ನಟಿ ದೀಪಿಕಾ ಪಡುಕೋಣೆ ರಣ್ವೀರ್ ಸಿಂಗ್ ಜತೆ ಮ್ಯಾರೇಜ್ ಮಾಡ್ಕೊಂಡು ಹಾಯಾಗಿ ಲೈಫ್ ಲೀಡ್ ಮಾಡ್ತಿದ್ದಾರೆ. ಆದರೆ, ಈ ಗಲ್ಲಿ ಬಾಯ್ ಜತೆ ಲವ್ನಲ್ಲಿ ಬೀಳೋ ಮುಂಚೆ ಡಿಪ್ಪಿ ರಣಬೀರ್ ಕಪೂರ್ ಜತೆ ಪ್ರೀತಿಯಲ್ಲಿದ್ದರೂ ಅನ್ನೋದು ಎಲ್ಲರಿಗೂ ಗೊತ್ತು.
ಕೆಲ ವರ್ಷಗಳ ಹಿಂದೆ ರಣಬೀರ್ ಜತೆ ಬ್ರೇಕಪ್ ಮಾಡಿಕೊಂಡಿದ್ದ ದೀಪಿಕಾ, ಆತನಿಂದ ದೂರವಾಗಿದ್ದಳು. ಆದರೆ, ಪ್ರೀತಿ ಇಲ್ಲದಿದ್ದರೇನಂತೆ ಸ್ನೇಹಿತರಾಗಿರೋಣ ಎಂದಿದ್ದ ಡಿಪ್ಪಿ ಫ್ರೆಂಡ್ಶೀಪ್ ಕಂಟಿನ್ಯೂ ಮಾಡಿದ್ದರು. ಈಗಲೂ ಕೂಡ ಗುಡ್ ಫ್ರೆಂಡ್ಸ್ ಆಗಿಯೇ ಮೂವ್ ಆಗ್ತಿದ್ದಾರೆ.
ಡಿಪ್ಪಿ, ಮೊನ್ನೆಯಷ್ಟೆ ನ್ಯೂಯಾರ್ಕ್ನಲ್ಲಿರುವ ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಹಾಗೂ ತಾಯಿ ನೀತು ಕಪೂರ್ ಅವರನ್ನು ಭೇಟಿಯಾಗಿದ್ದರು. ಕೆಲಹೊತ್ತು ಅವರೊಂದಿಗೆ ಕಳೆದು ಯೋಗಕ್ಷೇಮ ವಿಚಾರಿಸಿಕೊಂಡಿದ್ದರು. ತಮ್ಮ ಮನೆಗೆ ಬಂದ ದೀಪಿಕಾಗೆ ನೀತು ಬಂಗಾರದ ಬ್ರಾಸ್ಲೆಟ್ ಗಿಫ್ಟ್ ಮಾಡಿದ್ದಾರೆ. ಖುಷಿಯಿಂದಲೇ ಅದನ್ನು ಸ್ವೀಕರಿಸಿರುವ ಡಿಪ್ಪಿ, ತಮ್ಮ ಕೈಯಲ್ಲಿ ಧರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಜತೆಗೆ ಅದನ್ನು ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದಾರೆ.