾ ವೈರಸ್ ಹರಡದಂತೆ ನನಗೆ ಪ್ರತ್ಯೇಕ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ವೈದ್ಯರು ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ನನಗೆ ಕೊರೊನಾ ವೈರಸ್ ಬಾಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದಿಲೀಪ್ ಪತ್ನಿ ಸಾಯಿರಾ ಬಾನು ಕೂಡಾ ದಿಲೀಪ್ ಆರೋಗ್ಯವಾಗಿದ್ದಾರೆ ಅವರಿಗೆ ಕೊರೊನಾ ವೈರಸ್ ಹರಡಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ 'ನೀವೆಲ್ಲಾ ಕೊರೊನಾ ಬಗ್ಗೆ ಜಾಗೃತರಾಗಿರಿ, ನಿಮ್ಮನ್ನು ನೀವು ಕಾಪಾಡಿಕೊಳ್ಳಿ, ದೇಶದ ಗಡಿ ದಾಟಿ ಬಹುತೇಕ ಎಲ್ಲೆಡೆ ಕೊರೊನಾ ವೈರಸ್ ಹರಡಿದೆ, ಸರ್ಕಾರ ಹಾಗೂ ಆರೋಗ್ಯ ಇಲಾಖೆ ಸೂಚಿಸಿರುವ ಕ್ರಮಗಳನ್ನು ಫಾಲೋ ಮಾಡಿ, ಆದಷ್ಟು ಎಚ್ಚರಿಕೆಯಿಂದ ಇರಿ ಎಂದು ದಿಲೀಪ್ ತಮ್ಮ ಅಭಿಮಾನಿಗಳು ಹಾಗೂ ಫಾಲೋವರ್ಸ್​ಗಳಿಗೆ ಸೂಚನೆ ನೀಡಿದ್ದಾರೆ. ಈ ಮುನ್ನ ದಿಲೀಪ್ ಬೆನ್ನು ನೋವಿನಿಂದ ಬಳಲುತ್ತಿದ್ದರು. ಆದರೆ ಈಗ ಅದರಿಂದ ಗುಣಮುಖರಾಗಿದ್ದಾರೆ. ನಾವು ವೈದ್ಯರೊಂದಿಗೆ ಮಾತನಾಡಿದ್ದು ದಿಲೀಪ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ದಿಲೀಪ್ ಪತ್ನಿ ಸಾಯಿರಾ ಬಾನು ಹೇಳಿದ್ದಾರೆ. ಬಾಲಿವುಡ್​​​ನ ಟ್ರಾಜಿಡಿ ಕಿಂಗ್ ಎಂದೇ ಹೆಸರಾದ ದಿಲೀಪ್ ಕುಮಾರ್ ಅಂದಾಜ್, ಆನ್, ಮಧುಮತಿ, ದೇವದಾಸ್, ಮುಘಲ್ ಇ ಅಜಾಂನಂತ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.